ಮಾತಿನಂತೆ ನಾನೇ ಕೆಎಂಎಫ್‌ ಅಧ್ಯಕ್ಷ: ನಂಜೇಗೌಡ

| Published : Jul 31 2025, 12:45 AM IST

ಮಾತಿನಂತೆ ನಾನೇ ಕೆಎಂಎಫ್‌ ಅಧ್ಯಕ್ಷ: ನಂಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಭೀಮಾನಾಯ್ಕ್ ಅವರನ್ನು ಆಯ್ಕೆ ಮಾಡುವಾಗಲೇ ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತು ಕೊಟ್ಟಿದ್ದರು. ಹೀಗಾಗಿ ನಾನೇ ಕೆಎಂಎಫ್‌ ಅಧ್ಯಕ್ಷನಾಗುತ್ತೇನೆ ಎಂದು ಮಾಲೂರು ಶಾಸಕ ಕೆ.ವೈ. ನಂಜೇಗೌಡ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಭೀಮಾನಾಯ್ಕ್ ಅವರನ್ನು ಆಯ್ಕೆ ಮಾಡುವಾಗಲೇ ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತು ಕೊಟ್ಟಿದ್ದರು. ಹೀಗಾಗಿ ನಾನೇ ಕೆಎಂಎಫ್‌ ಅಧ್ಯಕ್ಷನಾಗುತ್ತೇನೆ ಎಂದು ಮಾಲೂರು ಶಾಸಕ ಕೆ.ವೈ. ನಂಜೇಗೌಡ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿ, ಕಳೆದ ಬಾರಿ ಭೀಮಾನಾಯ್ಕ್ ಅವರು ಅಧ್ಯಕ್ಷರಾಗುವಾಗಲೇ ನಾನು ಅಧ್ಯಕ್ಷ ಸ್ಥಾನ ಕೇಳಿದ್ದೆ. ನನಗೆ ಈ ಕ್ಷೇತ್ರದಲ್ಲಿ ಅನುಭವ ಇದೆ. ಹೀಗಾಗಿ ನನಗೆ ಅವಕಾಶ ಕೊಡಿ ಎಂದು ಮನವಿ ಮಾಡಿದ್ದೆ. ಆಗ ಭೀಮಾನಾಯ್ಕ್ ಅವರಿಗೆ ಮಾತು ಕೊಟ್ಟಿದ್ದೇವೆ ಈ ಒಂದು ವರ್ಷ ಸುಮ್ಮನಿರಿ ಎಂದು ಭರವಸೆ ನೀಡಿದ್ದರು.

ಆಗ ನನಗೆ ಮಾತು ಕೊಟ್ಟಿದ್ದರಿಂದ ಈ ಬಾರಿ ನಾನೇ ಅಧ್ಯಕ್ಷನಾಗುತ್ತೇನೆ. ರಾಘವೇಂದ್ರ ಹಿಟ್ನಾಳ್ ಅವರು ನನಗೆ ಅಡ್ಡ ಬರುವುದಿಲ್ಲ. ಅವರು ಅಡ್ಡ ಬಂದರೂ ಹೈಕಮಾಂಡ್ ತೀರ್ಮಾನವೇ ಅಂತಿಮ ಅಲ್ಲವೇ? ನಮಗೆ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರೇ ಇಲ್ಲಿ ಹೈಕಮಾಂಡ್‌. ಹೀಗಾಗಿ ನನಗೆ ಅಧ್ಯಕ್ಷ ಸ್ಥಾನ ಸಿಗಲಿದೆ ಎಂದು ನಂಜೇಗೌಡ ಹೇಳಿದರು.---

ಮೆಜಾರಿಟಿ ಮುಖ್ಯ: ಸತೀಶ್‌

ಯಾರ ಬಳಿ ಮತಗಳು ಹೆಚ್ಚಿವೆಯೋ ಅವರು ಅಧ್ಯಕ್ಷರಾಗುತ್ತಾರೆ. ಇದು ಪಕ್ಷದ ಚುನಾವಣೆಯಲ್ಲ. ಡಿ.ಕೆ.ಸುರೇಶ್ ಅವರು ಕಣಕ್ಕಿಳಿದರೂ ಇಲ್ಲಿ ಪಕ್ಷ ಬರುವುದಿಲ್ಲ. ಇದು ಸಹಕಾರಿ ರಂಗದ ಚುನಾವಣೆ. ಸರ್ಕಾರ ಇದ್ದಾಗ ಕೂಡ ವಿರೋಧಪಕ್ಷದವರು ಅಧ್ಯಕ್ಷರಾಗಿದ್ದಿದೆ. ಸರ್ಕಾರ ಯಾವುದೇ ಇದ್ದರೂ ಇಲ್ಲಿ ಮೆಜಾರಿಟಿ ಮುಖ್ಯವಾಗುತ್ತದೆ.

-ಸತೀಶ್‌ ಜಾರಕಿಹೊಳಿ, ಲೋಕೋಪಯೋಗಿ ಸಚಿವ.

---

ಸಿಎಂ ತೀರ್ಮಾನ ಆಯ್ಕೆ: ಡಿಕೆಸುಕನ್ನಡಪ್ರಭ ವಾರ್ತೆ ಚನ್ನಪಟ್ಟಣಹಾಲು ಒಕ್ಕೂಟಗಳ ನಿರ್ದೇಶಕರು, ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರು ಏನು ತೀರ್ಮಾನ ಮಾಡುತ್ತಾರೋ ಅದರಂತೆ ಕೆಎಂಎಫ್ ಅಧ್ಯಕ್ಷ ಸ್ಥಾನ ನಿರ್ಧಾರವಾಗಲಿದೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದ್ದಾರೆ.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಂಜೇಗೌಡರು ಹಿರಿಯ ಶಾಸಕರು. ಅವರು ಕೂಡ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದಾರೆ. ಈ ಹಿಂದೆ ಅಂದಿನ ರಾಜಕೀಯ ಸಂದರ್ಭದಲ್ಲಿ ನಾವು ಅವರಿಗೆ ಸಹಾಯ ಮಾಡಬೇಕೆಂದು ಹೇಳಿದ್ದೆವು. ಇಂದು ಎಲ್ಲರ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಇಲ್ಲಿ ಯಾರೂ ತರಾತುರಿಯಲ್ಲಿಲ್ಲ. ಸದ್ಯಕ್ಕೆ ನಾನು ಬಮುಲ್ ಅಧ್ಯಕ್ಷನಾಗಿ ಕೆಲಸ ಮಾಡುತ್ತಿದ್ದು, ಉಳಿದ ವಿಚಾರಗಳ ಬಗ್ಗೆ ದೊಡ್ಡ ನಾಯಕರನ್ನು ಕೇಳಿ ಎಂದು ಹೇಳಿದರು.ನೀವು ಕೆಎಂಎಫ್ ಸ್ಥಾನದ ಆಕಾಂಕ್ಷಿಯಾಗಿದ್ದೀರಾ? ಎಂಬ ಪ್ರಶ್ನೆಗೆ, ನಾನು ಯಾವುದಕ್ಕೂ ಆಕಾಂಕ್ಷಿಯಲ್ಲ. ಬಮೂಲ್‌ಗೂ ಆಕಾಂಕ್ಷಿಯಾಗಿರಲಿಲ್ಲ. ನಾಳೆಯೇ ರಾಜೀನಾಮೆ ನೀಡಲು ಹೇಳಿದರೆ ನೀಡಲು ಸಿದ್ಧ ಎಂದು ತಿಳಿಸಿದರು.