28ಕ್ಕೆ ಸಾಂಪ್ರದಾಯಿಕವಾಗಿ ನಡೆದ ಅಸಂತಾಪುರ ಯಲ್ಲಮ್ಮದೇವಿ ಜಾತ್ರೋತ್ಸವ

| Published : Feb 28 2024, 02:30 AM IST

28ಕ್ಕೆ ಸಾಂಪ್ರದಾಯಿಕವಾಗಿ ನಡೆದ ಅಸಂತಾಪುರ ಯಲ್ಲಮ್ಮದೇವಿ ಜಾತ್ರೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ: ದೇವರ ಹಿಪ್ಪರಗಿ ತಾಲೂಕಿನ ಅಸಂತಾಪುರ ಗ್ರಾಮದಲ್ಲಿ ರೇಣುಕಾ ದೇವಿ ಯಲ್ಲಮ್ಮನ ಪಲ್ಲಕ್ಕಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ ನಡೆಯಿತು. ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಈ ವೇಳೆ ಕಟ್ಟೆ, ಮಾಳಗಿ ಮೇಲೆ ನಿಂತು ಮಹಿಳೆಯರು ಮಕ್ಕಳು ಜಾತ್ರೆಯ ಸಂಭ್ರಮವನ್ನ ಕಣ್ತುಂಬಿಕೊಂಡರು.

ವಿಜಯಪುರ: ದೇವರ ಹಿಪ್ಪರಗಿ ತಾಲೂಕಿನ ಅಸಂತಾಪುರ ಗ್ರಾಮದಲ್ಲಿ ರೇಣುಕಾ ದೇವಿ ಯಲ್ಲಮ್ಮನ ಪಲ್ಲಕ್ಕಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ ನಡೆಯಿತು. ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಈ ವೇಳೆ ಕಟ್ಟೆ, ಮಾಳಗಿ ಮೇಲೆ ನಿಂತು ಮಹಿಳೆಯರು ಮಕ್ಕಳು ಜಾತ್ರೆಯ ಸಂಭ್ರಮವನ್ನ ಕಣ್ತುಂಬಿಕೊಂಡರು. ದೇವಸ್ಥಾನದಿಂದ ಗಂಗಾಸ್ಥಳಕ್ಕೆ ತೆರಳಿ ಅಲ್ಲಿಂದ ಡೊಳ್ಳು, ಹಲಿಗೆ, ವಾದ್ಯ ಮೇಳಗಳೊಂದಿಗೆ ಜೋಗತಿಯರ ಕುಣಿತದೊಂದಿಗೆ ಮರಳಿ ಪಲ್ಲಕ್ಕಿ ದೇವಸ್ಥಾನಕ್ಕೆ ಬಂದು ತಲುಪಿತು. ಡೊಳ್ಳಿನ ಗಾಯನ ಸಂಘಗಳು, ಜಾನಪದ ಕಲಾತಂಡ ಮೇಳಗಳು ಕಲಾ ಪ್ರದರ್ಶನ ನೀಡಿದವು.

ಜಾತ್ರಾ ಮಂಡಳಿಯ ಗುಂಡಯ್ಯ ಹಿರೇಮಠ, ಸಾಹೇಬಗೌಡ ಬಿರಾದಾರ, ಈರಯ್ಯ ಮಠ, ಸುಭಾಷ ದೇಸಾಯಿ, ಡಿ.ವೈ.ಪಾಟೀಲ, ರುದ್ರಗೌಡ ದೇಸಾಯಿ, ಬಂಗಾರಮ್ಮ ದೊಡಮನಿ, ಹಣಮಂತರಾಯಗೌಡ, ದೌಸಾಬ್ ಕೆಸರಟ್ಟಿ, ಈರಘಂಟೆಪ್ಪ ಛಲವಾದಿ, ಚಂದ್ರಶೇಖರ ಮಾದರ, ಶಾಂತಪ್ಪ ಬಡಿಗೇರ, ದಾವಲ್ ಕೆಸರೆಟ್ಟಿ, ಚೆನ್ನಮ್ಮ ನಾಗರೆಡ್ಡಿ ಮುಂತಾದವರು ಇದ್ದರು.