ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ಅಂತ್ಯ

| Published : Aug 15 2025, 01:00 AM IST

ಸಾರಾಂಶ

ರಾಜ್ಯ ಸರ್ಕಾರದ ತೀರ್ಮಾನ ನೋಡಿ ಮುಂದಿನ ಹಂತದ ಹೋರಾಟ ಕೈಗೊಳ್ಳಲಾಗುವುದೆಂದು ತಿಳಿಸುವ ಮೂಲಕ ಆಶಾ ಕಾರ್ಯಕರ್ತರು ಮೂರು ದಿನದ ಹೋರಾಟ ಅಂತ್ಯಗೊಳಿಸಿದರು.

ಕೊಪ್ಪಳ:

ಆಶಾ ಕಾರ್ಯಕರ್ತೆಯರ ಮಳೆ ನಡುವೆಯೂ ಅಶೋಕ ವೃತ್ತದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷ ಶರಣು ಗಡ್ಡಿ ಮಾತನಾಡಿ, ರಾಜ್ಯದ ಉದ್ದಗಲಕ್ಕೂ ರಾಜ್ಯ ಸರ್ಕಾರದ ನಿರ್ಲಿಪ್ತ, ನಿರ್ಲಕ್ಷ ಧೋರಣೆ ಖಂಡಿಸಿ ನಮ್ಮ ಹೋರಾಟಕ್ಕೆ ಬೆಂಬಲಿಸಿವೆ. ಇದೇ ರೀತಿ ಮುಂದೆಯೂ ಬೆಂಬಲಿಸಬೇಕೆಂದು ಮನವಿ ಮಾಡಿದರು.

ರಾಜ್ಯ ಸರ್ಕಾರದ ತೀರ್ಮಾನ ನೋಡಿ ಮುಂದಿನ ಹಂತದ ಹೋರಾಟ ಕೈಗೊಳ್ಳಲಾಗುವುದೆಂದು ತಿಳಿಸುವ ಮೂಲಕ ಮೂರು ದಿನದ ಹೋರಾಟ ಅಂತ್ಯಗೊಳಿಸಲಾಯಿತು.

ಧರಣಿ ಸ್ಥಳಕ್ಕೆ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ರೈತ ಸಂಘದ ಜಿಲ್ಲಾಧ್ಯಕ್ಷ ಭೀಮಸೇನ್ ಕಲಿಕೇರಿ, ಭರಮನಗೌಡ, ಗಂಗರಾಜ ಅಳ್ಳಳ್ಳಿ, ಶಾರದಾ ಗಡ್ಡಿ ಭೇಟಿ ನೀಡಿ ಹೋರಾಟ ಬೆಂಬಲಿಸಿದರು.

ಮಾನವ ಸರಪಳಿಯಲ್ಲಿ ಕೌಶಲ್ಯ ದೊಡ್ಡಗೌಡರ, ಶೋಭಾ ಹೂಗಾರ, ವಿಜಯಲಕ್ಷ್ಮಿ ಆಚಾರ್, ಅನ್ನಪೂರ್ಣ, ಶಿವಮ್ಮ, ಜ್ಯೋತಿ ಲಕ್ಷ್ಮಿ, ಶಬನ ಹುಲಿಗಿ, ದೀಪ,, ಲಾಲ್ ಬಿ, ಅಂಜಿನಮ್ಮ, ಶಾರದಾ, ಗೀತಾ, ಸಂಗೀತ, ರೇಖಾ, ಲಲಿತ ಹಿರೇಮಠ, ತಿಪ್ಪಮ್ಮ, ರಜಿಯಾ ಬೇಗಂ, ದ್ರಾಕ್ಷಾಯಿಣಿ, ರಾಧಾ, ಶರಣಮ್ಮ, ವಿಜಯಲಕ್ಷ್ಮಿ ಭಾಗ್ಯನಗರ, ಗಂಗಮ್ಮ, ಯಲ್ಲಮ್ಮ ಸೇರಿದಂತೆ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.