ಸಾರಾಂಶ
ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮುಂಡಗೋಡ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮುಂಡಗೋಡ: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಕೈಗೊಂಡಿರುವ ಮೂರು ದಿನಗಳ ಅಹೋರಾತ್ರಿ ಪ್ರತಿಭಟನಾ ಧರಣಿಗೆ ಬೆಂಬಲಿಸಿ ತಾಲೂಕಿನ ಆಶಾ ಕಾರ್ಯಕರ್ತೆಯರು ಬುಧವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮುಂಡಗೋಡ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ಸೇರಿಸಿ ಕನಿಷ್ಠ ₹೧೦೦೦೦ ಗೌರವಧನ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಮತ್ತು ಇದೇ ಬಜೆಟ್‌ನಲ್ಲಿ ₹೧೦೦೦ ಹೆಚ್ಚಳ ಮಾಡುವ ಆದೇಶ ಕೂಡಲೇ ನೀಡಬೇಕು ಹಾಗೂ ಜನಸಂಖ್ಯೆ ಮೌಲ್ಯಮಾಪನದ ಹೆಸರಿನಲ್ಲಿ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ಕೈಬಿಡುವ ಆತಂಕ ಸೃಷ್ಟಿಸಿರುವುದರ ವಿರುದ್ಧ ಎಐಯುಟಿಯುಸಿಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮಿತಿಯಿಂದ ಜಿಲ್ಲಾ ಮಟ್ಟದ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಪ್ರತಿಭಟನಾ ಧರಣಿ ಬೆಂಬಿಲಿಸುತ್ತೇವೆ. ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಸಮಿತಿ ಅಧ್ಯಕ್ಷೆ ಕಸ್ತೂರಿ ಸಂಗಮೇಶ್ವರ, ಉಪಾಧ್ಯಕ್ಷೆ ಗೀತಾ ಶೇಟ್, ಈರಮ್ಮ ವೀರಕ್ತಮಠ, ನಾಗರತ್ನ ಚಿಗಳ್ಳಿ, ಮಂಜುಳಾ ರವಳಪ್ಪನವರ, ಮಂಗಲಾ ಕೋಡಿಹಳ್ಳಿ, ಪಾರ್ವತಿ ಪಾಟೀಲ, ಗಂಗೂಬಾಯಿ ಪಟಾವಕರ, ವೀಣಾ ದಾಸರ, ಗಂಗಾ ಚಲವಾದಿ, ಲಕ್ಷ್ಮೀ ಕೊಪ್ಪರಸಿಕೊಪ್ಪ, ರೇಣುಕಾ ಪಾಟೀಲ, ಅನಿತಾ ಜಾಧವ ಮುಂತಾದವರು ಉಪಸ್ಥಿತರಿದ್ದರು.