ಸಾರಾಂಶ
ನಗರದ ಚಾಮಂಡೇಶ್ವರಿ ಪೂಜಾ ಸಮಿತಿಯಿಂದ ಕೊನೆಯ ಆಷಾಢ ಶುಕ್ರವಾರ ಹಾಗೂ ೨ನೇ ವರ್ಷದ ಆಷಾಡ ಶುಕ್ರವಾದ ಪೂಜಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದ ಚಾಮಂಡೇಶ್ವರಿ ಪೂಜಾ ಸಮಿತಿಯಿಂದ ಕೊನೆಯ ಆಷಾಢ ಶುಕ್ರವಾರ ಹಾಗೂ ೨ನೇ ವರ್ಷದ ಆಷಾಡ ಶುಕ್ರವಾದ ಪೂಜಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಮಾರಮ್ಮನ ದೇವಸ್ವಾನದ ಮುಂಭಾಗ ಚಾಮುಂಡೇಶ್ವರಿ ತಾಯಿಯ ಭಾವಚಿತ್ರ ಇಟ್ಟು ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿದ ನಂತರ ಸಾವಿರಾರು ಜನರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.ಪ್ರದೀಪ್‌ಕುಮಾರ್ ದೀಕ್ಷಿತ್ ವಿಶೇಷ ಪೂಜೆ ನೆರವೇರಿಸಿ, ಮಹಾಮಂಗಳಾರತಿ ಮಾಡಿದರು.
ಈ ಸಂದರ್ಭದಲ್ಲಿ ಪೂಜಾ ಸಮಿತಿಯ ಶ್ರೀಕಂಠಸ್ವಾಮಿ ಮಾತನಾಡಿ, ನಮ್ಮ ಸಮಿತಿ ವತಿಯಿಂದ ೨ನೇ ವರ್ಷದ ಆಷಾಡ ಶುಕ್ರವಾದ ಪೂಜಾ ಮಹೋತ್ಸವದ ಈ ದಿನ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಸುತ್ತಿದ್ದೇವೆ ಎಂದರು.ಈ ಶುಭ ಸಂದರ್ಭದಲ್ಲಿ ತಾಯಿಯು ಸಕಲರಿಗೂ ಸನ್ಮಂಗಳವನ್ನುಟು ಮಾಡಲಿ. ಮಳೆ ಬೆಳೆ ಆಗಿ ಸರ್ವರಿಗೂ ಒಳಿತಾಗಲಿ ಎಂದು ತಾಯಿಯಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ ಎಂದರು.ನಗರಸಭಾ ಅಧ್ಯಕ್ಷ ಸುರೇಶ್, ಪೂಜಾ ಸಮಿತಿಯ ಕೃಷ್ಣಕುಮಾರ್, ದರ್ಶನ್, ಮುಖಂಡರಾದ ಸುರೇಶ್‌ನಾಯಕ, ಮಂಜುನಾಥಗೌಡ, ಮೂಡ್ಲುಪುರ ನಂದೀಶ್ ಬಾಲಸುಬ್ರಹ್ಮಣ್ಯಂ, ಚಂದ್ರಶೇಖರ್ ಇತರರು ಇದ್ದರು.