ರಸ್ತೆ ಅಭಿವೃದ್ಧಿಗೆ ಅಶೋಕ ಪಟ್ಟಣ ಚಾಲನೆ

| Published : Nov 10 2024, 01:38 AM IST

ಸಾರಾಂಶ

ರಾಜ್ಯ ರಸ್ತೆ ಅಗಲೀಕರಣ ಮಾಡುವ ಮೂಲಕ ಹಲಗತ್ತಿ ಗ್ರಾಮವನ್ನು ಸೌಂದರ್ಯಯುತ ಮಾದರಿ ಗ್ರಾಮ ಮಾಡಲಾಗುವುದು ಎಂದು ವಿಧಾನ ಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ರಾಜ್ಯ ರಸ್ತೆ ಅಗಲೀಕರಣ ಮಾಡುವ ಮೂಲಕ ಹಲಗತ್ತಿ ಗ್ರಾಮವನ್ನು ಸೌಂದರ್ಯಯುತ ಮಾದರಿ ಗ್ರಾಮ ಮಾಡಲಾಗುವುದು ಎಂದು ವಿಧಾನ ಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.

ಹಲಗತ್ತಿಯಿಂದ ಮುದೇನೂರ ಮಧ್ಯದ ರಸ್ತೆಯನ್ನು ಅಂದಾಜು ₹4.60 ಕೋಟಿ ವೆಚ್ಚದಲ್ಲಿ ಅಗಲೀಕರಣ ಮತ್ತು ಅಭಿವೃದ್ಧಿ ಪಡಿಸುವ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಹಲಗತ್ತಿ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದರೆ ರಸ್ತೆ ಮಧ್ಯದಲ್ಲಿ ರಸ್ತೆ ವಿಭಜಕ ಅಳವಡಿಸಿ ಅಲಂಕಾರಿಕ ದೀಪಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.

ಹಲಗತ್ತಿ ಗ್ರಾಮದಲ್ಲಿ ರಾಜ್ಯ ರಸ್ತೆ ಬಹಳಷ್ಟು ಇಕ್ಕಟ್ಟಾಗಿದೆ. ರಸ್ತೆ ಅಗಲೀಕರಣದ ವೇಳೆ ತಂಟೆ ತಕರಾರು ಬಾರದಂತೆ ಗ್ರಾಮದ ಮುಖಂಡರು ನೋಡಿಕೊಳ್ಳಬೇಕು. ಅತಿಕ್ರಮಣ ಮಾಡಿಕೊಂಡಿದ್ದರೆ ಅತಿಕ್ರಮಣ ತೆರವುಗೊಳಿಸಿ ಕಾಮಗಾರಿಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಹಲಗತ್ತಿಯಿಂದ ಮುದೇನೂರ ತನಕ ರಸ್ತೆಯಲ್ಲಿ ಭಾರೀ ಗಾತ್ರದ ತಗ್ಗು ಗುಂಡಿಗಳು ಬಿದ್ದಿವೆ. ಇದರಿಂದ ದೂರದ ಬಸ್‌ಗಳನ್ನು ಓಡಿಸಲಾಗುತ್ತಿಲ್ಲ. ಅನಿವಾರ್ಯವಾಗಿ ಸ್ಥಾನಿಕ ಬಸ್‌ಗಳು ಹಾಳಾದ ರಸ್ತೆಯಲ್ಲಿಯೇ ಓಡಾಡುತ್ತಿವೆ. ಇದನ್ನು ದೂರ ಮಾಡಲು ಸರ್ಕಾರದ ಅನುದಾನ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಈ ವೇಳೆ ಬ್ಲಾಕ್‌ಕಾಂಗ್ರೆಸ್‌ಸಮಿತಿ ಅಧ್ಯಕ್ಷ ಜಿ.ಬಿ. ರಂಗನಗೌಡರ, ಗ್ರಾಮ ಪಂಚಾಯತಿ ಅಧ್ಯಕ್ಷೆ ಲಲಿತಾ ಹೂಗಾರ, ಬಸವರಾಜ ಮಡಿವಾಳರ, ಪ್ರಕಾಶ ಚಿಕ್ಕುಂಬಿ, ಬಸವರಾಜ ಬಿಸನಾಳ, ಮಂಜುನಾಥ ಮುಧೋಳ, ವೆಂಕಣ್ಣ ಮುಧೋಳ, ರವಿ ಗಲಬಿ, ಸುರೇಶ ನಂದೆಪ್ಪನವರ, ಹನಮಂತ ಹೂಗಾರ, ಲೋಕೋಪಯೋಗಿ ಎಇಇ ರವಿಕುಮಾರ ಇತರರು ಇದ್ದರು.