ದೇಶದ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ ಸಹಕಾರಿ:ಅಶ್ವಿನಿ ನಾಚಪ್ಪ

| Published : Jun 27 2024, 01:01 AM IST

ದೇಶದ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ ಸಹಕಾರಿ:ಅಶ್ವಿನಿ ನಾಚಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕ್ರೀಡಾಪಟುಗಳು ಹೊರ ಹೊಮ್ಮಲು ಕ್ರೀಡೆ ನೆರವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮೈಸೂರು ಪ್ರಾದೇಶಿಕ ಕೇಂದ್ರದ ಸಹಯೋಗದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿರುವ 25ನೇ ಅಂತರ ಕಾಲೇಜು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಬುಧವಾರ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ವರ್ಣರಂಜಿತವಾಗಿ ಚಾಲನೆ ನೀಡಲಾಯಿತು.

ಕ್ರೀಡಾಕೂಟಕ್ಕೆ ಅಂತಾರಾಷ್ಟ್ರೀಯ ಕ್ರೀಡಾಪಟು, ಅರ್ಜುನ ಪ್ರಶಸ್ತಿ ಪುರಸ್ಕೃತೆ ಅಶ್ವಿನಿ ನಾಚಪ್ಪ ಬಲೂನು ಹಾರಿ ಬಿಡುವ ಮೂಲಕ ಚಾಲನೆ ನೀಡಿದರು. ನಜರ್ ಬಾದ್ ಪೊಲೀಸ್ ಠಾಣೆಯ ಸತ್ಯಸಾಯಿ ಬಾಬಾ ದೇವಸ್ಥಾನದ ಎದುರಿನಿಂದ ತೆರೆದ ವಾಹನದಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕೃತೆ ಅಶ್ವಿನಿ ನಾಚಪ್ಪ, ವಿಟಿಯು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಅವರನ್ನು ಚಾಮುಂಡಿವಿಹಾರ ಕ್ರೀಡಾಂಗಣದ ಪ್ರವೇಶ ದ್ವಾರದವರೆಗೆ ಕ್ರೀಡಾಜ್ಯೋತಿಯ ಸಮೇತ ಮೆರವಣಿಗೆಯಲ್ಲಿ ಕರೆತರಲಾಯಿತು.

ಕ್ರೀಡಾ ಧ್ವಜಾರಹಣ:ಬಳಿಕ ಪ್ರವೇಶ ದ್ವಾರದಲ್ಲಿ ಬ್ಯಾಂಡ್ ಸದ್ದಿನೊಂದಿಗೆ ವೇದಿಕೆವರೆಗೆ ಕರೆದೊಯ್ಯಲಾಯಿತು. ಕ್ರೀಡಾ ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು, ಎಸ್ ಐಟಿ,ಮಹಾಜನ ಇಂಜಿನಿಯರಿಂಗ್ ಕಾಲೇಜು, ಬಿಎಂಎಸ್ ಇ, ಎಂಸಿಇ ಹಾಸನ, ಎಂಸಿಇ ,ಸೆಂಟ್ ಜೋಸೆಫ್ ಇಂಜಿನಿಯರಿಂಗ್, ಮಲೆನಾಡು ಇಂಜಿನಿಯರಿಂಗ್ ಕಾಲೇಜು, ಎಐಟಿ, ಎಜಿಎಂ ಕಾಲೇಜು, ಬಳ್ಳಾರಿ ಎಂಜಿನಿಯರಿಂಗ್ ಮ್ಯಾನೇಜ್ಮೆಂಟ್ ಕಾಲೇಜು, ಕೆ.ಆರ್. ಪೇಟೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಚಾಮರಾಜನಗರ ಇಂಜಿನಿಯರಿಂಗ್ ಕಾಲೇಜು, ಬಿಜಿಎಂ ಕಾಲೇಜು, ಆಚಾರ್ಯ ಇಂಜಿನಿಯರಿಂಗ್ ಕಾಲೇಜು, ಕಲಬುರಗಿ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು ಬಿಜಿಎಸ್ ಕಾಲೇಜು, ಬಿಡಿಐ ಕಾಲೇಜು, ಆದಿಚುಂಚನಗಿರಿ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜು, ಆಳ್ವಾ ಇಂಜಿನಿಯರಿಂಗ್ ಕಾಲೇಜು, ಕೆವಿಜಿಸಿ ಕಾಲೇಜು, ಮಹಾರಾಜ ತಾಂತ್ರಿಕ ಕಾಲೇಜು, ಉಜಿರೆ ಇಂಜಿನಿಯರಿಂಗ್ ಕಾಲೇಜು, ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು, ಎಂಐಟಿ ಮೈಸೂರು, ಪಿಎಸ್ ಐ ಶಿವಮೊಗ್ಗ, ಸಿಟಿ ಇಜಿನಿಯರಿಂಗ್ ಕಾಲೇಜು, ಬಿಜಿಎಂಐಟಿ ಮುಧೋಳ, ಕೆಎಲ್ಇ ಇನ್ ಸ್ಟಿಟ್ಯೂಟ್ ಟೆಕ್ನಾಲಜಿ, ಬಾಬೂಜಿ ಇನ್ ಸ್ಟಿಟ್ಯೂಟ್ ಟೆಕ್ನಾಲಜಿ, ಕೆಎಲ್ ಇಸಿ ಟೆಕ್ನಾಲಜಿ, ಶ್ರೀದೇವಿ ಟೆಕ್ನಾಲಜಿ, ಪಿಇಎಸ್ ಕಾಲೇಜು, ರಾವ್ ಬಹದ್ದೂರ್ ಮಹಾಬಲೇಶ್ವರ ಕಾಲೇಜು, ವೇಮನ ಬೆಂಗಳೂರು ಕಾಲೇಜು, ದಯಾನಂದ ಸಾಗರ ಇಂಜಿನಿಯರಿಂಗ್ಕಾಲೇಜು, ಕೆಎಸ್ಐಟಿ ಕಾಲೇಜು, ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು, ಸಂಪೂರ್ಣ ಕಾಲೇಜು, ಎನ್.ಐ.ಇ ಕಾಲೇಜು, ಸಾಯಿರಾಮ್ ಇಂಜಿನಿಯರಿಂಗ್ಕಾಲೇಜು, ವಿಟಿಯು ಬೆಳಗಾವಿ, ವಿಟಿಯು ಮೈಸೂರು ಪ್ರಾದೇಶಿಕ ಕೇಂದ್ರದ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು.

ದೇಶದ ಬೆಳವಣಿಗೆಗೆ ಸಹಕಾರ:

ಬಳಿಕ ಅಶ್ವಿನಿ ನಾಚಪ್ಪ ಅವರು ಬಲೂನು ಹಾರಿ ಬಿಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ದೇಶದ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆ ಸಹಕಾರಿ ಆಗಿದೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕ್ರೀಡಾಪಟುಗಳು ಹೊರ ಹೊಮ್ಮಲು ಕ್ರೀಡೆ ನೆರವಾಗಿದೆ. ಕ್ರೀಡೆಗಳಿಗೆ ಕೇಂದ್ರ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿರುವುದು ಸಂತಸದ ವಿಷಯ. ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಸಿಗಬೇಕು. ವಿಶ್ವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಬೇಕು ಎಂದರು.

ಸಾಧಿಸುವ ಛಲ ಇದ್ದರೆ ಗುರಿ ತಲುಪಬಹುದು. ಆದ್ದರಿಂದ ಕ್ರೀಡೆಯಲ್ಲಿ ಗುರಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಸೋಲು-ಗೆಲುವು ಸಹಜವಾದರೂ ಕ್ರೀಡೆಯಲ್ಲಿ ಪಾಲ್ಗೊಳ್ಳವುದು ಮುಖ್ಯ. ಮೈಸೂರಿನಲ್ಲಿ ನಡೆಯುತ್ತಿರುವ ವಿಟಿಯುನ ನಾಲ್ಕು ದಿನಗಳ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನಡೆಯಲಿ ಎಂದು ಆಶಿಸಿದರು

ವಿಟಿಯು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಮಾತನಾಡಿ, ನಾಲ್ಕು ದಿನಗಳ ಕ್ರೀಡಾಕೂಟದಲ್ಲಿ 128 ಕಾಲೇಜುಗಳಿಂದ 1500ಕ್ಕೂ ಹೆಚ್ಚುಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ. ಅವರು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನ ಗಳಿಸಬೇಕು. ಕಳೆದ ಬಾರಿ ಚಾಂಪಿಯನ್ ಆಗಿದ್ದ ತಂಡಗಳು, ವಿವಿಧ ಕಡೆಗಳಲ್ಲಿ ನಡೆದ ಕ್ರೀಡೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕಾರಿ ಮಂಡಳಿ ಸದಸ್ಯರಾದ ದಿಲೀಪ್ ಕೃಷ್ಣ, ಸುನಿಲ್ ರಾಜ್, ಶಿವಕುಮಾರಸ್ವಾಮಿ, ಸೆನೆಟ್ ಸದಸ್ಯ ಡಾ.ಕೃಷ್ಣೇಗೌಡ, ಕುಲಸಚಿವ ಪ್ರೊ.ಬಿ.ಇ. ರಂಗಸ್ವಾಮಿ, ಪರೀಕ್ಷಾಂಗ ಕುಲಸಚಿವ ಪ್ರೊ.ಟಿ.ಎನ್. ಶ್ರೀನಿವಾಸ, ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಟಿ.ಪಿ. ರೇಣುಕಾಮೂರ್ತಿ, ಹಣಕಾಸು ಅಧಿಕಾರಿ ಎಂ.ಎ. ಸಪ್ನಾ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ವಿ. ಕಡಗದ್ಕೈ ಇದ್ದರು.