ಕಾಪು ಮಾರಿಗುಡಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಭೇಟಿ

| Published : Jul 11 2025, 11:48 PM IST

ಸಾರಾಂಶ

ಮಾರಿಗುಡಿ ಇತ್ತೀಚೆಗೆ ಸಂಪೂರ್ಣವಾಗಿ ಶಿಲಾಮಯವಾಗಿ ನವೀಕರಣಗೊಂಡಿದೆ. ಮೂರು ತಿಂಗಳ ಹಿಂದೆ ಇಲ್ಲಿಗೆ ಬಂದಿದ್ದ ಅಶ್ವಿನಿ ಅವರು ನವದುರ್ಗಾ ಶ್ಲೋಕಗಳನ್ನು ಬರೆದು ದೇವಿಗೆ ಸಮರ್ಪಿಸಿದ್ದರು.

ಕನ್ನಡಪ್ರಭ ವಾರ್ತೆ ಉಡುಪಿ ಇಲ್ಲಿನ ಕಾಪುವಿನ ಹೊಸ‌ ಮಾರಿಗುಡಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಶುಕ್ರವಾರ ಭೇಟಿ ನೀಡಿದರು. ಮಗಳು ವಂದಿತಾಳೊಂದಿಗೆ ಬಂದಿದ್ದ ಅಶ್ವಿನಿ, ಮಾರಿಯಮ್ಮನ ದರ್ಶನ ಪಡೆದು ಪೂಜೆ ಸಲ್ಲಿಸಿದರು.ಮಾರಿಗುಡಿ ಇತ್ತೀಚೆಗೆ ಸಂಪೂರ್ಣವಾಗಿ ಶಿಲಾಮಯವಾಗಿ ನವೀಕರಣಗೊಂಡಿದೆ. ಮೂರು ತಿಂಗಳ ಹಿಂದೆ ಇಲ್ಲಿಗೆ ಬಂದಿದ್ದ ಅಶ್ವಿನಿ ಅವರು ನವದುರ್ಗಾ ಶ್ಲೋಕಗಳನ್ನು ಬರೆದು ದೇವಿಗೆ ಸಮರ್ಪಿಸಿದ್ದರು. ಇದೀಗ ಮತ್ತೊಮ್ಮೆ ಮಗಳೊಂದಿಗೆ ಬಂದ ಅವರು ಮಾರಿಯಮ್ಮನ ಚಿನ್ನದ ವಿಗ್ರಹರೂಪವನ್ನು ಕಂಡು, ಇಲ್ಲಿನ ದೇವಿಯ ಮುಖದಲ್ಲಿರುವ ಕಳೆಯನ್ನು ನೋಡುವಾಗ ಮನಸ್ಸಿಗೆ ಆನಂದ ಸಿಗುತ್ತದೆ. ಹಿಂದೆ ನೋಡಿದ್ದು ದೇವಿಯ ಮುಖ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿದೆ ಎಂದು ಸಂತಸ ವ್ಯಕ್ತಪಡಿಸಿದರು.ದೇ‍ವಳದ ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯಾ ಅವರು ಪೂಜೆ ನೆರವೇರಿಸಿ ಪ್ರಸಾದವನ್ನು ಹಸ್ತಾಂತರಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ಅಶ್ವಿನಿ ಅವರನ್ನು ಗೌರವಿಸಿದರು.