ಏಷ್ಯನ್‌ ಓಪನ್‌ ಟೇಕ್ವಾಂಡೋ: ದೊಡ್ಡಬಳ್ಳಾಪುರಕ್ಕೆ 36 ಪದಕ

| Published : Sep 21 2025, 02:00 AM IST

ಏಷ್ಯನ್‌ ಓಪನ್‌ ಟೇಕ್ವಾಂಡೋ: ದೊಡ್ಡಬಳ್ಳಾಪುರಕ್ಕೆ 36 ಪದಕ
Share this Article
  • FB
  • TW
  • Linkdin
  • Email

ಸಾರಾಂಶ

ಸಬ್‌ಜೂನಿಯರ್‌ 8 ರಿಂದ 11 ವರ್ಷದೊಳಗಿನ ವಿಭಾಗದಲ್ಲಿ ಡಿ.ಯು ನಂದನ್‌- 2 ಹಾಗೂ ಎಸ್‌.ವರ್ಷನ್‌ ತಲಾ 2 ಚಿನ್ನ, ಆರ್‌.ಹೃತಿಕ್‌ 1 ಚಿನ್ನ, 1 ಬೆಳ್ಳಿ, ಎಸ್.ದೀಕ್ಷಿತ್‌- 1 ಚಿನ್ನ, 1 ಕಂಚು, ಮನ್ವಿತ್‌ ಗೌಡ- 2 ಚಿನ್ನ, ಕೆ.ವೈ ಪರೀಕ್ಷಿತ್‌- 2 ಚಿನ್ನ, ಬಾಲಕಿಯರ ವಿಭಾಗದಲ್ಲಿ ಚಿನ್ಮಯಿ- 2 ಚಿನ್ನ, ಪಿ.ದೀಕ್ಷಾ - 1 ಬೆಳ್ಳಿ, 1 ಚಿನ್ನ, ಆರ್.ತಮನ್ನಾ- 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ದೊಡ್ಡಬಳ್ಳಾಪುರ: ಹೈದರಾಬಾದ್‌ನಲ್ಲಿ ನಡೆದ ಮೊದಲ ಏಷ್ಯನ್‌ ಓಪನ್‌ ಅಂತಾರಾಷ್ಟ್ರೀಯ ಟೇಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಇಲ್ಲಿನ ಶಂಕರ್‌ ಟೇಕ್ವಾಂಡೋ ಅಕಾಡೆಮಿ ಹಾಗೂ ನ್ಯಾಷನಲ್‌ ಪ್ರೈಡ್‌ ಶಾಲೆಯಿಂದ ಪಾಲ್ಗೊಂಡಿದ್ದ ಹಲವು ಕ್ರೀಡಾಪಟುಗಳು 31 ಚಿನ್ನ, 4 ಬೆಳ್ಳಿ ಹಾಗೂ 1 ಕಂಚಿನ ಪದಕ ಸೇರಿ ಒಟ್ಟಾರೆ 36 ಪದಕಗಳನ್ನು ಪಡೆದಿದ್ದಾರೆ.

ಸಬ್‌ಜೂನಿಯರ್‌ 8 ರಿಂದ 11 ವರ್ಷದೊಳಗಿನ ವಿಭಾಗದಲ್ಲಿ ಡಿ.ಯು ನಂದನ್‌- 2 ಹಾಗೂ ಎಸ್‌.ವರ್ಷನ್‌ ತಲಾ 2 ಚಿನ್ನ, ಆರ್‌.ಹೃತಿಕ್‌ 1 ಚಿನ್ನ, 1 ಬೆಳ್ಳಿ, ಎಸ್.ದೀಕ್ಷಿತ್‌- 1 ಚಿನ್ನ, 1 ಕಂಚು, ಮನ್ವಿತ್‌ ಗೌಡ- 2 ಚಿನ್ನ, ಕೆ.ವೈ ಪರೀಕ್ಷಿತ್‌- 2 ಚಿನ್ನ, ಬಾಲಕಿಯರ ವಿಭಾಗದಲ್ಲಿ ಚಿನ್ಮಯಿ- 2 ಚಿನ್ನ, ಪಿ.ದೀಕ್ಷಾ - 1 ಬೆಳ್ಳಿ, 1 ಚಿನ್ನ, ಆರ್.ತಮನ್ನಾ- 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

12ರಿಂದ 14 ವರ್ಷದೊಳಗಿನವರ ವಿಭಾಗದಲ್ಲಿ ಕೆ.ವೈ.ವಿಶಾಲ್‌ - 2 ಚಿನ್ನ, ತುಷಾರ್‌ ಸಾಯಿ ಯಾದವ್‌- 2 ಚಿನ್ನ, ಪುರುಷರ ಜೂನಿಯರ್‌ 15 ರಿಂದ 17 ವರ್ಷದೊಳಗಿನ ವಿಭಾಗದಲ್ಲಿ ಜಾಶನ್‌ - 2 ಚಿನ್ನ, ಮಿನಿ ಸಬ್‌ ಜೂನಿಯರ್‌ 5 ರಿಂದ 7 ವರ್ಷದೊಳಗಿನ ವಿಭಾಗದಲ್ಲಿ ಜಿ.ಯುಗಾಂತ್‌- 2 ಚಿನ್ನ, ವಿಕ್ರಾಂತ್‌ಗೌಡ- 2 ಚಿನ್ನ, ವೈ.ಎ.ಆಯುಷ್‌ಗೌಡ- 1 ಚಿನ್ನ, 1 ಬೆಳ್ಳಿ, ಎಸ್.ಹೇಮಂತ್‌ - 1 ಚಿನ್ನ, 1 ಬೆಳ್ಳಿ, ಬಾಲಕಿಯರ ವಿಭಾಗದಲ್ಲಿ ಶೃತಿ - 2 ಚಿನ್ನ, ಎಸ್.ಶಾನ್ವಿ- 2 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಪದಕ ವಿಜೇತರನ್ನು ಬೆಂ.ಗ್ರಾ ಜಿಲ್ಲಾ ಕರ್ನಾಟಕ ಟೇಕ್ವಾಂಡೋ ಅಕಾಡೆಮಿ ಉಪಾಧ್ಯಕ್ಷ ವಿ.ನಾರಾಯಣಸ್ವಾಮಿ, ಶಂಕರ್‌ ಟೇಕ್ವಾಂಡೋ ಅಕಾಡೆಮಿ ಅಧ್ಯಕ್ಷ ಜಿ.ಸಿ.ರಮೇಶ್, ತರಬೇತುದಾರರಾದ ಆರ್.ಶಂಕರ್‌, ಆರ್.ರಮ್ಯ ಮತ್ತಿತರರು ಅಭಿನಂದಿಸಿದ್ದಾರೆ.