ದೇವರ, ಸ್ವಾಮೀಜಿಗಳ ಭಾವಚಿತ್ರ ನೀಡಿ ಮತಯಾಚನೆ

| Published : Apr 30 2024, 02:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ: ಅಥಣಿ ಕ್ಷೇತ್ರದಲ್ಲಿ ಮುರುಘೇಂದ್ರ ಶಿವಯೋಗಿಗಳ ಮತ್ತು ಮೌನಯೋಗಿ ಮರುಳಶಂಕರ ದೇವರ ಹಾಗೂ ಬಸವೇಶ್ವರ ಭಾವಚಿತ್ರಗಳನ್ನು ನೀಡುವ ಮೂಲಕ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ನರೇಂದ್ರ ಮೋದಿ ಅವರಿಗೆ ಮತ ನೀಡುವಂತೆ ಮೋದಿ ಟಿಮ್‌ ಕಾರ್ಯಕರ್ತರು ಮನವಿ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಅಥಣಿಅಥಣಿ ಕ್ಷೇತ್ರದಲ್ಲಿ ಮುರುಘೇಂದ್ರ ಶಿವಯೋಗಿಗಳ ಮತ್ತು ಮೌನಯೋಗಿ ಮರುಳಶಂಕರ ದೇವರ ಹಾಗೂ ಬಸವೇಶ್ವರ ಭಾವಚಿತ್ರಗಳನ್ನು ನೀಡುವ ಮೂಲಕ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹಾಗೂ ನರೇಂದ್ರ ಮೋದಿ ಅವರಿಗೆ ಮತ ನೀಡುವಂತೆ ಮೋದಿ ಟಿಮ್‌ ಕಾರ್ಯಕರ್ತರು ಮನವಿ ಮಾಡುತ್ತಿದ್ದಾರೆ.

ಮುಖಂಡ ಸಂಪತಕುಮಾರ ಶೆಟ್ಟಿ ಮಾತನಾಡಿ, ಈ ಭಾಗದ ದೇವರುಗಳಾದ ಮುರುಘೇಂದ್ರ ಶಿವಯೋಗಿಗಳ ಮತ್ತು ಮೌನಯೋಗಿ ಮರುಳಶಂಕರ ದೇವರ ಮತ್ತು ಹಣಮಂತ ದೇವರ ಫೋಟೋಗಳನ್ನು ಕೊಡುವಾಗ ಅವರಲ್ಲಿ ಭಕ್ತಿ ಶ್ರದ್ಧೆ ತಾನಾಗಿ ಅರಳುತ್ತದೆ ಎಂದರು.

ನರೇಂದ್ರ ಮೋದಿ ಪ್ರಧಾನಿಯಾಗಬೇಕು. ಭಾರತ ವಿಶ್ವಗುರು ಸ್ಥಾನದಲ್ಲಿ ನಿಲ್ಲಬೇಕು. ಅವರ ಸಾಧನೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಸಂಘಟನೆ ಉದ್ದೇಶವಾಗಿದೆ. ಅಭ್ಯರ್ಥಿ ಯಾರು ಮುಖ್ಯವಲ್ಲ. ನಮಗೆ ಮೋದಿ ಮುಖ್ಯ ಎಂದು ತಿಳಿಸಿದರು.

ಈ ಸಮಯದಲ್ಲಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಚಿತ ತೋಡಕರ, ವಿನಯ ಪಾಟೀಲ, ಮಹಾಂತೇಶ ಮಾಳಿ, ಸ್ವಾಗತ ತೋರಿ, ಅಮೃತ ಮಹಾಜನ, ರವಿ ಹಿರೇಮಠ, ಅಭಯ ಸಗರೆ, ಜಯದೇವ ಯಲ್ಲಟ್ಟಿ, ಚಂದ್ರ ನಾಯಕ, ಸತೀಶ ಪಾಟೀಲ, ಗೀತಾ ತೋರಿ ಇದ್ದರು.