ಸಾರಾಂಶ
ಮುಳಬಾಗಿಲು ತಾಲೂಕಿನಲ್ಲಿ ಎಲ್ಲಿ ಭೇಟಿ ನೀಡಿದರೂ ವಸತಿ ಸೌಲಭ್ಯಗಳನ್ನು ಕೇಳುತ್ತಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ೨ ಸಾವಿರ ಮನೆಗಳನ್ನು ಸರ್ಕಾರದಿಂದ ಹಾಕಿಸಿಕೊಂಡು ಬರಲಾಗುತ್ತದೆ, ಸಾರ್ವಜನಿಕರ ಸಮಸ್ಯೆಗಳನ್ನು ತಿಳಿಯಲು ಪ್ರತಿ ಮಂಗಳವಾರ ಶಾಸಕರ ಕಚೇರಿಯಲ್ಲಿ ಇದ್ದು ಜನರ ಅಹವಾಲುಗಳಿಗೆ ಸ್ಪಂದಿಸಲಾಗುವುದು
ಕನ್ನಡಪ್ರಭ ವಾರ್ತೆ ಮುಳಬಾಗಿಲುಅಧಿವೇಶನಗಳಲ್ಲಿ ತಾಲೂಕಿನ ಸಮಸ್ಯೆಗಳ ಬಗ್ಗೆ ಪದೇ ಪದೇ ಪ್ರಶ್ನೆ ಮಾಡುವುದನ್ನು ಅರಿತುಕೊಂಡು ಎಲ್ಲಾ ಇಲಾಖೆಗಳು ಅವರಾಗಿ ಅವರೇ ಕರೆದು ನನಗೆ ಅನುದಾನ ಮಂಜೂರು ಮಾಡುತ್ತಿದ್ದಾರೆ. ಇದರಿಂದ ಶೀಘ್ರದಲ್ಲೇ ತಾಲೂಕಿನಲ್ಲಿ ೭೫ ಕಿಮೀ ರಸ್ತೆ ಡಾಂಬರೀಕರಣ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಸಮೃದ್ಧಿ ಮಂಜುನಾಥ್ ತಿಳಿಸಿದರು.ತಾಲೂಕಿನ ಶಾಸಕರ ಸಾಯಿ ಕುಟೀರದಲ್ಲಿ ಪಂಚಾಯಿತಿ ಮಟ್ಟದ ಮುಖಂಡರ ಸಭೆಯಲ್ಲಿ ಮಾತನಾಡಿ, ತಾಲೂಕಿನ ಕೆರೆಗಳಿಗೆ ಕೆ ಸಿ ವ್ಯಾಲಿ ನೀರು ತುಂಬಿಸುವ ಕಾರ್ಯ ಪ್ರಾರಂಭವಾಗಿದೆ ಹಾಗೂ ನಂಗಲಿಯಲ್ಲಿ ೨೪/೭ ಸಿ.ಎಚ್.ಸಿ ಆಸ್ಪತ್ರೆ, ಮುಳಬಾಗಿಲು ನಗರದ ನರಸಿಂಹ ತೀರ್ಥದ ಬಳಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಾಮಗಾರಿಗಳು ನಡೆಯುತ್ತಿದ್ದು, ಏಪ್ರಿಲ್‌ನಲ್ಲಿ ನಗರದಲ್ಲಿ ೨೫ ಕೋಟಿ ರೂಗಳ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ಕಾಮಗಾರಿ ನಡೆಯಲಿದೆ ಎಂದು ಹೇಳಿದರು.ಎರಡು ಸಾವಿರ ಮನೆ ನಿರ್ಮಾಣ
ಗ್ರಾಮಗಳಿಗೆ ಎಲ್ಲಿ ಭೇಟಿ ನೀಡಿದರೂ ವಸತಿ ಸೌಲಭ್ಯಗಳನ್ನು ಕೇಳುತ್ತಿದ್ದಾರೆ. ಹೀಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು ೨ ಸಾವಿರ ಮನೆಗಳನ್ನು ಸರ್ಕಾರದಿಂದ ಹಾಕಿಸಿಕೊಂಡು ಬರಲಾಗುತ್ತದೆ, ಸಾರ್ವಜನಿಕರ ಸಮಸ್ಯೆಗಳನ್ನು ತಿಳಿಯಲು ಪ್ರತಿ ಮಂಗಳವಾರ ಶಾಸಕರ ಕಚೇರಿಯಲ್ಲಿ ಇದ್ದು ಜನರ ಅಹವಾಲುಗಳಿಗೆ ಸ್ಪಂದಿಸಲಾಗುವುದು ಎಂದು ಹೇಳಿದರು. ನೂತನ ವರ್ಷದಲ್ಲಿ ತಾಲೂಕಿನಲ್ಲಿ ೩೫ ಸಾವಿರ ಮಂದಿ ಓಂ ಶಕ್ತಿ ಮಾಲಾಧಾರಿಗಳಿಗೆ ಉಚಿತ ೭೦೦ ಬಸ್ಸುಗಳನ್ನು ವೈಯಕ್ತಿಕ ಖರ್ಚಿನಿಂದ ೮ ದಿನಗಳು ಕಳುಹಿಸಲಾಗುತ್ತಿದ್ದು ಜಾಗರೂಕತೆಯಿಂದ ದೇವಾಲಯಕ್ಕೆ ಹೋಗಿ ಬರಬೇಕು. ಯಾವುದೇ ಕಾರಣಕ್ಕೂ ಸಮುದ್ರದ ಬಳಿಗೆ ಹೋಗಬಾರದು. ಇತ್ತೀಚೆಗೆ ಮುರುಡೇಶ್ವರ ಸಮುದ್ರದಲ್ಲಿ ಮೃತರಾದ ವಿದ್ಯಾರ್ಥಿಗಳ ಕುಟುಂಬದವರಿಗೆ ಒಂದು ಸರ್ಕಾರಿ ನೌಕರಿ ನೀಡಲು ಸರ್ಕಾರಕ್ಕೆ ವಿನಂತಿಸಲಾಗಿದೆ, ಕೋನಂಗುಂಟೆ ಬಳಿ ನಡೆದ ಅಪಘಾತದಲ್ಲಿ ಮೃತರಾದ ಐದು ಮಂದಿಗೆ ಸರ್ಕಾರ ಎರಡು ಲಕ್ಷ ಪರಿಹಾರ ನೀಡಿದ್ದು ಶೀಘ್ರದಲ್ಲೇ ಮೃತರ ಕುಟುಂಬಗಳಿಗೆ ಚೆಕ್ ತಲುಪಿಸಲಾಗುವುದು ಎಂದು ಹೇಳಿದರು.ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್.ನಾಗರಾಜ್, ಕಾರ್ಯದರ್ಶಿ ರಘುಪತಿ ರೆಡ್ಡಿ, ಜಿ.ಪಂ ಮಾಜಿ ಸದಸ್ಯ ಬಿ.ವಿ. ಸಾಮೇಗೌಡ, ವಕ್ತಾರ ಎಂ.ಎಸ್.ಶ್ರೀನಿವಾಸ್ ರೆಡ್ಡಿ, ಮುಖಂಡರಾದ ಮುನಿಸ್ವಾಮಿ ಗೌಡ, ಡಾ.ಪ್ರಕಾಶ್, ಎಂ.ಗೊಲ್ಲಹಳ್ಳಿ ಪ್ರಭಾಕರ್, ನಗವಾರ ಎನ್.ಆರ್. ಸತ್ಯಣ್ಣ, ಬಿ.ಎಂ.ಸಿ.ವೆಂಕಟರಾಮೇಗೌಡ, ನಾಗಮಂಗಲ ಶಂಕರಪ್ಪ, ಪೆದ್ದೂರು ವರದಪ್ಪ, ಶ್ರೀನಿವಾಸ್ ಇದ್ದರು.