ಸಾಧಕರಿಗೆ ಭಗೀರಥ ಮಹರ್ಷಿ ಛಲದ ಮನೋಭಾವನೆ ಬೇಕು: ಎಸಿ ಅಭಿಷೇಕ್‌

| Published : May 15 2024, 01:40 AM IST

ಸಾಧಕರಿಗೆ ಭಗೀರಥ ಮಹರ್ಷಿ ಛಲದ ಮನೋಭಾವನೆ ಬೇಕು: ಎಸಿ ಅಭಿಷೇಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಭಗೀರಥ ಮಹರ್ಷಿಗಳಂತೆ ಹಿಡಿದ ಕೆಲಸವನ್ನು ಸಾಧಿಸಿಯೇ ತೀರುವ ಛಲದ ಮನೋಭಾವನೆಯನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಅಗ ಮಾತ್ರ ಕೆಲಸಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಹೊನ್ನಾಳಿ ತಾಲೂಕು ಕಚೇರಿಯಲ್ಲಿ ಭಗೀರಥ ಜಯಂತಿ - - - ಹೊನ್ನಾಳಿ: ಭಗೀರಥ ಮಹರ್ಷಿಗಳಂತೆ ಹಿಡಿದ ಕೆಲಸವನ್ನು ಸಾಧಿಸಿಯೇ ತೀರುವ ಛಲದ ಮನೋಭಾವನೆಯನ್ನು ಎಲ್ಲರೂ ರೂಢಿಸಿಕೊಳ್ಳಬೇಕು. ಅಗ ಮಾತ್ರ ಕೆಲಸಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಹೇಳಿದರು.

ಮಂಗಳವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಶ್ರೀ ಭಗೀರಥ ಮಹರ್ಷಿ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಹರ್ಷಿ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಉಪ್ಪಾರ ಸಮಾಜ ಸಾಕಷ್ಟು ಹಿಂದುಳಿದಿದೆ. ಪ್ರವರ್ಗ 1ರಡಿಯಲ್ಲಿ ಈ ಸಮಾಜವಿದ್ದು, ಅರಿವು ಮಕ್ಕಳ ಶಿಕ್ಷಣ ಸೌಲಭ್ಯ ಸೇರಿದಂತೆ ಅನೇಕ ಸೌಲಭ್ಯಗಳು ಸಮಾಜಕ್ಕೆ ಇವೆ. ಈ ಎಲ್ಲ ಸೌಲಭ್ಯಗಳನ್ನು ಉಪ್ಪಾರ ಸಮಾಜ ಬಳಸಿಕೊಂಡು ಅಭಿವೃದ್ಧಿಯತ್ತ ಸಾಗಬೇಕು ಎಂದು ಹೇಳಿದರು.

ತಾಲೂಕು ಉಪ್ಪಾರ ಸಮಾಜ ಅಧ್ಯಕ್ಷ ಬಳ್ಳೇಶ್ವರ ಷಣ್ಮುಖಪ್ಪ ಮಾತನಾಡಿ, ಉಪ್ಪಾರ ಸಮಾಜ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಸಾಕಷ್ಟು ಹಿಂದುಳಿದಿದೆ. ಈ ಸಮಾಜಕ್ಕೆ ಸರ್ಕಾರ ಪ್ರವರ್ಗ-1ರ ಮೀಸಲಾತಿ ಬದಲಿಗೆ ಎಸ್ಸಿ-ಎಸ್ಟಿ ಮೀಸಲಾತಿ ನೀಡುವ ಅಗತ್ಯವಿದೆ. ಸರ್ಕಾರಗಳು ಉಪ್ಪಾರ ಸಮುದಾಯ ಸ್ಥಿತಿಗತಿಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ, ಸೂಕ್ತ ಸೌಲಭ್ಯಗಳನ್ನು ಒದಗಿಸಿಕೊಡುವ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಇ.ಸಿ.ಒ. ಅರುಣ್‌ಕುಮಾರ್, ಉಪ್ಪಾರ ಸಮಾಜದ ಶಂಕರಾನಂದ ಸ್ವಾಮೀಜಿ ಮಾತನಾಡಿದರು. ತಹಸೀಲ್ದಾರ್ ಪುರಂದರ ಹೆಗಡೆ, ಬಿಸಿಎಂ. ಇಲಾಖೆ ಮೃತ್ಯುಂಜಯ ಸ್ವಾಮಿ, ಉಪ್ಪಾರ ಸಮಾಜ ಮುಖಂಡರು ಭಾಗವಹಿಸಿದ್ದರು.

- - - -14ಎಚ್‌ಎಲ್‌ಐ1:

ಹೊನ್ನಾಳಿ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ನೇತೃತ್ವದ ಶ್ರೀ ಭಗೀರಥ ಮಹರ್ಷಿ ಜಯಂತ್ಯುತ್ಸವದಲ್ಲಿ ಎಸಿ ವಿ.ಅಭಿಷೇಕ್ ಮಾತನಾಡಿದರು.