ಸಾರಾಂಶ
ಚನ್ನಪಟ್ಟಣ: ಕೌಟುಂಬಿಕ ವಿಚಾರಕ್ಕೆ ಸೊಸೆಯೇ ಅತ್ತೆಯ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಈ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪೊಲೀಸರು ಸಮೋಟೋ ಪ್ರಕರಣ ದಾಖಲಿಸಿರುವ ಘಟನೆ ತಾಲೂಕಿನ ಅಬ್ಬೂರುದೊಡ್ಡಿ ಗ್ರಾಮದಲ್ಲಿ ನಡೆದಿದೆ.ಅಬ್ಬೂರುದೊಡ್ಡಿ ಗ್ರಾಮದ ಶಾಂತಮ್ಮ (೫೮) ಎಂಬುವವರ ಮೇಲೆ ನಡೆದಿದ್ದು, ಅವರ ಸೊಸೆ ಸಂಜನಾ ಹಾಗೂ ಮಗ ರವೀಂದ್ರ ಮೇಲೆ ಪ್ರಕರಣ ದಾಖಲಾಗಿದೆ. ಶಾಂತಮ್ಮ ಅವರು ಹಾಸಿಗೆಯಲ್ಲಿ ಕುಳಿತಿದ್ದಾಗ ಕೌಟುಂಬಿಕ ವಿಚಾರಕ್ಕೆ ಜಗಳ ತೆಗೆದ ಸಂಜನಾ ಅವರು ಬಳಸುತ್ತಿದ್ದ ಊರುಗೋಲನ್ನು ಕಿತ್ತುಕೊಂಡು ಮನಸೋ ಇಚ್ಚೇ ಹೊಡೆದಿದ್ದು, ನಿಂದಿಸಿದ್ದಾರೆ. ಸ್ಥಳದಲ್ಲೇ ಇದ್ದ ಮಗ ರವೀಂದ್ರ ಹಲ್ಲೆಗೆ ಪ್ರಚೋದಿಸುವ ಜತೆ ವಿಡಿಯೋ ಮಾಡಿದ್ದಾನೆ. ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಸಾಯಿಸುವುದಾಗಿ ಇಬ್ಬರು ಬೆದರಿಸಿದ್ದಾರೆ.ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು, ಶಾಂತಮ್ಮ ಅವರ ಮನೆಗೆ ತೆರಳಿ ಅವರ ಹೇಳಿಕೆ ಪಡೆದುಕೊಂಡಿದ್ದಾರೆ.ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.