ಸಾರಾಂಶ
ಕಲಾದಗಿ ಹತ್ತಿರದ ಶಾರದಾಳದಲ್ಲಿ ಪತ್ನಿಯನ್ನು ಒತ್ತಾಯಪೂರ್ವಕವಾಗಿ ಮನೆಗೆ ಕರೆದೊಯ್ಯಲು ಒತ್ತಾಯ ಮಾಡಿ ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಗ್ಗೆ ಕಲಾದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಕಲಾದಗಿ
ಕಲಾದಗಿ ಹತ್ತಿರದ ಶಾರದಾಳದಲ್ಲಿ ಪತ್ನಿಯನ್ನು ಒತ್ತಾಯಪೂರ್ವಕವಾಗಿ ಮನೆಗೆ ಕರೆದೊಯ್ಯಲು ಒತ್ತಾಯ ಮಾಡಿ ಹಲ್ಲೆ ನಡೆಸಿದ್ದಲ್ಲದೆ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಗ್ಗೆ ಕಲಾದಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಬೆಳಗಾವಿ ಜೆಲ್ಲೆಯ ಗೋಕಾಕ ತಾಲೂಕಿನ ತಳಕಟ್ಟನಾಳದ ಗ್ರಾಮದ ರವಿಚಂದ್ರ ಮನೋಹರ ಅಜ್ಜನ್ನವರ, ಮನೋಹರ ರಾಮಣ್ಣ ಅಜ್ಜನ್ನವರ, ಹನುಮಂತ ರಾಮಣ್ಣ ಅಜ್ಜನ್ನವರ, ಮಹಾದೇವಿ ಮನೋಹರ ಅಜ್ಜನ್ನವರ, ಸುಜಾತಾ ಹನುಮಂತ ಅಜ್ಜನ್ನವರ, ಉದ್ದವ್ವ ಎಂಬ ಮಹಿಳೆ ಸೇರಿ ೬ ಜನರ ವಿರುದ್ಧ ಹಲ್ಲೆಗೊಳಗಾದ ಪವಿತ್ರಾ ರವಿಚಂದ್ರ ಅಜ್ಜನ್ನವರ ದೂರು ದಾಖಲಿಸಿದ್ದಾರೆ.
ಪವಿತ್ರಾ ತನ್ನ ತವರು ಮನೆ ಶಾರದಾಳದಲ್ಲಿದ್ದಾಗ ಸೋಮವಾರ ಮಧ್ಯಾಹ್ನ ಗಂಡನ ಮನೆಯವರಾದ ತಳಕಟ್ಟನಾಳದ ಆರೋಪಿತರು ಬೊಲೆರೋ ವಾಹನದಲ್ಲಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಮನೆಗೆ ಬರದಿದ್ದರೆ ನಿನ್ನನ್ನು ಜೀವಂತ ಉಳಿಸುವುದಿಲ್ಲ ಎಂದು ಧಮಕಿ ಹಾಕಿದ್ದರು. ಅಲ್ಲದೆ, ಎಳೆದಾಡಿ ಹಲ್ಲೆ ಮಾಡಿದ್ದಾರೆ. ಈ ಕುರಿತು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದರು.