ಸಾರಾಂಶ
ಜಾನುವಾರುಗಳ ಸವಿವರ ಗಣತಿ ಸಂಗ್ರಹಿಸಲಾಗುವುದು.ಆ ಮೂಲಕ ಮೇವು ಅಗತ್ಯತೆ ಹಾಗೂ ನೀತಿ ರೂಪಿಸಲು ಸುಲಭವಾಗಲಿದೆ. ಜಾನುವಾರು ಸಮೀಕ್ಷೆ ಫೆಬ್ರವರಿ 2025ರ ವರೆಗೆ ನಡೆಯಲಿದೆ. ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಜಾನುವಾರುಗಳ ಗಣತಿ ನಡಲಿದ್ದಾರೆ. ಮೊಬೈಲ್‌ನಲ್ಲೇ ದಾಖಲೆ ಸಂಗ್ರಹ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ರೈತರ ಬಳಿಯಿರುವ ತಮ್ಮ ಜಾನುವಾರುಗಳ ಬಗ್ಗೆ ನಿಖರವಾಗಿ ಮಾಹಿತಿ ನೀಡಿ ಜಾನುವಾರುಗಳ ರಕ್ಷಣೆಗೆ ಅಗತ್ಯ ಯೋಜನೆ ರೂಪಿಸಲು ಸಹಕರಿಸಬೇಕು ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಎಸ್.ಎನ್ ಸಿಟಿಯಲ್ಲಿ 21ನೇ ಜಾನುವಾರು ಗಣತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕಿನ ಎಲ್ಲ ಜಾನುವಾರುಗಳ ಸವಿವರ ಗಣತಿ ಸಂಗ್ರಹಿಸಲಾಗುವುದು.ಆ ಮೂಲಕ ಮೇವು ಅಗತ್ಯತೆ ಹಾಗೂ ನೀತಿ ರೂಪಿಸಲು ಸುಲಭವಾಗಲಿದೆ. ಜಾನುವಾರು ಸಮೀಕ್ಷೆ ಫೆಬ್ರವರಿ 2025ರ ವರೆಗೆ ನಡೆಯಲಿದೆ ಎಂದರು.ಮೊಬೈಲ್‌ನಲ್ಲೇ ದಾಖಲು
ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಜಾನುವಾರುಗಳ ಲಿಂಗ, ವಯಸ್ಸು, ಆರೋಗ್ಯದ ಸ್ಥಿತಿಗತಿ, ಯಾವ ತಳಿ, ಅದನ್ನು ಸಾಕುತ್ತಿರುವ ರೈತ ಕುಟುಂಬಗಳ ವಿವರಗಳು ಸೇರಿದಂತೆ ಇತ್ಯಾದಿ ಮಾಹಿತಿಯನ್ನು ಮೊಬೈಲ್ ಆಪ್‌ನಲ್ಲೇ ದಾಖಲಿಸಲಾಗುವುದು ಎಂದರು.ಜಾನುವಾರು ಸಾಕಣೆದಾರರು ಸಾಕಿರುವ ದನ, ಎತ್ತು, ಎಮ್ಮೆ, ಹಸು, ಮೇಕೆ, ಕುರಿ, ಕೋಳಿ, ನಾಯಿ, ಕುದುರೆ, ಹಂದಿ, ಬಾತುಕೋಳಿ ಮತ್ತು ಎಮು ಪಕ್ಷಿಗಳ ಮಾಹಿತಿ ಪಡೆಯಲಾಗುವುದು. ಬಿಡಾಡಿ ದನಗಳು ಮತ್ತು ಬೀದಿ ನಾಯಿ ಹಾಗೂ ಸಾಕು ನಾಯಿಗಳ ಮಾಹಿತಿಯನ್ನೂ ಕಲೆ ಹಾಕಲಾಗುತ್ತದೆ. 10ಕ್ಕಿಂತ ಹೆಚ್ಚು ಜಾನುವಾರುಗಳು, 1000ಕ್ಕೂ ಹೆಚ್ಚು ಕೋಳಿಗಳು ಮತ್ತು 50 ಮೇಕೆಗಳನ್ನು ಹೊಂದಿರುವ ಯಾವುದೇ ಸ್ಥಳವನ್ನು ''''ಫಾರ್ಮ್'''' ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ಗೋವಿಂದ, ಸದಸ್ಯರಾದ ಶಫಿ, ಪುರಸಭೆ ಮುಖ್ಯ ಅಧಿಕಾರಿ ಸತ್ಯನಾರಾಯಣ, ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾಃರಾಮು,ಕ್ಷೇತ್ರ ಶಿಕ್ಷಣಾಧಿಕಾರಿ ಗುರುಮೂರ್ತಿ, ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ರವಿ,ಸುಜಾತ, ಹಾಗೂ ಮೊದಲಾದವರು ಇದ್ದರು.