ಸರ್ಕಾರಿ ಶಾಲೆಗಳ ಬಲವರ್ಧನೆಗೆ ನೆರವು ಅಗತ್ಯ

| Published : Jun 02 2024, 01:48 AM IST

ಸಾರಾಂಶ

ಖಾಸಗಿ ಪೈಪೋಟಿಯ ನಡುವೆ ಇಂದು ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ, ಸಮಾನ ಶಿಕ್ಷಣ, ಸರ್ವರಿಗೂ ಶಿಕ್ಷಣ ನೀಡುವ ಶ್ರದ್ಧಾಕೇಂದ್ರಗಳೇ ಈ ಶಾಲೆಗಳಾಗಿದ್ದು, ಜನತೆ, ಉಳ್ಳವರು ಸಹಕಾರ ನೀಡಬೇಕು

ಕನ್ನಡಪ್ರಭ ವಾರ್ತೆ ಕೋಲಾರಸರ್ಕಾರಿ ಶಾಲೆಗಳ ಬಲವರ್ಧನೆ ಹಾಗೂ ಸ್ಪರ್ಧಾತ್ಮಕ ಪೈಪೋಟಿಗನುಗುಣವಾಗಿ ಕಲಿಕೆಯಲ್ಲಿ ತಾಂತ್ರಿಕತೆ ಅಳವಡಿಸಿಕೊಳ್ಳಲು ವಿವಿಧ ಕಂಪನಿಗಳು ಹಾಗೂ ಸಮುದಾಯದ ಸಹಭಾಗಿತ್ವ ಅಗತ್ಯವಿದೆ ಈ ನಿಟ್ಟಿನಲ್ಲಿ ಸ್ಯಾಮಸಂಗ್ ಕಂಪನಿ ನೀಡುತ್ತಿರುವ ಸಹಕಾರಕ್ಕೆ ಡಯಟ್ ಪ್ರಾಂಶುಪಾಲ ಕೆ.ಎನ್.ಜಯಣ್ಣ ಧನ್ಯವಾದ ಸಲ್ಲಿಸಿದರು.ನಗರದ ಪಿ.ಸಿ ಬಡಾವಣೆ ಶಾಲಾ ಆವರಣದಲ್ಲಿ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳ ೧೫೦೦ ಮಕ್ಕಳಿಗೆ ಶಿಕ್ಷಕ ಮುಖಂಡ ವೀರಣ್ಣಗೌಡ ಮನವಿ ಮೇರೆಗೆ ಸ್ಯಾಮಸಂಗ್ ಕಂಪನಿ ಒದಗಿಸದ್ದ ಶ್ಯಾಲಾ ಬ್ಯಾಗ್, ನೋಟ್‌ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.ಖಾಸಗಿ ಶಾಲೆಗಳ ಪೈಪೋಟಿ

ಖಾಸಗಿ ಪೈಪೋಟಿಯ ನಡುವೆ ಇಂದು ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ, ಸಮಾನ ಶಿಕ್ಷಣ, ಸರ್ವರಿಗೂ ಶಿಕ್ಷಣ ನೀಡುವ ಶ್ರದ್ಧಾಕೇಂದ್ರಗಳೇ ಈ ಶಾಲೆಗಳಾಗಿದ್ದು, ಜನತೆ, ಉಳ್ಳವರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಸ್ಯಾಮಸಂಗ್ ಕಂಪನಿ ಸುಮಾರು ವರ್ಷದಿಂದ ತಾಲೂಕಿನ ಸರ್ಕಾರಿ ಶಾಲೆಗಳ ಸಾವಿರಾರು ಮಕ್ಕಳಿಗೆ ಸಮವಸ್ತ್ರ, ನೋಟ್ ಪುಸ್ತಕ, ಬ್ಯಾಗ್ ನೀಡುತ್ತಿದೆ, ಇದರ ಜತೆಗೆ ಕೆಂಬೋಡಿಯಲ್ಲಿ ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಿಸಿಕೊಟ್ಟಿದೆ, ಇತರೆ ಕಂಪನಿಗಳು ಸರ್ಕಾರಿ ಶಾಲೆಗಳ ನೆರವಿಗೆ ಧಾವಿಸಬೇಕು ಎಂದರು.ಸಿಎಸ್‌ಆರ್ ನಿಧಿ ನೀಡಿ: ಬಿಇಒಬಿಇಒ ಎಸ್.ಎನ್. ಕನ್ನಯ್ಯ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿನ ವಿವಿಧ ಕೈಗಾರಿಕೆಗಳು ತಮ್ಮ ಸಿಎಸ್‌ಆರ್ ನಿಧಿಯನ್ನು ಎರಡು ವರ್ಷಗಳ ಕಾಲ ಶಾಲೆಗಳು ಹಾಗೂ ಶೈಕ್ಷಣಿಕ ಅಭಿವೃದ್ದಿಗೆ ಬಳಸಬೇಕು ಎಂಬ ನಿರ್ಧಾರ ನಮ್ಮ ಜಿಲ್ಲಾಧಿಕಾರಿ, ಶಾಸಕರು ಪ್ರಕಟಿಸಿದ್ದಾರೆ. ಇದರಿಂದಾಗಿ ತಾಲೂಕಿನ ಶಾಲೆಗಳ ಅಭಿವೃದ್ಧಿ ಸಾಧ್ಯವಾಗಲಿದೆ, ಜಿಲ್ಲಾಧಿಕಾರಿಗಳ ಶಿಕ್ಷಣ ಪ್ರೇಮಿಗಳಾಗಿದ್ದು, ಗುಣಾತ್ಮಕ ಶಿಕ್ಷಣಕ್ಕಾಗಿ ಸಕಲ ಸೌಲಭ್ಯ ಒದಗಿಸುವ ಸಂಕಲ್ಪ ತೊಟ್ಟಿದ್ದಾರೆ ಎಂದು ತಿಳಿಸಿದರು.ಸ್ಯಾಮ್‌ಸಂಗ್‌ ಕಂಪನಿಗೆ ಕತಜ್ಞತೆ

ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿವಿಧ ಕಂಪನಿಗಳ ಸಿಎಸ್‌ಆರ್ ನಿಧಿ ಶಾಲೆಗಳ ಅಭಿವೃದ್ಧಿಗೆ ಹರಿದು ಬರಲಿದೆ ಎಂದ ಅವರು, ಸ್ಯಾಮಸಂಗ್ ಕಂಪನಿ ಸತತ ಹತ್ತಾರು ವರ್ಷಗಳಿಂದ ಕೋಲಾರ ತಾಲೂಕಿನ ಸರ್ಕಾರಿ ಶಾಲೆಗಳಿಗೆ ನೆರವು ಹರಿಸಿದೆ, ಈ ಕಂಪನಿಯ ನೆರವು ಹರಿಸಿದೆ ಎಂದು ತಿಳಿಸಿ ಧನ್ಯವಾದ ಸಲ್ಲಿಸಿದರು.ಶಿಕ್ಷಕ ಮುಖಂಡ ವೀರಣ್ಣಗೌಡ ಮಾತನಾಡಿ, ಸ್ಯಾಮಸಂಗ್ ಕಂಪನಿ ಇದೀಗ ೧೫೦೦ ಮಕ್ಕಳಿಗೆ ಶಾಲಾ ಬ್ಯಾಗ್, ನೋಟ್‌ಪುಸ್ತಕ, ಲೇಖನ ಸಾಮಗ್ರಿ ನೀಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವು ಹರಿಸುವ ಭರವಸೆ ನೀಡಿದೆ ಎಂದರು. ಶಾಲಾ ಮುಖ್ಯಶಿಕ್ಷಕ ರವಿಚಂದ್ರ ಇದ್ದರು.