ಸಾರಾಂಶ
ಹಾವೇರಿ: ತಾಲೂಕಿನ ಅಗಡಿ ಅಕ್ಕಿಮಠದ ಲಿಂ.ಮುಪ್ಪಯ್ಯ ಮಹಾಶಿವಯೋಗಿಗಳ ೫೮ನೇ ಹಾಗೂ ಲಿಂ.ಚನ್ನಬಸವ ಮಹಾಶಿವಯೋಗಿಗಳ ೧೧ನೇ ಪುಣ್ಯ ಸ್ಮರಣೋತ್ಸವ ಅಂಗವಾಗಿ ಶ್ರೀಮಠದಲ್ಲಿ ನ. ೨೪ರಿಂದ ನ. ೨೯ರ ವರೆಗೆ ಶರಣ ಸಂಸ್ಕೃತಿ ಉತ್ಸವ-೨೦೨೪ ಆಯೋಜಿಸಲಾಗಿದೆ ಎಂದು ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ. ೨೪ರಂದು ಸಂಜೆ ೫ಕ್ಕೆ ಅಗಡಿ ಗ್ರಾಮದ ದಂಡಿನ ದುರ್ಗಾದೇವಿ ದೇವಸ್ಥಾನದಿಂದ ಅಕ್ಕಿಮಠ ವರೆಗೆ ಗುಡ್ಡದ ಮಲ್ಲಾಪುರ ಮೂಕಪ್ಪ ಶಿವಯೋಗಿಗಳ ಸಾನ್ನಿಧ್ಯದಲ್ಲಿ ಹಾಗೂ ಗ್ರಾಮದ ಮೂರು ಮಠಾಧೀಶರ ನೇತೃತ್ವದಲ್ಲಿ ಸದ್ಭಾವನಾ ಧರ್ಮ ಜಾಗೃತಿ ಪಾದಯಾತ್ರೆ ನಡೆಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ೧೧೧ ಸುಮಂಗಲೆಯರ ಆರತಿಯೊಂದಿಗೆ ಹಾಗೂ ಸಕಲ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ವಿಜೃಂಭಣೆಯಿಂದ ನಡೆಯಲಿದೆ ಎಂದರು.ಅದೇ ದಿನ ಸಂಜೆ ೬.೩೦ಕ್ಕೆ ಹಾವೇರಿ ತಾಲೂಕಿನ ೨೫೬ ಜನ ಪಶು ಸಖಿ ಹಾಗೂ ಕೃಷಿ ಸಖಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಗೌರವಿಸುವ ಮೂಲಕ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಲಾಗುವುದು. ನಿಜಗುಣ ಶಿವಯೋಗಿಗಳು ಸಾನಿಧ್ಯ ವಹಿಸಲಿದ್ದು, ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಜಾನಪದ ವಿವಿ ಕುಲಪತಿ ಡಾ. ಟಿ.ಎಂ. ಭಾಸ್ಕರ, ಉಪ ವಿಭಾಗಾಧಿಕಾರಿ ಚನ್ನಪ್ಪ ಎಚ್.ವಿ., ಡಾ. ಚಂದ್ರಪ್ಪ ಸೊಬಟಿ ಸೇರಿದಂತೆ ಮತ್ತಿತರ ಗಣ್ಯಮಾನ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ನ. ೨೫ರಂದು ಸಂಜೆ ೬.೩೦ಕ್ಕೆ ಸಂಗೀತ ಸೌರಭ ಮತ್ತು ಮಹಿಳಾಗೋಷ್ಠಿ ನಡೆಯಲಿದೆ. ಗ್ರಾಪಂ ಅಧ್ಯಕ್ಷೆ ನಾಗರತ್ನಾ ಮಣಿಗಾರ ಉದ್ಘಾಟಿಸಲಿದ್ದು, ವಿಶೇಷ ಆಹ್ವಾನಿತರಾಗಿ ತಹಸೀಲ್ದಾರ್ ಶರಣಮ್ಮ ಕಾರೆ, ಹಾನಗಲ್ಲ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಂಗಮ್ಮ ಹಿರೇಮಠ ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದಲ್ಲಿ ಮಹಿಳೆಯರೇ ಉಪಸ್ಥಿತರಿರಲಿದ್ದಾರೆ ಎಂದರು.ನ. ೨೮ರಂದು ಸಂಜೆ ಪೂಜ್ಯದ್ವಯರ ಸ್ಮರಣಿಕೆ ಹಾಗೂ ಧರ್ಮಸಭೆ ಕಾರ್ಯಕ್ರಮ ನಡೆಯಲಿದೆ. ಶಾಸಕ ಬಸವರಾಜ ಶಿವಣ್ಣನವರ ಅಧ್ಯಕ್ಷತೆ ವಹಿಸಲಿದ್ದು, ವಿಧಾನಸಭೆ ಉಪಸಭಾಪತಿ, ಶಾಸಕ ರುದ್ರಪ್ಪ ಲಮಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಲ್ಲಿಕಾರ್ಜುನ ಕೆ.ಎಂ., ಎಚ್. ಪ್ರಭಾಕರಗೌಡ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ನೆಹರು ಓಲೇಕಾರ, ಅಜ್ಜಂಪೀರ ಖಾದ್ರಿ, ಕೋಟ್ರೇಶಪ್ಪ ಬಸೇಗಣ್ಣಿ, ಸಂಜೀವಕುಮಾರ ನೀರಲಗಿ, ಆನಂದಸ್ವಾಮಿ ಗಡ್ಡದೇವರಮಠ ಪಾಲ್ಗೊಳ್ಳಲಿದ್ದಾರೆ ಎಂದರು.
ನ. ೨೯ರಂದು ಬೆಳಗ್ಗೆ ೧೦ಕ್ಕೆ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹಗಳು ನಡೆಯಲಿವೆ. ಸಂಗನಬಸವ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನಾಗರಾಜ ಅರಳಿ, ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ಸಿದ್ದರಾಜ ಕಲಕೋಟಿ ಭಾಗವಹಿಸಲಿದ್ದಾರೆ ಎಂದರು. ಪ್ರತಿದಿನ ವಿವಿಧ ಶಾಲಾ ಮಕ್ಕಳಿಂದ, ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.ಮುಕುಂದೂರು ವಿರಕ್ತಮಠದ ಮಹಾಂತ ಬಸವಲಿಂಗ ಸ್ವಾಮೀಜಿ ಮಾತನಾಡಿದರು. ಕೆ.ಬಿ. ಮಲ್ಲಿಕಾರ್ಜುನ, ಸತೀಶ ಈಳಗೇರ, ಹನುಮಂತಗೌಡ ಗೊಲ್ಲರ ಇದ್ದರು.
ಯುವ ಜನೋತ್ಸವ
ನ. ೨೬ರಂದು ಸಂಜೆ ಯುವ ಜನೋತ್ಸವ ನಡೆಯಲಿದ್ದು, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಉದ್ಘಾಟಿಸಲಿದ್ದಾರೆ. ನೆಗಳೂರ ಗುರುಶಾಂತೇಶ್ವರ ಶ್ರೀಗಳು ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್‌ಪಿ ಅಂಶುಕುಮಾರ ಭಾಗವಹಿಸಲಿದ್ದಾರೆ. ಬೆಂಗಳೂರ ಅಗ್ನಿಶಾಮಕದಳ ಡಿ.ಐ.ಜಿ. ರವಿ ಚೆನ್ನಣ್ಣನವರಗೆ ‘ಕರುನಾಡ ಚಿನ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮುಖ್ಯ ಅತಿಥಿಗಳಾಗಿ ನಿಂಗರಾಜ ಶಿವಣ್ಣನವರ, ಡಾ. ಪಿ.ಆರ್. ಹಾವನೂರ, ಪವನಕುಮಾರ ಬಹದ್ದೂರ ದೇಸಾಯಿ, ವಿ.ವಿ. ಕಮತರ ಭಾಗವಹಿಸಲಿದ್ದಾರೆ ಎಂದರು.ಕೃಷಿ ಸಂಭ್ರಮ ಕಾರ್ಯಕ್ರಮನ. ೨೭ರಂದು ಸಂಜೆ ಕೃಷಿ ಸಂಭ್ರಮ ನಡೆಯಲಿದ್ದು, ಪ್ರಗತಿಪರ ರೈತ ಮಹಿಳೆ ಡಾ. ಕವಿತಾ ಮಿಶ್ರಾ ಉದ್ಘಾಟನೆ ಮಾಡಲಿದ್ದಾರೆ. ಆನಂದವನದ ಗುರುದತ್ತ ಚಕ್ರವರ್ತಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ವಿಶೇಷ ಆಹ್ವಾನಿತರಾಗಿ ಜಂಟಿ ಕೃಷಿ ನಿರ್ದೇಶಕ ಡಾ. ಮಲ್ಲಿಕಾರ್ಜುನ, ಮುಖ್ಯ ಅತಿಥಿಗಳಾಗಿ ರಾಮಣ್ಣ ಕೆಂಚಳ್ಳೇರ, ಮಲ್ಲಿಕಾರ್ಜುನ ಬಳ್ಳಾರಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.