ಕೊಡವ ಜನಾಂಗದ ಆಚಾರ, ವಿಚಾರ, ಪದ್ಧತಿ, ಪರಂಪರೆ, ಸಂಸ್ಕೃತಿ ವಿಭಿನ್ನವಾಗಿದ್ದು ಆಟ್ ಪಾಟ್ ಶಿಬಿರಗಳ ಮೂಲಕ ಯುವ ಜನಾಂಗ ಅದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹೇಳಿದರು.
ಕನ್ನಡಪ್ರಭವಾರ್ತೆ ನಾಪೋಕ್ಲು
ಕೊಡವ ಜನಾಂಗದ ಆಚಾರ, ವಿಚಾರ, ಪದ್ಧತಿ, ಪರಂಪರೆ, ಸಂಸ್ಕೃತಿ ವಿಭಿನ್ನವಾಗಿದ್ದು ಆಟ್ ಪಾಟ್ ಶಿಬಿರಗಳ ಮೂಲಕ ಯುವ ಜನಾಂಗ ಅದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡಬೇಕಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹೇಳಿದರು. ಇಲ್ಲಿನ ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಆಟ್ ಪಾಟ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕಾರ್ಯಕ್ರಮ ಉದ್ಘಾಟಿಸಿದ ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಮಾತನಾಡಿ ಕೊಡವ ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವಂತಹ ಕೆಲಸವನ್ನು ಮಾಡಬೇಕಿದೆ. ದೇಶದಲ್ಲಿ ಕೊಡವ ಜನಾಂಗಕ್ಕೆ ಉತ್ತಮ ಹೆಸರಿದೆ .ಕಲೆ, ಸಂಸ್ಕೃತಿ ಗೆ ದೇಶದ ಯಾವ ಮೂಲೆಯಲ್ಲಾದದರೂ ಉತ್ತಮ ಗೌರವ ಲಭಿಸುತ್ತದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.ಕೇವಲ ಭಾಷಣಕ್ಕೆ ಸೀಮಿತವಾಗಬಾರದು: ಅಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ ಮಾತನಾಡಿ, ಶಿಬಿರ ಕೇವಲ ವೇದಿಕೆಯ ಭಾಷಣಗಳಿಗೆ , ಮಾಧ್ಯಮಗಳ ಪ್ರಸಾರಕ್ಕೆ ಸೀಮಿತವಾಗಬಾರದು. ಅನುಷ್ಠಾನಕ್ಕೆ ತರಬೇಕಿದೆ. ಇಂತಹ ಕಾರ್ಯಕ್ರಮಗಳಿಗೆ ಪೋಷಕರ ಸಹಕಾರ ಅಂಶ ಆದರೆ ನಮ್ಮ ನಿರೀಕ್ಷೆಯಷ್ಟು ಯಶಸ್ವಿಯಾಗಲು ಸಾಧ್ಯವಾಗದೇ ಇರುವುದರ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದರು ಎಂದರು.ತರಬೇತಿದಾರರಾದ ಮಾತನಾಡಿದರು ಮಾತನಾಡಿಚೇನಂಡ ಮಧುಮಾಚಯ್ಯ, ಬೋಪಣ್ಣ ಬೊಳ್ಳಮ್ಮ ನಾಣಯ್ಯ, ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ , ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ , ಹಾಗೂ ತರಬೇತಿದಾರರನ್ನು ಕೊಡವ ಸಮಾಜದಿಂದ ಸನ್ಮಾನಿಸಿ ಗೌರವಿಸಲಾಯಿತು.ಕೊಡವ ಸಮಾಜ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕೊಡವ ಸಮಾಜದ ಉಪಾಧ್ಯಕ್ಷ ಕರವಂಡ ಲವ ನಾನಯ್ಯ, ಖಜಾಂಚಿ ಚೌರಿರ ಉದಯ, ತರಬೇತಿದಾರರಾದ ಚೀಯಕ ಪೂವಂಡಡ ದೇವಯ್ಯ, ಪಾಡೇಯಂಡ ಕಟ್ಟಿ ಕುಶಾಲಪ್ಪ ಕೊಡವ ಸಮಾಜದ ಹಾಗೂ ಪೊಮ್ಮಕ್ಕಡ ಪರಿಷತ್ತಿನ ನಿರ್ದೇಶಕರುಗಳು ಇದ್ದರು. ಅರೆಯಡ ಸರಸು ಚರ್ಮಣ ಪ್ರಾರ್ಥಿಸಿದರು. ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ತಿನ ಅಧ್ಯಕ್ಷತೆ ಬಾಲೆಯಡ ನಿಶಾ ಮೇದಪ್ಪ ಮತ್ತು ಕೊಡವ ಸಮಾಜದ ಖಜಾಂಚಿ ಮಾಚೇಟ್ಟಿರ ಕುಶು ಕುಶಾಲಪ್ಪ ಅತಿಥಿಗಳ ಪರಿಚಯ ಮಾಡಿದರು, ಬೊಳಿಯಾಡಿರ ಸಂತು ಸುಬ್ರಮಣಿ, ಬಿದ್ದಾತಂಡ ಮಮತಾ ಚಿನ್ನಪ್ಪ, ಕದ್ದನಿಯಂಡ ವಂದನ ನಿರೂಪಿಸಿದರು.ಶಿರಾರ್ಥಿಗಳಿಂದ ಬೊಳಕಾಟ್, ಕೋಲಾಟ್, ಉಮ್ಮತ್ತಾಟ್ ಪ್ರದರ್ಶನ ನಡೆಯಿತು ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಶಿಬಿರಾರ್ಥಿಗಳಿಗೆ ಅರ್ಹತಾ ಪತ್ರವನ್ನು ವಿತರಿಸಿ ಶುಭ ಹಾರೈಸಿದರು.