ಮಿಚಿಗನ್ ವಿವಿಯಲ್ಲಿ ಡಾ. ಕುರಿಯನ್ ಸ್ಮಾರಕ ದತ್ತಿ ಉಪನ್ಯಾಸ

| Published : Nov 26 2023, 01:15 AM IST

ಮಿಚಿಗನ್ ವಿವಿಯಲ್ಲಿ ಡಾ. ಕುರಿಯನ್ ಸ್ಮಾರಕ ದತ್ತಿ ಉಪನ್ಯಾಸ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ವರ್ಗೀಸ್ ಕುರಿಯನ್ ದತ್ತಿನಿಧಿಯನ್ನು ಮಿಚಿಗನ್ ವಿ.ವಿ.ಯಲ್ಲಿ ಮಾನವ ಬಂಡವಾಳ, ಸಾಂಸ್ಥಿಕ ಉದ್ಯಮಶೀಲತೆ, ಸಾಮಾಜಿಕ ಸಬಲೀಕರಣ, ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ತಂತ್ರಜ್ಞಾನ, ಹೊಸ ಆವಿಷ್ಕಾರಗಳ ಕಡೆಗೆ ಡಾ. ವರ್ಗೀಸ್ ಕುರಿಯನ್ ಪರಂಪರೆಯನ್ನು ಮುಂದುವರಿಸಲು ನೆರವಾಗುವಂತೆ ಇಂಟರ್ನ್‌ಶಿಪ್‌ಗಳು, ಸಮ್ಮೇಳನಗಳು, ಕಾರ್ಯಾಗಾರಗಳು ಮತ್ತು ತಜ್ಞರ ಸಭೆಗಳು ಸೇರಿದಂತೆ ಅಂತರ ರಾಷ್ಟ್ರೀಯವಾಗಿ ನೀಡಲಾಗುವ ಮಿಚಿಗನ್ ವಿವಿ ಕಾರ್ಯಕ್ರಮಗಳಲ್ಲಿ ತರಬೇತಿ ಕಾರ್ಯಕ್ರಮಗಳಲ್ಲಿ ಹಾಜರಾಗಲು ಮಿಚಿಗನ್ ವಿವಿಯ ವಿದ್ಯಾರ್ಥಿಗಳು, ವಿದ್ವಾಂಸರು ಭಾರತ ಮತ್ತು ದಕ್ಷಿಣ ಏಷ್ಯಾದ ನಿವಾಸಿಗಳನ್ನು ಬೆಂಬಲಿಸಲು ಬಳಸಲಾಗುತ್ತದೆ ಎಂದು ಶಿಮುಲ್ ನಿವೃತ್ತ ಉಪ ವ್ಯವಸ್ಥಾಪಕ ಡಿ.ವಿ. ಮಲ್ಲಿಕಾರ್ಜುನ ಹೇಳುತ್ತಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಭಾರತದಲ್ಲಿನ ಕ್ಷೀರ ಕ್ರಾಂತಿಯ ಹರಿಕಾರ ಎಂದೇ ಹೆಸರು ಪಡೆದಿರುವ ಡಾ. ವರ್ಗೀಸ್ ಕುರಿಯನ್ ಅವರ ನೆನಪಿನಲ್ಲಿ ಅವರು ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡಿದ ಅಮೆರಿಕದ ಮಿಚಿಗನ್ ವಿ.ವಿ.ಯಲ್ಲಿ ಡಾ ಕುರಿಯನ್ ಸ್ಮಾರಕ ಸ್ಮಾರಕ ದತ್ತಿ ಉಪನ್ಯಾಸವನ್ನು ಪ್ರಾರಂಭಿಸಿದೆ.

ಡಾ. ವರ್ಗೀಸ್ ಕುರಿಯನ್ ದತ್ತಿನಿಧಿಯು ಮಿಚಿಗನ್ ಸ್ಟೇಟ್ ವಿವಿ ಇಂಟರ್‌ ನ್ಯಾಷನಲ್ ಪ್ರೋಗ್ರಾಮ್ಸ್, ಕಾಲೇಜ್ ಆಫ್ ಅಗ್ರಿಕಲ್ಚರ್ ಮತ್ತು ನ್ಯಾಚುರಲ್ ರಿಸೋರ್ಸಸ್ ನಿರ್ದೇಶಕ ಡಾ. ಕರೀಂ ಎಂ. ಮರೇಡಿಯಾ ಮತ್ತು ಎಂ.ಎಸ್.ಯು. ಅಥಾರಿಟಿಸ್ ಅವರ ಸತತ ಪ್ರಯತ್ನದ ಫಲವಾಗಿ ಸ್ಥಾಪನೆಯಾಗಿದೆ. ಇದೀಗ ಕುಡಿಯನ್‌ ಹುಟ್ಟಿದ ದಿನವಾದ ನ.26 ಅಥವಾ ವಿ.ವಿ.ಗೆ ಹೊಂದಾಣಿಕೆಯಾಗುವ ದಿನಾಂಕದಲ್ಲಿ ಡಾ. ಕುರಿಯನ್ ದತ್ತಿ ಉಪನ್ಯಾಸವನ್ನು ನಡೆಸಲಾಗುತ್ತದೆ.

ಮಿಚಿಗನ್ ವಿವಿಯ ಮೆಕ್ಯಾನಿಕಲ್ ವಿಭಾಗದಲ್ಲಿ ಕುರಿಯನ್ ಅವರು 1948ರಲ್ಲಿ ಸ್ನಾತಕೋತ್ತರ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದರು. ಬಳಿಕ ಭಾರತಕ್ಕೆ ಮರಳಿದ ಅವರು ಕ್ಷೀರಕ್ರಾಂತಿಗೆ ನಾಂದಿ ಹಾಡಿ, ವಿಶ್ವಮಟ್ಟದಲ್ಲಿಯೇ ಹೆಸರು ಪಡೆದರು. ಭಾರತದ ಕೋಟ್ಯಂತರ ಹೈನುಗಾರರಿಗೆ ಹೊಸ ಬದುಕು ಕಟ್ಟಿಕೊಟ್ಟರು.

ಡಾ. ವರ್ಗೀಸ್ ಕುರಿಯನ್ ದತ್ತಿನಿಧಿಯನ್ನು ಮಿಚಿಗನ್ ವಿ.ವಿ.ಯಲ್ಲಿ ಮಾನವ ಬಂಡವಾಳ, ಸಾಂಸ್ಥಿಕ ಉದ್ಯಮಶೀಲತೆ, ಸಾಮಾಜಿಕ ಸಬಲೀಕರಣ, ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ತಂತ್ರಜ್ಞಾನ, ಹೊಸ ಆವಿಷ್ಕಾರಗಳ ಕಡೆಗೆ ಡಾ. ವರ್ಗೀಸ್ ಕುರಿಯನ್ ಪರಂಪರೆಯನ್ನು ಮುಂದುವರಿಸಲು ನೆರವಾಗುವಂತೆ ಇಂಟರ್ನ್‌ಶಿಪ್‌ಗಳು, ಸಮ್ಮೇಳನಗಳು, ಕಾರ್ಯಾಗಾರಗಳು ಮತ್ತು ತಜ್ಞರ ಸಭೆಗಳು ಸೇರಿದಂತೆ ಅಂತರ ರಾಷ್ಟ್ರೀಯವಾಗಿ ನೀಡಲಾಗುವ ಮಿಚಿಗನ್ ವಿವಿ ಕಾರ್ಯಕ್ರಮಗಳಲ್ಲಿ ತರಬೇತಿ ಕಾರ್ಯಕ್ರಮಗಳಲ್ಲಿ ಹಾಜರಾಗಲು ಮಿಚಿಗನ್ ವಿವಿಯ ವಿದ್ಯಾರ್ಥಿಗಳು, ವಿದ್ವಾಂಸರು ಭಾರತ ಮತ್ತು ದಕ್ಷಿಣ ಏಷ್ಯಾದ ನಿವಾಸಿಗಳನ್ನು ಬೆಂಬಲಿಸಲು ಬಳಸಲಾಗುತ್ತದೆ ಎಂದು ಶಿಮುಲ್ ನಿವೃತ್ತ ಉಪ ವ್ಯವಸ್ಥಾಪಕ ಡಿ.ವಿ. ಮಲ್ಲಿಕಾರ್ಜುನ ಹೇಳುತ್ತಾರೆ.

ಭಾರತ ಮತ್ತು ದಕ್ಷಿಣ ಏಷ್ಯಾದಲ್ಲಿ ತಂತ್ರಜ್ಞಾನ, ಹೊಸ ಆವಿಷ್ಕಾರಗಳು, ಸಾಮಾಜಿಕ ಸಬಲೀಕರಣ, ಅವರ ಅನುಕರಣೀಯ ನಾಯಕತ್ವ, ಸಮರ್ಪಣಾ ಭಾವ, ಬದ್ಧತೆಯನ್ನು ಗುರುತಿಸಿದ ಅಮೆರಿಕದ ಮಿಚಿಗನ್ ವಿವಿ ಯು 1918ರಲ್ಲಿ ಶಿಮುಲ್ ನಿವೃತ್ತ ಉಪ ವ್ಯವಸ್ಥಾಪಕ ಡಿ.ವಿ. ಮಲ್ಲಿಕಾರ್ಜುನ ಅವರ ಶ್ರಮದ ಫಲವಾಗಿ ಡಾ. ಕುರಿಯನ್ ಅವರ ಪ್ರತಿಮೆಯನ್ನು ಮಿಚಿಗನ್ ವಿ.ವಿ. ಆವರಣದಲ್ಲಿ ಸ್ಥಾಪಿಸಲಾಯಿತು ಎಂಬುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

- - - -ಫೋಟೋ: ಡಾ. ವರ್ಗೀಸ್ ಕುರಿಯನ್