ಆಟಲ್ ಬಿಹಾರಿ ವಾಜಪೇಯಿ ಅಪರೂಪದ ರಾಜಕಾರಣಿ

| Published : Mar 17 2025, 12:33 AM IST

ಸಾರಾಂಶ

ರಾಷ್ಟ್ರದ ಉದ್ದಗಲಕ್ಕೂ ಹೆದ್ದಾರಿ, ಕೃಷಿ ಪದಾರ್ಥಗಳ ಸಾಗಾಣಿಕೆಗೆ ಗ್ರಾಮ ಸಡಕ್ ಹಾಗೂ ಪಾಕಿಸ್ತಾನದ ಮೋಸದಾಟಕ್ಕೆ ದಿಟ್ಟ ಹೆಜ್ಜೆಯಿಟ್ಟ ಆಟಲ್ ಬಿಹಾರಿ ವಾಜಪೇಯಿ ಅಪರೂಪದ ರಾಜಕಾರಣಿ ಎಂದು ಆಟಲ್‌ಜೀ ಜನ್ಮಶತಮಾನೋತ್ಸವ ಸಮಿತಿ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ರಾಷ್ಟ್ರದ ಉದ್ದಗಲಕ್ಕೂ ಹೆದ್ದಾರಿ, ಕೃಷಿ ಪದಾರ್ಥಗಳ ಸಾಗಾಣಿಕೆಗೆ ಗ್ರಾಮ ಸಡಕ್ ಹಾಗೂ ಪಾಕಿಸ್ತಾನದ ಮೋಸದಾಟಕ್ಕೆ ದಿಟ್ಟ ಹೆಜ್ಜೆಯಿಟ್ಟ ಆಟಲ್ ಬಿಹಾರಿ ವಾಜಪೇಯಿ ಅಪರೂಪದ ರಾಜಕಾರಣಿ ಎಂದು ಆಟಲ್‌ಜೀ ಜನ್ಮಶತಮಾನೋತ್ಸವ ಸಮಿತಿ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ ಹೇಳಿದರು.

ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿ ಸಭಾಂಗಣದಲ್ಲಿ ನಡೆದ ಆಟಲ್ ಜೀ ವಿರಾಸತ್ ಜಿಲ್ಲಾ ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸ ನೀಡಿದರು. ರಾಷ್ಟ್ರಕ್ಕಾಗಿ ನಿರಂತರ ದುಡಿಯುವ ಹಬಲವಿದ್ದ ಆಟಲ್‌ಜೀ ಅವಿವಾಹಿತರಾಗಿ, ಸಂಪೂರ್ಣ ಬದುಕನ್ನು ಭಾರತಾಂಬೆಗೆ ಮುಡಿಪಿಟ್ಟವರು. ಬ್ರಿಟಿಷರ ಆಳ್ವಿಕೆ ಕಹಿ ಘಟನೆಗಳಿಂದಲೇ ಬೆಳೆದಿದ್ದ ಅವರಿಗೆ ಬಾಲ್ಯ ದಿಂದಲೇ ದೇಶಭಕ್ತಿ ಚಿಲುಮೆ ಚಿಗುರೊಡೆದಿತ್ತು. ಬಳಿಕ ಜನಸಂಘದಲ್ಲಿ ತೊಡಗಿ ಹಿಂದುತ್ವದ ಪ್ರತೀಕವಾಗಿ ಹೋರಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಜನಸಂಘ ಸಂಘಟನೆ ಬಳಿಕ ದೇಶದ ಅಸ್ಮಿತೆ, ಸಂಸ್ಕೃತಿ ಉಳಿವಿಗೆ 1980ರಲ್ಲಿ ಪ್ರಬಲ ಬಿಜೆಪಿ ರಾಜಕೀಯ ಪಕ್ಷ ಸ್ಥಾಪಿಸಿ ದರು. ಮೊದಲು ಸೋತರು ಕೂಡಾ ಧೃತಿಗೆಡದೇ ಕಾರ್ಯಕರ್ತರ ಹುರುಪು ಹೆಚ್ಚಿಸಿ ಬೆನ್ನಲುಬಾಗಿ ನಿಂತರು. ಮೊದಲ ಬಾರಿ ಸಂಸದರಾಗಿ ವಾಜಪೇಯಿ ಆಯ್ಕೆಗೊಂಡ ತಕ್ಷಣವೇ ಕಾಂಗ್ರೆಸ್ ನಾಯಕರಲ್ಲಿ ಹೆದರಿಕೆ, ಭಯ ಮನೆ ಮಾಡಿತು ಎಂದು ಹೇಳಿದರು.

ರಾಷ್ಟ್ರದ ಪ್ರಧಾನಿ ಹುದ್ದೆ ಅಲಂಕರಿಸುವರು ಎಂದು ಮೊದಲೇ ಹೇಳಿದ್ದ ನೆಹರು ಮಾತಿಗೆ ಸಂಸದರಾದ ಆಟಲ್‌ಜೀ ಗುರಿಯೇ ಭವ್ಯ ಭಾರತದ ನಿರ್ಮಾಣವಾಗಿತ್ತು. ಅಲ್ಲದೇ ದೇಶವ್ಯಾಪಿ ಪ್ರವಾಸ ಕೈಗೊಂಡರು. ವಿಶೇಷವಾಗಿ ಕರ್ನಾಟಕ ಹಾಗೂ ಆಟಲ್‌ಜೀ ಗೂ ಅವಿನಾಭವ ಸಂಬಂಧವಿದೆ. ರಾಜ್ಯಾದ್ಯಂತ ಪ್ರವಾಸ ಕೈಗೊಂಡು ದಕ್ಷಿಣ ಭಾರತದಲ್ಲಿ ಕಮಲ ಅರಳಿತು ಎಂದರು.

ಭಾಜಪ ಅಧಿಕಾರಕ್ಕೂ ಮುನ್ನ ವಿಶ್ವದ ಅನೇಕ ದೇಶಗಳು, ಭಾರತವನ್ನು ನೋಡುವ ದೃಷ್ಟಿಕೋನವೇ ಬೇರೆಯಿತ್ತು. ಆಟಲ್‌ ಜೀ ಪ್ರಧಾನ ಮಂತ್ರಿಯಾದ ಬಳಿಕ ಇಡೀ ಜಗತ್ತು ಭಾರತದ ಗಟ್ಟಿತನದ ಮಾತನ್ನು ಕೇಳುವಂತಾಯಿತು. ಶತ್ರುಗಳನ್ನು ಸದೆಬಡಿಯಲು ಸೈನಿಕರಿಗೆ ಶಕ್ತಿತುಂಬಿ ಕಾರ್ಗಿಲ್ ವಿಜಯೋತ್ಸವ ರೂವಾರಿಯಾದರು ಎಂದು ಬಣ್ಣಿಸಿದರು.

ಮಾತನಾಡಿದ ಬಿಜೆಪಿ ರೈತ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ರಾಜಕೀಯ ಮುತ್ಸದಿ ಜೊತೆಗೆ ಕವಿ ಹೃದಯದ ಆಟಲ್‌ಜೀ, ಪ್ರತಿ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕ್ಕೆ ಹೆಸರಾದವರು. ಅಲ್ಲದೇ ಆಟಲ್ ಜೀ ಭಾಷಣವೆಂದರೆ ದೇಶ ಭಕ್ತಿಯಿಂದ ಕೂಡಿದ ಕಾರಣ ಕೆಲವು ವಿರೋಧಪಕ್ಷದ ನಾಯಕರು ಆಲಿಸುತ್ತಿದ್ದರು ಎಂದರು.

ರಾಷ್ಟ್ರದಲ್ಲಿ ಎಡಪಂಥೀಯ ಆಳ್ವಿಕೆಯನ್ನು ಸರಿಸಿ, ನೈಜ ಸತ್ಯವನ್ನು ಜನತೆಗೆ ಪರಿಚಯಿಸಲು ಹಾಗೂ ದೇಶದ ಅಸ್ಮಿತೆ, ರಾಷ್ಟ್ರೀಯತೆ ಉಳಿವಿಗಾಗಿ ಬಿಜೆಪಿ ಪಕ್ಷ ಸ್ಥಾಪಿಸಿ ಪ್ರಬಲತೆ ಹೆಚ್ಚಿಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಸೈನಿಕರು ದುರ್ಬಲ ರಿದ್ದರು. ಬಿಜೆಪಿ ಅಧಿಕಾರದಲ್ಲಿ ಸೈನಿಕರಿಗೆ ಅತೀವ ಶಕ್ತಿ ದೊರೆತು, ಶತೃಗಳಿಗೆ ತಕ್ಕಪಾಠ ಕಲಿಸಲು ಕಾರಣೀಭೂತರು ಆಟಲ್‌ಜೀ ಕಾರ್ಯತಂತ್ರ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ, ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಿಂದ ಆಟಲ್ ಜೀ ವಿರಾಸತ್ ಜಿಲ್ಲಾ ಸಮ್ಮೇಳನಕ್ಕೆ ಆರಂಭಗೊಂಡಿದೆ. ಚಿಕ್ಕಮಗಳೂರು, ಆಲ್ದೂರು ಭಾಗದಲ್ಲೂ ಅಂದಿನ ಕಾಲಘಟ್ಟದಲ್ಲಿ ವಾಜಪೇಯಿ ಭೇಟಿ ನೀಡಿರುವ ಪುರಾವೆಗಳಿವೆ ಎಂದು ತಿಳಿಸಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರೇಮ್‌ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಡಾ. ನರೇಂದ್ರ, ಪುಣ್ಯಪಾಲ್, ರವೀಂದ್ರ ಬೆಳವಾಡಿ, ವಕ್ತಾರ ಸಿ.ಎಚ್.ಲೋಕೇಶ್, ನಗರಾಧ್ಯಕ್ಷ ಕೆ.ಎಸ್.ಪುಷ್ಪ ರಾಜ್, ಗ್ರಾಮಾಂತರ ಮಂಡಲ ಅಧ್ಯಕ್ಷ ವಿಜಯ್‌ ಕುಮಾರ್, ಸಿಡಿಎ ಮಾಜಿ ಅಧ್ಯಕ್ಷ ಕೋಟೆ ರಂಗನಾಥ್, ಜಿಪಂ ಮಾಜಿ ಅಧ್ಯಕ್ಷ ಚೈತ್ರಶ್ರಿ ಮಾಲತೇಶ್, ಮುಖಂಡರಾದ ದೀಪಕ್‌ ದೊಡ್ಡಯ್ಯ, ಸೀತಾರಾಮ ಭರಣ್ಯ, ಜಸಂತಾ ಅನಿಲ್‌ಕುಮಾರ್, ವೀಣಾ, ಸವಿತಾ ರಮೇಶ್, ಹಿರಿಯರಾದ ಕೃಷ್ಣಸ್ವಾಮಿ, ಎನ್.ಕೇಶವ, ಉದಯ್ ಉಪಸ್ಥಿತರಿದ್ದರು.