ಆರ್‌ವಿಡಿ ಅಪರೂಪದ ರಾಜಕಾರಣಿ: ಸದಾನಂದ ದಬಗಾರ

| Published : Mar 17 2025, 12:33 AM IST

ಸಾರಾಂಶ

ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ ಬರೆದ ನಾಯಕ ಆರ್.ವಿ. ದೇಶಪಾಂಡೆ

ಜೋಯಿಡಾ: ಇಲ್ಲಿನ ಜೋಯಿಡಾ- ಹಳಿಯಾಳ ಕ್ಷೇತ್ರದಲ್ಲಿ ಜಾತಿ, ಮತ ಭೇದ ಮರೆತು ಅಭಿವೃದ್ಧಿ ಅಂದರೆ ರಾಜಕೀಯವೆಂದು ನಂಬಿ, ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ ಬರೆದ ನಾಯಕ ಆರ್.ವಿ. ದೇಶಪಾಂಡೆ ಎಂದು ಕೆಪಿಸಿಸಿ ಸದಸ್ಯ ಸದಾನಂದ ದಬಗಾರ ಹೇಳಿದರು.

ಅವರು ಆರ್.ವಿ. ದೇಶಪಾಂಡೆ ಅವರ 78ನೇ ಹುಟ್ಟುಹಬ್ಬದ ನಿಮಿತ್ತ ಜೋಯಿಡಾ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಿ ನಂತರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ರಾಜ್ಯ ಕಂಡ ಅಪರೂಪದ ರಾಜಕಾರಣಿಗಳಲ್ಲಿ ದೇಶಪಾಂಡೆ ಒಬ್ಬರಾಗಿದ್ದಾರೆ. ಅವರ ಜನ್ಮದಿನ ಆಚರಣೆ ಮಾಡುತ್ತಿರುವುದು ನಮಗೆ ಹೆಮ್ಮೆಯಿದೆ. ಅವರಿಗೆ ಭಗವಂತ ಆಯೂರ್ ಆರೋಗ್ಯ ದಯಪಾಲಿಸಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಗಾವಡೆ, ಯುವ ಅಧ್ಯಕ್ಷ ಅಕ್ಷಯ ರಾವಳ್, ಡಿಸಿಸಿ ಸದಸ್ಯ ಸಂಜಯ್ ಹಣಬರ, ಅವೇಡಾ ಗ್ರಾಪಂ ಅಧ್ಯಕ್ಷ ಅರುಣ ಭಗವತಿರಾಜ, ಪ್ರಭಾವತಿ ಪಾಟೇಕರ್, ಗ್ರಾಪಂ ಸದಸ್ಯ ಶ್ರೀಧರ ದಬಗಾರ, ಕಾಂಗ್ರೆಸ್ ಮುಖಂಡ ಸುರೇಶ್ ಗಾವಡಾ, ಗಜಾನನ ದೇಸಾಯಿ, ಕಿಸಾನ್ ಘಟಕದ ಅಧ್ಯಕ್ಷ ಶರಣಪ್ಪ ಗದ್ದಿ, ಎಸ್ಟಿ ಅಧ್ಯಕ್ಷ ಸಹದೇವ ಕಾಂಬ್ಳೆ, ರತನ ಕಲಮಲಕರ, ಮಾಜಿ ಗ್ರಾಪಂ ಅಧ್ಯಕ್ಷ ದಿಲಶಾದ್ ಖತೀಬ, ಡಾ.ಅನಿಲ್ ಜೊಯಿಡಾ, ಕಾರ್ಯಕರ್ತರು ಇದ್ದರು.