ಅಟಲ್‌ ಜೀ ಪ್ರಾಮಾಣಿಕತೆ ರಾಜಕಾರಣಿಗಳಿಗೆ ಪ್ರೇರಣೆ: ಶಾಸಕ ಗುಡಗುಂಟಿ

| Published : Dec 26 2024, 01:03 AM IST

ಅಟಲ್‌ ಜೀ ಪ್ರಾಮಾಣಿಕತೆ ರಾಜಕಾರಣಿಗಳಿಗೆ ಪ್ರೇರಣೆ: ಶಾಸಕ ಗುಡಗುಂಟಿ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿವೇಶನದಲ್ಲಿ ಅಟಲ್ ಜೀ ಅವರ ವಿಚಾರಧಾರಗಳನ್ನು ಇಡೀ ಸದನವೇ ಮೌನವಾಗಿ ಕೇಳುತ್ತಿತ್ತು. 1996ರಲ್ಲಿ ಕೇವಲ ಒಂದು ಮತದಿಂದ ಸರಕಾರ ರಚನೆಯಲ್ಲಿ ವಿಫಲರಾದ ಸಂದರ್ಭದಲ್ಲಿ ಅಟಲ್‌ಜೀ ಅವರ ಭಾಷಣ ವಿಪಕ್ಷಗಳನ್ನು ಮೌನಕ್ಕೆ ತಳ್ಳಿತ್ತು.

ಕನ್ನಡಪ್ರಭ ವಾರ್ತೆ ಜಮಖಂಡಿ

ದೇಶಕಂಡ ಮಾಜಿ ಪ್ರಧಾನಿ, ಅಜಾತ ಶತೃ ಅಟಲ್‌ ಬಿಹಾರಿ ವಾಜಪೇಯಿ ಅವರ ಪ್ರಾಮಾಣಿಕ ರಾಜಕಾರಣ ಎಲ್ಲ ರಾಜಕೀಯ ನಾಯಕರಿಗೆ ಪ್ರೇರಣಾ ದಾಯಕವಾಗಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಅಭಿಪ್ರಾಯಪಟ್ಟರು.

ಬುಧವಾರ ಶಾಸಕರ ಗೃಹ ಕಚೇರಿಯಲ್ಲಿ ಏರ್ಪಡಿಸಿದ್ದ ವಾಜಪೇಯಿ ಅವರ 100ನೇ ಜನ್ಮದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಧಿವೇಶನದಲ್ಲಿ ಅಟಲ್ ಜೀ ಅವರ ವಿಚಾರಧಾರಗಳನ್ನು ಇಡೀ ಸದನವೇ ಮೌನವಾಗಿ ಕೇಳುತ್ತಿತ್ತು. 1996ರಲ್ಲಿ ಕೇವಲ ಒಂದು ಮತದಿಂದ ಸರಕಾರ ರಚನೆಯಲ್ಲಿ ವಿಫಲರಾದ ಸಂದರ್ಭದಲ್ಲಿ ಅಟಲ್‌ಜೀ ಅವರ ಭಾಷಣ ವಿಪಕ್ಷಗಳನ್ನು ಮೌನಕ್ಕೆ ತಳ್ಳಿತ್ತು. ನಂತರದ ದಿನಗಳಲ್ಲಿ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿ ಸರಕಾರದ ವಿವಿಧ ಯೋಜನೆಗಳ ಮೂಲಕ ದೇಶದ ಪ್ರತಿಯೊಂದು ಹಳ್ಳಿಗಳನ್ನು ಸಂಪರ್ಕಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಪ್ರಧಾನ ಮಂತ್ರಿ ಗ್ರಾಮೀಣ ಸಡಕ ಯೋಜನೆ, ಶುದ್ಧ ಕುಡಿಯುವ ನೀರು, ವಿದ್ಯುತ್ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಮಾಡಿ ಪ್ರತಿ ನಾಗರಿಕರಿಗೂ ಸೌಲಭ್ಯಗಳು ದೊರೆಯುವಂತೆ ಮಾಡಿದರು. ವಿಶ್ವಸಂಸ್ಥೆ ನಿರ್ಬಂಧದ ನಡುವೆ ಅಣುಬಾಂಬ ಪರೀಕ್ಷೆ ಮಾಡುವ ಮೂಲಕ ದೇಶವನ್ನು ಮುಂದುವರೆದ ರಾಷ್ಟ್ರಗಳ ಸಾಲಿಗೆ ಸೇರಿಸಿದರು ಎಂದು ವಿವರಿಸಿದರು.

ಜಿಲ್ಲಾ ಉಪಾಧ್ಯಕ್ಷ ಈಶ್ವರ ಆದೆಪ್ಪನವರ ಮಾತನಾಡಿ, ಜನಸಂಘದಿಂದ ಬೇರ್ಪಟ್ಟ ನಂತರ ಡಾ.ಶ್ಯಾಮಾ ಪ್ರಸಾದ ಮುಖರ್ಜಿ, ಪಂಡಿತ ದೀನದಯಾಳ ಉಪಾಧ್ಯಾಯರೊಂದಿಗೆ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಲಾಲ್‌ ಕೃಷ್ಣ ಅಡ್ವಾನಿ ಅವರು ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಿದರೆಂದರು. ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ ಮಾತನಾಡಿ, ಅಟಲ್‌ಜೀ ಸಾಮಾನ್ಯ ಬಡಕುಟುಂಬದಲ್ಲಿ ಜನಿಸಿ ಕಾನೂನು ಪದವಿ ಪಡೆದರು ಬಾಲ್ಯದಿಂದಲೇ ಎಬಿವಿಪಿ ಕಾರ್ಯದಲ್ಲಿ ತೊಡಗಿ ಸಾರ್ವಜನಿಕರ ಅನುಕೂಲತೆಗಾಗಿ ಸಾಕಷ್ಟು ಚಳವಳಿ ಹಮ್ಮಿಕೊಂಡು ನಾಲ್ಕು ವರ್ಷಗಳ ಕಾಲ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು ಎಂದರು.

ಡಾ.ವಿಜಯಲಕ್ಷ್ಮೀ ತುಂಗಳ, ಗೀತಾ ಸೂರ್ಯವಂಶಿ ಮಾತನಾಡಿದರು. ಪ್ರಕಾಶ ಹುಗ್ಗೆನ್ನವರ ಸ್ವಾಗತಿಸಿ, ವಂದಿಸಿದರು. ಸಂಗಮೇಶ ದಳವಾಯಿ, ಕೃಷ್ಣಾ ತಳವಾರ ವಿಸ್ವಾಸ ಪಾಟೀಲ, ಹುಸನಪ್ಪ ಚಲವಾಧಿ, ಗಣೇಶ ಶಿರಗಣ್ಣವರ, ಶಂಕರ ಕಾಳೆ, ಸಂತೋಷ ಮಾನೆ, ವಿನಾಯಕ ಗವಳಿ, ಸಚೀನ ಅಸುಗಡೆ, ಶ್ಯಾಮ ಗಣಾಚಾರಿ, ಸುಚಿತಾ ಭೂತಡಾ, ರೂಪಾ ಘೇವಾರಿ, ಮಲ್ಲು ದಾನಗೌಡ, ರಾಜು ಗೆಣ್ಣೂರ, ಬಸಪ್ಪ ಕಡಪಟ್ಟಿ, ಪರಶುರಾಮ ಬಿಸನಾಳ, ಮಲ್ಲು ದೇಸಾಯಿ, ಮಾಧ್ಯಮ ಸಂಚಾಲಕ ಶ್ರೀಧರ ಕಂಬಿ ಹಾಗೂ ಇತರರಿದ್ದರು.