ಸಾರಾಂಶ
ಮಸ್ಕಿ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಾಧನಿ ಅಟಲ್ ಬಿಹಾರಿ ವಾಜಪೇಯಿಯವರ 100ನೇ ಜನ್ಮದಿನಾಚರಣೆ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಮಸ್ಕಿ
ಪಟ್ಟಣದ ಬಸವೇಶ್ವರ ನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನ ಆಚರಿಸಲಾಯಿತು.ಮಾಜಿ ಶಾಸಕ ಪ್ರತಾಪ್‌ಗೌಡ ಪಾಟೀಲ್ ಮಾತನಾಡಿ, ವಾಜಪೇಯಿ ಅವರು ನಾಯಕರಾಗಿ ಅಪಾರ ಗೌರವ ಮತ್ತು ಮೆಚ್ಚುಗೆ ಗಳಿಸುವುದರ ಮೂಲಕ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆಗಳಿಗೆ ಹೆಸರುವಾಸಿಯಾಗಿದ್ದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಮೂಲಕ ಹಳ್ಳಿಗಳ ಸಂಪರ್ಕ ಹೆಚ್ಚಿಸಿದರು. ಸದೃಢ ಹಾಗೂ ಸಮೃದ್ಧ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಅವರ ಶ್ರೇಷ್ಠ ವ್ಯಕ್ತಿತ್ವವನ್ನು ದೇಶ ಸ್ಮರಿಸುತ್ತಿದೆ, ಅವರ ಆದರ್ಶಯುತ ಜೀವನ ಮತ್ತು ಸಾಧನೆಗಳು ದೇಶದ ಅಭಿವೃದ್ಧಿಯ ಪಥ ಮುನ್ನಡೆಯಲು ನಿತ್ಯ ನಿರಂತರ ಮಾರ್ಗದರ್ಶಿಯಾಗಿವೆ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ಶರಣಬಸವ ಸೊಪ್ಪಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ರಾಜ್‌ಗುರು, ಜಿಲ್ಲಾ ಕಾರ್ಯದರ್ಶಿ ಯಲ್ಲೋಜಿರಾವ್, ಸಿದ್ದಣ್ಣ ಹೂವಿನಬಾವಿ, ಪಂಪಣ್ಣ ಗುಂಡಳ್ಳಿ, ಡಾ.ಪಂಚಾಕ್ಷರಿ ಸ್ವಾಮಿ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಪ್ರಸನ್ನ ಪಾಟೀಲ್, ರಮೇಶ್ ಉದ್ಬಾಳ್, ಮೌನೇಶ್ ನಾಯಕ್, ಪುರಸಭೆ ಸದಸ್ಯರಾದ ಮೌನೇಶ್ ಮುರಾರಿ ಸುರೇಶ್ ಅರಸೂರ್, ಶಿವರಾಜ್ ಬುಕ್ಕಣ್ಣ ಸೇರಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಕಾರ್ಯಕರ್ತರು ಭಾಗಿಯಾಗಿದ್ದರು.