ಅಥರ್ವ ಕಾಲೇಜಿಗೆ ಶೇ.95 ಫಲಿತಾಂಶ

| Published : Apr 09 2025, 12:48 AM IST

ಸಾರಾಂಶ

ನಾಗನೂರಿನ ಅಥರ್ವ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ 2024-25ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಧು ಶ್ರೀಕಾಂತ ಹುರಕನ್ನವರ ಶೇ.97.16 ಮೂಲಕ ಚಿಕ್ಕೋಡಿ ಜಿಲ್ಲೆಗೆ 5ನೇ ಸ್ಥಾನ ಪಡೆದಿದ್ದಾಳೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ನಾಗನೂರಿನ ಅಥರ್ವ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ 2024-25ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಧು ಶ್ರೀಕಾಂತ ಹುರಕನ್ನವರ ಶೇ.97.16 ಮೂಲಕ ಚಿಕ್ಕೋಡಿ ಜಿಲ್ಲೆಗೆ 5ನೇ ಸ್ಥಾನ ಪಡೆದಿದ್ದಾಳೆ. ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ ಎರಡೂ ಸೇರಿ 168 ವಿದ್ಯಾರ್ಥಿಗಳಲ್ಲಿ ಇಬ್ಬರು ವಿದ್ಯಾಥಿಗಳು ಗೈರಾಗಿ 166 ವಿದ್ಯಾರ್ಥಿಗಳು ಪರೀಕ್ಷೆ-1 ಬರೆದಿದ್ದರು. ಈ ಪೈಕಿ 158 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.95.18ರಷ್ಟು ಫಲಿತಾಂಶ ಪಡೆದಿದೆ. ಇದರಲ್ಲಿ 32 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 104 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಮಧು ಹುರಕನ್ನವರ 583 ಅಂಕ ಪ್ರಥಮ, ಆಕಾಶ ಅರಭಾಂವಿ 571 ಅಂಕ ದ್ವಿತೀಯ, ಅನ್ನಪೂರ್ಣಾ ಮುಕ್ಕನ್ನವರ 570 ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಅರ್ಚನಾ ಗಂಗನ್ನವರ 567 ಅಂಕ ಪ್ರಥಮ, ವಿಜಯಕುಮಾರ್ ಅಳಗೋಡಿ 564 ಅಂಕ ದ್ವಿತೀಯ, ಶ್ರೀನಿಧಿ ಕಳ್ಳಿಗುದ್ದಿ 559 ಅಂಕ ತೃತೀಯ ಸ್ಥಾನ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಭೂಮಿಕಾ ಹುಲಕುಂದ ಹಾಗೂ ಸೂರಜ ಮುಧೋಳ ಮತ್ತು ವಾಣಿಜ್ಯ ವಿಭಾಗದಲ್ಲಿ ದೀಪಾ ವಡೇರ, ಗೀತಾ ಸಬರದ, ಕೀರ್ತಿ ಕುರಣಿ, ಶಿಲ್ಪಾ ಹುಲಕುಂದ ಅವರು ಶೇ.90ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ.ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಮಾರ್ಗದರ್ಶಕರಾದ ಬಸನಗೌಡ ಆರ್.ಪಾಟೀಲ, ಅಧ್ಯಕ್ಷ ವೆಂಕಟೇಶ ಜಂಬಗಿ, ಪ್ರಾಚಾರ್ಯ ಗಿರೀಶ ಗೋರಬಾಳ, ನಿರ್ದೇಶಕ ಡಾ.ಸಂತೋಷ ಮಿರ್ಜಿ, ಚೇತನ ಜೋಗನ್ನವರ ಉಪನ್ಯಾಸಕರಾದ ಆರ್.ಸಿ.ನಿರ್ವಾಣಿ, ರಾಜೇಂದ್ರ ಪಾಟೀಲ, ಎಸ್.ಡಿ. ವಾಲಿ, ಸಿದ್ದೇಶ್ವರ ಮೆಳವಂಕಿ ಹಾಗೂ ಕಿರಣ ಮರೆಪ್ಪಗೋಳ, ಕರೆಪ್ಪ ಕಂಡ್ಯಾಗೋಳ, ಮಂಜುನಾಥ ಹಟ್ಟಿ ಸೇರಿ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದೆ.ಪಿಯು ಪರೀಕ್ಷೆಯಲ್ಲಿ ಎಲ್ಲ ವಿಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಅವರ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಮಾತ್ರವಲ್ಲ, ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಪರಿಶ್ರಮವೂ ಇದೆ. ಈ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಸ್ಥೆ ಮುನ್ನುಡಿಯಾಗಿರುವುದು ಈ ಫಲಿತಾಂಶದಿಂದ ಸಾಬೀತಾಗಿದೆ. ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಿರಲೆಂದು ಹಾರೈಸುವೆ.

- ವೆಂಕಟೇಶ ಜಂಬಗಿ,

ಅಧ್ಯಕ್ಷರು, ಅಥರ್ವ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ನಾಗನೂರ