ಸಾರಾಂಶ
ಅತಿಕಾರಿಬೆಟ್ಟು ಸಂಜೀವಿನಿ ಕಟ್ಟಡದ ಸಭಾಭವನದಲ್ಲಿ ಮಣಿಪಾಲ್ ಪೇಮೆಂಟ್ ಮತ್ತು ಐಡೆಂಟಿಟಿ ಸೊಲ್ಯೂಷನ್ಸ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಅತಿಕಾರಿಬೆಟ್ಟು ಸ್ಪಂದನ ಸಂಜೀವಿನಿ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ನೇತೃತ್ವದಲ್ಲಿ ಹಣಕಾಸು ಸಾಕ್ಷರತೆ, ಸೋಲಾರ್ ಜೀವನೋಪಾಯ ಸೌಲಭ್ಯ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರಾಗಲು ಸರ್ಕಾರ ಹಾಗೂ ಸೇವಾ ಸಂಸ್ಥೆಗಳು ಹಲವು ಯೋಜನೆಗಳನ್ನು ರೂಪಿಸಿದ್ದು, ಸವಲತ್ತುಗಳನ್ನು ಪಡೆದು ಸಾಧಕರಾಗಬೇಕೆಂದು ಅತಿಕಾರಿಬೆಟ್ಟು ಶಾಂಭವಿ ತಾಲೂಕುಮಟ್ಟ ಮತ್ತು ಸ್ಪಂದನ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಭಾನುಮತಿ ಶೆಟ್ಟಿ ಹೇಳಿದರು.ಅತಿಕಾರಿಬೆಟ್ಟು ಸಂಜೀವಿನಿ ಕಟ್ಟಡದ ಸಭಾಭವನದಲ್ಲಿ ಮಣಿಪಾಲ್ ಪೇಮೆಂಟ್ ಮತ್ತು ಐಡೆಂಟಿಟಿ ಸೊಲ್ಯೂಷನ್ಸ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಅತಿಕಾರಿಬೆಟ್ಟು ಸ್ಪಂದನ ಸಂಜೀವಿನಿ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ನೇತೃತ್ವದಲ್ಲಿ ನಡೆದ ಹಣಕಾಸು ಸಾಕ್ಷರತೆ, ಸೋಲಾರ್ ಜೀವನೋಪಾಯ ಸೌಲಭ್ಯ ಬಗ್ಗೆ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡಿ, ಬ್ಯಾಂಕ್ ಸೌಲಭ್ಯಗಳ ಬಗ್ಗೆ ತಿಳಿದು ನಾವು ಆರ್ಥಿಕವಾಗಿ ಸಾಕ್ಷರರಾಗಬೇಕು. ಬ್ಯಾಂಕ್ ಹೆಸರಲ್ಲಿ ನಡೆಯುವ ಡಿಜಿಟಲ್ ಮೋಸದ ಬಗ್ಗೆ ತಿಳಿದು ಜಾಗ್ರತೆ ವಹಿಸಬೇಕೆಂದು ಹೇಳಿದರು.ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಜೀವನ್ ಕೊಲ್ಯ, ಅತಿಕಾರಿಬೆಟ್ಟು ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ಅಭಿವೃದ್ಧಿ ಅಧಿಕಾರಿ ಶೈಲಜಾ, ಉಪಾಧ್ಯಕ್ಷ ಮನೋಹರ ಕೋಟ್ಯಾನ್, ಎನ್‌ಆರ್‌ಎಲ್‌ಎಂ ತಾಲೂಕು ಅಧಿಕಾರಿ ನಿಖಿಲ್ ಎಂಬಿಕೆ, ಸತ್ಯ ಶೆಟ್ಟಿ, ಗೀತ, ಸುನಿಲ್, ಪ್ರೇಮಲತಾ ಮತ್ತಿತರರು ಉಪಸ್ಥಿತರಿದ್ದರು. ಆರ್ಥಿಕ ಸಾಕ್ಷರತೆ ಬಗ್ಗೆ ಸಂಪನ್ಮೂಲ ವ್ಯಕ್ತಿ ಲತೇಶ್ ಮಾಹಿತಿ ನೀಡಿದರು.