ಉಡುಪಿ ಶ್ರೀಕೃಷ್ಣ ಮಠದ ಐತಿಹಾಸಿಕ ಚತುರ್ಥ, ವಿಶ್ವಗೀತಾ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿ ಅಮೆರಿಕಕ್ಕೆ ಆಗಮಿಸಿದ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಅಲ್ಲಿನ ಅಟ್ಲಾಂಟಾ ಮಹಾನಗರದಲ್ಲಿ ಗುರು ಅಭಿವಂದನೆ ಸಲ್ಲಿಸಲಾಯಿತು.

ಉಡುಪಿ : ಉಡುಪಿ ಶ್ರೀಕೃಷ್ಣ ಮಠದ ಐತಿಹಾಸಿಕ ಚತುರ್ಥ, ವಿಶ್ವಗೀತಾ ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿ ಅಮೆರಿಕಕ್ಕೆ ಆಗಮಿಸಿದ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಅಲ್ಲಿನ ಅಟ್ಲಾಂಟಾ ಮಹಾನಗರದಲ್ಲಿ ಗುರು ಅಭಿವಂದನೆ ಸಲ್ಲಿಸಲಾಯಿತು.ಅಭಿನಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಪಾದರು, ಅಟ್ಲಾಂಟಾದ ಈ ಸಂಭ್ರಮವನ್ನು ತಮ್ಮ ಚತುರ್ಥ ಪರ್ಯಾಯದ ಮಂಗಳೋತ್ಸವವೆಂದೇ ಭಾವಿಸುವುದಾಗಿ ಹೇಳಿದರು. ಪರ್ಯಾಯೋತ್ಸವದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದ ಲಕ್ಷಕಂಠ ಗೀತಾ ಮಹೋತ್ಸವವನ್ನೂ ಸ್ಮರಿಸಿದ ಅವರು, ಪರ್ಯಾಯದ ಯಶಸ್ಸಿಗೆ ವಿಶ್ವದಾದ್ಯಂತದ ಭಕ್ತರ ಪ್ರಾರ್ಥನೆ, ಭಕ್ತಿ ಮತ್ತು ಸಹಕಾರವೇ ಪ್ರಮುಖ ಕಾರಣ ಎಂದು ಕೃತಜ್ಞತೆ ಸಲ್ಲಿಸಿದರು.

ಅಟ್ಲಾಂಟಾ ಶ್ರೀಕೃಷ್ಣ ವೃಂದಾವನದ ಪ್ರಧಾನ ಅರ್ಚಕ ಜಯಪ್ರಸಾದ್, ಅಟ್ಲಾಂಟಾ ಶ್ರೀಕೃಷ್ಣ ಮಂದಿರ ನಿರ್ಮಾಣದ ಹಿಂದಿರುವ ಶ್ರೀಪಾದರ ಮಹಾಸಂಕಲ್ಪವನ್ನು ಸ್ಮರಿಸಿ, ಪ್ರಸನ್ನಾಚಾರ್ಯರ ನಿರಂತರ ಮಾರ್ಗದರ್ಶನ ಹಾಗೂ ವಿವೇಕ್ ಅವರ ಅವಿರತ ಪರಿಶ್ರಮ ಮತ್ತು ತ್ಯಾಗವನ್ನು ಕೊಂಡಾಡಿದರು.

ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೃತಿ ಉದಯ್ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ ರಾವ್ ಸ್ವಾಗತಿಸಿದರು ಹಾಗೂ ಮುರಳಿ ಕುರುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.