ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ) ಮಂಗಳೂರು ಇದರ ಪ್ರಧಾನ ಕಚೇರಿಯಲ್ಲಿ ಸ್ವಾತಂತ್ಯೋತ್ಸವವನ್ನು ಗುರುವಾರ ಆಚರಿಸಲಾಯಿತು. ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಇವರ ಅಧ್ಯಕ್ಷತೆಯಲ್ಲಿ ಏರ್ಪಟ್ಟಿತು.ನಿವೃತ್ತ ಯೋಧ ಕ್ಯಾಪ್ಟನ್ ಶ್ರೀನಿವಾಸ ಅಮೀನ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸೇನೆಯ ಸೇವೆಯಲ್ಲಿರುವಾಗ ಯುದ್ಧದ ಸಂದರ್ಭದಲ್ಲಿ ತಾವು ಪಾಲ್ಗೊಂಡಿದ್ದ ಕಾರ್ಯಚರಣೆ ಪ್ರಸ್ತಾಪಿಸಿ ಬಾವುಕರಾದರು.
ಭಾರತೀಯ ವಾಯುಪಡೆಯ ನಿವೃತ್ತ ಯೋಧರು ಹಾಗೂ ಸಹಕಾರ ಸಂಘಗಳ ನಿವೃತ್ತ ಉಪನಿಬಂಧಕ ಚಂದ್ರಶೇಖರ್ ಸುವರ್ಣ ಮಾತನಾಡಿ, ದೇಶ ಸೇವೆಯಲ್ಲಿ ಸೇನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉತ್ತರ ಭಾರತದವರು ಸೇವೆ ಸಲ್ಲಿಸುತ್ತಿದ್ದು, ನಮ್ಮ ಕರಾವಳಿ ಭಾಗದವರ ಸಂಖ್ಯೆ ತುಂಬಾ ಕಡಿಮೆ ಇದೆ. ದೇಶ ಸೇವೆಯಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು. ಅಗ್ನಿಪಥ್ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ಭವಿಷ್ಯದಲ್ಲಿ ಸೇನೆಗೆ ಸೇರುವವರಿಗೆ ಇದು ಒಂದು ಉತ್ತಮ ವೇದಿಕೆ ಆಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ಸೇನೆಯಲ್ಲಿ ಆದ್ಯತೆ ನೀಡಲಾಗುತ್ತಿದ್ದು, ಮಹಿಳೆಯರೂ ಕೂಡ ಅಧಿಕ ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದರು.ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಧ್ಯಕ್ಷ ಸ್ಥಾನದಿಂದ ಮಾತನಾಡಿ, ಸಂಘ ಪ್ರತಿ ವರ್ಷ ಸ್ವಾತಂತ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ದೇಶಕ್ಕಾಗಿ ಸೇವೆ ಮಾಡಿದ ಯೋಧರನ್ನು ಸನ್ಮಾನಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾ ಬರುತ್ತಿದೆ. ಈ ಬಾರಿ ದೇಶ ಸೇವೆಯ ಪರಮೋಚ್ಛ ಕಾಯಕದಲ್ಲಿ ಸುದೀರ್ಘ ೩೦ ವರ್ಷಗಳ ಕಾಲ ತನ್ನನ್ನು ತೊಡಗಿಸಿಕೊಂಡು, ಮೂರು ಯುದ್ದಗಳಾದ ಇಂಡೋ – ಚೀನಾ ಯುದ್ದ, ಭಾರತ - ಪಾಕಿಸ್ಥಾನ ಯುದ್ದ ಹಾಗೂ ಬಾಂಗ್ಲಾ ಯುದ್ದಗಳಲ್ಲಿ ಭಾಗವಹಿಸಿದ ಹೆಮ್ಮೆಯ ಯೋಧರು ಹಾಗೂ ‘ಮೆನ್ಷನ್ ಇನ್ ಡಿಸ್‌ಪ್ಯಾಚ್’ ಪ್ರಶಸ್ತಿ ಪುರಸ್ಕೃತರಾದ ಕ್ಯಾಪ್ಟನ್ ಶ್ರೀನಿವಾಸ ಅಮೀನ್ ರವರನ್ನು ಸನ್ಮಾನಿಸಲು ನಮ್ಮ ಸಂಘ ತುಂಬಾ ಹೆಮ್ಮೆ ಪಡುತ್ತಿದೆ. ದೇಶಕೋಸ್ಕರ ಹಲವು ಯುದ್ಧದಲ್ಲಿ ಭಾಗವಹಿಸಿ ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡ ಯೋಧರನ್ನು ಸನ್ಮಾನಿಸುವುದು ನಮ್ಮ ಭಾಗ್ಯವೆಂದರು.
ಈ ಸಂದರ್ಭದಲ್ಲಿ ನಿವೃತ್ತ ಯೋಧ ಹೊನರರಿ ಕ್ಯಾಪ್ಟನ್ ಶ್ರೀನಿವಾಸ ಅಮೀನ್ ಇವರನ್ನು ಸಂಘದ ವತಿಯಿಂದ ಸನ್ಮಾನಿಸುವ ಮೂಲಕ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷದ ನೇಮಿರಾಜ್ ಪಿ. ಸಂಘದ ನಿರ್ದೇಶಕರಾದ ಜಿ. ಪರಮೇಶ್ವರ ಪೂಜಾರಿ, ಆನಂದ ಎಸ್. ಕೊಂಡಾಣ, ಸೀತಾರಾಮ್ ಎನ್, ರಮಾನಾಥ್ ಸನಿಲ್, ದಿವಾಕರ್ ಬಿ.ಪಿ., ಗೋಪಾಲ್ ಎಂ, ಉಮಾವತಿ ಮತ್ತಿತರರು ಇದ್ದರು.ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ ಸ್ವಾಗತಿಸಿ, ಸಹಾಯಕ ಪ್ರಬಂದಕರಾದ ಶ್ರೀ ವಿಶ್ವನಾಥ ವಂದಿಸಿದರು. ಸಂಘದ ಹಿರಿಯ ಶಾಖಾಧಿಕಾರಿ ಶ್ರೀಮತಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.