ಮೂಡುಬಿದಿರೆ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಡ್ಯಾರ್ ಶಾಖೆಯ ನಾಲ್ಕನೇ ವಾರ್ಷಿಕೋತ್ಸವ ಹಾಗೂ ಗ್ರಾಹಕರ ಸಭೆ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅವರ ಅಧ್ಯಕ್ಷತೆಯಲ್ಲಿ ಅಡ್ಯಾರ್ ಶಾಖೆಯಲ್ಲಿ ಜರುಗಿತು. ಸಂಘದ ಗ್ರಾಹಕರಾದ ಜಯಶೀಲ ಅಡ್ಯಂತಾಯ, ಉಮೇಶ್ ಶೆಟ್ಟಿ ಹಾಗೂ ಹರೀಶ್ ಅಡ್ಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಘದ ಸದಸ್ಯರಾದ ಉಮೇಶ್ ಶೆಟ್ಟಿ ಮಾತನಾಡಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅವರ ಮೇಲುಸ್ತುವಾರಿಯಲ್ಲಿ ಗ್ರಾಹಕರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡುತ್ತಾ ಬರುತ್ತಿದೆ ಎಂದರು.ಸಂಘದ ಸದಸ್ಯರಾದ ಜಯಶೀಲ ಅಡ್ಯಂತಾಯ ಮಾತನಾಡಿ, ಸಂಘವು 35 ಶಾಖೆಗಳನ್ನು ಹೊಂದಿದ್ದು, ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಹಾಗೂ ಇನ್ನು ಮುಂದಕ್ಕೆ ಹೆಚ್ಚಿನ ಶಾಖೆಗಳನ್ನು ಹೊಂದಲಿ ಎಂದು ಶುಭ ಹಾರೈಸಿದರು.
ಅಡ್ಯಾರು ಶಾಖೆಯು ಗ್ರಾಹಕರಿಗೆ ಉತ್ತಮ ಶಾಖೆಯಾಗಿದ್ದು, ಉತ್ತಮ ಸೇವೆ ನೀಡುತ್ತಿದೆ ಎಂದು ಸದಸ್ಯರಾದ ಹರೀಶ್ ಅಡ್ಯಾರ್ ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ಹೆಚ್ಚಿನ ಸಿಬ್ಬಂದಿ ಮಹಿಳೆಯರಾಗಿದ್ದು, ಗ್ರಾಹಕರ ಸಹಕಾರದಿಂದ ಈ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರಲು ಸಾಧ್ಯವಾಗಿದೆ. ಸಂಘದ ಸದಸ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಚಿನ್ನಾಭರಣ ಸಾಲದ ಸೇವೆಯನ್ನು ಹೆಚ್ಚಾಗಿ ನೀಡಲಾಗುತ್ತಿದೆ. ಸಂಘವು ಕೇವಲ ಬ್ಯಾಂಕಿಂಗ್ ಮಾತ್ರವಲ್ಲದೆ, ವಿವಿಧ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದರು.
ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ., ನಿರ್ದೇಶಕ ಗೋಪಾಲ್ ಎಂ., ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಉಪಸ್ಥಿತರಿದ್ದರು. ಶಾಖೆಯ ಸಿಬ್ಬಂದಿ ನವ್ಯ ಸ್ವಾಗತಿಸಿ, ಅಶ್ವಿನಿ ವಂದಿಸಿದರು. ಶಾಖಾಧಿಕಾರಿ ಕವಿತಾ ನಿರೂಪಿಸಿದರು.