ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ದಾಳಿ

| Published : Dec 15 2024, 02:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಪಟ್ಟಣದ ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಬಳಿ ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ಶನಿವಾರ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು, 6 ಜನರನ್ನು ಬಂಧಿಸಿದ್ದಾರೆ. ಅಲ್ಲದೇ, ಅಪಾರ ಪ್ರಮಾಣದ ಮದ್ಯ ಮತ್ತು ಅದಕ್ಕೆ ಬಳಸುವ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಸಿಂದಗಿ

ಪಟ್ಟಣದ ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಬಳಿ ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ಶನಿವಾರ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು, 6 ಜನರನ್ನು ಬಂಧಿಸಿದ್ದಾರೆ. ಅಲ್ಲದೇ, ಅಪಾರ ಪ್ರಮಾಣದ ಮದ್ಯ ಮತ್ತು ಅದಕ್ಕೆ ಬಳಸುವ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪಟ್ಟಣದ ಅಮೋಘಸಿದ್ದ ಬಸಪ್ಪ ಹೂಗಾರ ಎಂಬಾತನ ಜಮೀನಿನ ಶೆಡ್‌ನಲ್ಲಿ ನಕಲಿ ಮದ್ಯ ತಯಾರಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಡಿಸಿ ವೀರಣ್ಣ ಬಾಗೇವಾಡಿ ಮತ್ತು ಅಬಕಾರಿ ವೃತ್ತ ನಿರೀಕ್ಷಕ ಶಿವಾನಂದ ಹೂಗಾರ ಅವರ ತಂಡ ಏಕಾಏಕಿ ದಾಳಿ ನಡೆಸಿತು. ದಾಳಿ ವೇಳೆ ಘಟಕದಲ್ಲಿದ್ದ 562 ಲೀಟರ್ ನಕಲಿ ಮದ್ಯ ಹಾಗೂ 200 ಲೀಟರ್ ಮದ್ಯಸಾರ ಹಾಗೂ ವಿವಿಧ ಕಂಪನಿಗಳ ಸುಮಾರು 3000ಕ್ಕೂ ಅಧಿಕ ಬಾಟಲ್‌ಗಳ 65 ಬಾಕ್ಸ್‌ಗಳು, ನಕಲಿ ಮದ್ಯ ತಯಾರಿಕೆಗೆ ಬಳಸಲಾಗುತ್ತಿದ್ದ ಖಾಲಿ ಬಾಟಲಿಗಳು ಮತ್ತು ನಕಲಿ ಭದ್ರತಾ ಚೀಟಿಗಳು(ಲೇಬಲ್)ನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಒಟ್ಟು ಸುಮಾರು ₹ 8.42 ಲಕ್ಷ ಮೌಲ್ಯದ ನಕಲಿ ಮದ್ಯ ಇದಾಗಿದ್ದು, ಅವರ ತೋಟದಲ್ಲಿಯೇ ನಿತ್ಯ ನಕಲಿ ಮದ್ಯವನ್ನು ತಯಾರಿಸಿ ಬೇರೆ ಬೇರೆ ಕಡೆಗೆ ಮಾರಾಟ ಮಾಡಲು ಸಿದ್ದರಾಗಿದ್ದರು. ಇದರಲ್ಲಿ 5 ಜನ ಆರೋಪಿಗಳು ಹುಬ್ಬಳ್ಳಿ ಮೂಲದವರಾಗಿದ್ದು, ಓರ್ವ ಸಿಂದಗಿಯವನು ಎಂದು ಅಬಕಾರಿ ಪೊಲೀಸ್‌ ಮೂಲಗಳು ತಿಳಿಸಿವೆ. ಕಾಯಾರ್ಚರಣೆಯಲ್ಲಿ ಜಿಲ್ಲೆಯ ಅನೇಕ ಅಬಕಾರಿ ಸಿಬ್ಬಂದಿ, ಗ್ರಾಮ ಆಡಳಿತಾಧಿಕಾರಿ ನಿಖಿಲ ಅಹ್ಮದ ಖಾನಾಪೂರ, ಸಂತೋಷ ವಾಲಿಕಾರ ಸೇರಿದಂತೆ ಅನೇಕರು ಇದ್ದರು.

-----------

ಕೋಟ್.....

ಇದು ಅತ್ಯಂತ ದೊಡ್ಡ ಪ್ರಕರಣ. ಖಚಿತ ಮಾಹಿತಿ ಪಡೆದು ನಕಲಿ ಮದ್ಯ ತಯಾರಿಕಾ ಘಟಕದ ಮೇಲೆ ದಾಳಿ ಮಾಡಿದ್ದೇವೆ. ಇಂತಹ ಘಟಕಗಳನ್ನು ಪತ್ತೆ ಹಚ್ಚಿ ಕೂಡಲೇ ವಶಪಡಿಸಿಕೊಳ್ಳುತ್ತೇವೆ. ಜನರ ದಾರಿ ತಪ್ಪಿಸುವ ಕಾರ್ಯದಲ್ಲಿ ಈ ಚಟುವಟಿಕೆಗಳು ನಡೆಯುತ್ತಿದ್ದು, ಇವುಗಳಿಗೆ ಬಳಸುವ ಲೇಬಲ್‌ಗಳನ್ನು ಇಂದೋರ, ರಾಜಸ್ತಾನ, ಮಧ್ಯಪ್ರದೇಶಗಳಿಂದ ತರಿಸಲಾಗಿದೆ. ಆರೋಪಿಗಳನ್ನು ತನಿಖೆ ಮಾಡಿದಾಗ ಇನ್ನೂ ಹೆಚ್ಚು ಮಾಹಿತಿಗಳು ಹೋರಬಿಳಲಿವೆ.

- ವೀರಣ್ಣ ಬಾಗೇವಾಡಿ, ಅಬಕಾರಿ ಡಿಸಿ, ವಿಜಯಪುರಸಿಂದಗಿ ಬಳಿಯ ಹೊಲದಲ್ಲಿ ಮದ್ಯ ತಯಾರಿಕಾ ಘಟಕದ ಮೂಲವನ್ನು ತಿಳಿದು ಅತ್ಯಂತ ಸೂಕ್ಷ್ಮ ರೀತಿಯಲ್ಲಿ ಮೇಲಾಧಿಕಾರಿಗಳ ನಿರ್ದೇಶನದಂತೆ

ಕಾರ್ಯಾಚರಣೆ ಮಾಡಿದ್ದೇವೆ. ಇನ್ನೂ ಇಂತಾ ನಕಲಿ ಮದ್ಯ ತಯಾರಿಕಾ ಘಟಕಗಳ ಶೊಧನಾ ಕಾರ್ಯ ನಡೆಯುತ್ತಿದ್ದು, ಆದಷ್ಟು ಬೇಗ ಪತ್ತೆ ಹಚ್ಚುತ್ತೇವೆ.

- ಶಿವಾನಂದ ಹೂಗಾರ, ಅಬಕಾರಿ ವೃತ್ತ ನಿರೀಕ್ಷಕ