ಸಾರಾಂಶ
ಗೋಕಾಕ: ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಪಂ ಕರ್ತವ್ಯನಿರತ ಕಾರ್ಯದರ್ಶಿ ನಾಗಪ್ಪ ಕೊಡ್ಲಿ ಮೇಲಿನ ಹಲ್ಲೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಲ್ಲಿನ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದಿಂದ ತಹಸೀಲ್ದಾರ್ ಹಾಗೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಅಂಬೇವಾಡಿ ಗ್ರಾಪಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಗ್ರಾಪಂ ಕಾರ್ಯದರ್ಶಿ ನಾಗಪ್ಪ ಕೊಡ್ಲಿ ಮೇಲೆ ದುಷ್ಕರ್ಮಿಗಳ ಗುಂಪುದೊಂದು ಮಾರಕಾಸ್ತ್ರಗಳ ಮೂಲಕ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಆ ಎಲ್ಲ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಸರಕಾರಿ ನೌಕರರ ಮೇಲೆ ಇಂತಹ ಕೃತ್ಯಗಳು ನಡೆಯುತ್ತಿದ್ದು, ನೌಕರರಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು. ನ್ಯಾಯ ದೊರಕುವಲ್ಲಿ ಹಿನ್ನಡೆಯಾದರೆ ಸಂಘದೊಂದಿಗೆ ಮುಂದಿನ ಹೋರಾಟಕ್ಕೆ ಸಿದ್ಧರಾಗಿರುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ. ಸಂಘದ ಅಧ್ಯಕ್ಷ ವಿನಾಯಕ ಮಾಳಿ, ಬಿ.ಎನ್.ಶಿಂಗಾಡಿ, ಎಲ್.ಡಿ.ದೇವರಮನಿ, ರಾಜೇಂದ್ರ ಕುರಬಗಟ್ಟಿ, ಎಸ್.ಬಿ.ಕೊಂತಿ, ಎಸ್.ಕೆ.ಮಾಧೂರಿ, ವಿ.ಎಸ್.ದೊಡ್ಡಮನಿ, ಜಯಶ್ರೀ ಶಿಲವಂತ, ಶಿದ್ರಾಮ ಕೊಟಬಾಗಿ, ಬಿ.ಎಂ.ಮುರಗೋಡ ಅನೇಕರು ಇದ್ದರು.