ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳಿಗೆ ಹಲ್ಲೆ, ಹತ್ಯೆ ಗ್ಯಾರಂಟಿ: ಭರತ್ ಶೆಟ್ಟಿ

| Published : Apr 23 2024, 12:48 AM IST

ಸಿದ್ದರಾಮಯ್ಯ ಸರ್ಕಾರದಲ್ಲಿ ಹಿಂದೂಗಳಿಗೆ ಹಲ್ಲೆ, ಹತ್ಯೆ ಗ್ಯಾರಂಟಿ: ಭರತ್ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಭಿವೃದ್ಧಿರಹಿತ, ದೂರದೃಷ್ಟಿಯಿಲ್ಲದ, ರಾಜ್ಯದ ಜನತೆಗೆ ಯಾವುದೇ ರೀತಿಯ ನೆಮ್ಮದಿ ನೀಡದ ಕಾಂಗ್ರೆಸ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದಿನ ಬೆಳಗಾದರೆ ಗ್ಯಾರಂಟಿ ಎನ್ನುವ ಸಿದ್ದರಾಮಯ್ಯ ಸರ್ಕಾರ, ನಿಜವಾಗಿಯೂ ಕೊಟ್ಟಿರುವುದು ಬಹುಸಂಖ್ಯಾತ ಹಿಂದೂಗಳ ಮೇಲೆ ಹಲ್ಲೆ ಮತ್ತು ಹತ್ಯೆಯ ಗ್ಯಾರಂಟಿ, ಲವ್‌ ಜಿಹಾದ್ ಗ್ಯಾರಂಟಿ, ಮಹಿಳೆಯರ ಮಾನ- ಪ್ರಾಣ ಹರಣದ ಗ್ಯಾರಂಟಿ ಮತ್ತು ಭ್ರಷ್ಟಾಚಾರ, ಲೂಟಿಯ ಗ್ಯಾರಂಟಿ ಮಾತ್ರ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ತೀವ್ರ ವಾಗ್ದಾಳಿ ನಡೆಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿರಹಿತ, ದೂರದೃಷ್ಟಿಯಿಲ್ಲದ, ರಾಜ್ಯದ ಜನತೆಗೆ ಯಾವುದೇ ರೀತಿಯ ನೆಮ್ಮದಿ ನೀಡದ ಸರ್ಕಾರವಿದು ಎಂದು ತರಾಟೆಗೆ ತೆಗೆದುಕೊಂಡರು.ಇಡೀ ಕರ್ನಾಟಕದಲ್ಲಿ ಜನರ ಜೀವಕ್ಕೆ ಗ್ಯಾರಂಟಿ ಇಲ್ಲ. ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಗ್ಯಾರಂಟಿ ಇಲ್ಲ, ಮಹಿಳೆಯರ ಮಾನ ಪ್ರಾಣ ರಕ್ಷಣೆಯ ಗ್ಯಾರಂಟಿ ಇಲ್ಲ. ಕುಡಿಯುವ ನೀರಿಗೂ ಗ್ಯಾರಂಟಿ ಇಲ್ಲ, ರೈತರ ಬದುಕಿಗೂ ಗ್ಯಾರಂಟಿ ಇಲ್ಲ. ತುಷ್ಟೀಕರಣದ ನೀತಿಯನ್ನು ಮಾತ್ರ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಸರ್ಕಾರ ಮುನ್ನಡೆಸುತ್ತಿದ್ದಾರೆ ಎಂದರು.

ನೇಹಾ ಈ ರೀತಿ ಹತ್ಯೆಯಾದ ಬಳಿಕ ಮುಖ್ಯಮಂತ್ರಿ ಅಥವಾ ಗೃಹಸಚಿವರ ಹೇಳಿಕೆ ಗಮನಿಸಿದರೆ ಬರೀ ವೋಟ್‌ ಬ್ಯಾಂಕ್ ರಾಜಕೀಯಕ್ಕಾಗಿಯೇ ಸರ್ಕಾರ ನಡೆಸುತ್ತಿರುವುದು ಕಾಣುತ್ತದೆ ಎಂದು ಭರತ್‌ ಶೆಟ್ಟಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಚುನಾವಣಾ ಸಂಚಾಲಕ ನಿತಿನ್ ಕುಮಾರ್, ಖಜಾಂಚಿ ಸಂಜಯ್ ಪ್ರಭು ಹಾಗೂ ಮಾಧ್ಯಮ ಸಂಚಾಲಕರಾದ ಕದ್ರಿ ಮನೋಹರ್ ಶೆಟ್ಟಿ ಇದ್ದರು.

..............................

ಚೊಂಬುರಹಿತ ಬಿಜೆಪಿ ಆಡಳಿತವನ್ನು ಕಾಂಗ್ರೆಸ್ ಒಪ್ಪಿಕೊಂಡಿದೆ-ಸುನಿಲ್ ಕುಮಾರ್:

ದೇಶದಲ್ಲಿ ಶೌಚಾಲಯ ನಿರ್ಮಾಣ ಮಾಡದೇ ಹಳ್ಳಿಯ ಮಹಿಳೆಯರ ಕೈಗೆ ಚೊಂಬು ಕೊಟ್ಟಿದ್ದು ಕಾಂಗ್ರೆಸ್, ಸ್ವಾತಂತ್ರ್ಯ ನಂತರ ದೊಡ್ಡ ಪ್ರಮಾಣದಲ್ಲಿ ಶೌಚಾಲಯ ನಿರ್ಮಾಣ ಮಾಡಿ, ಚೊಂಬು ರಹಿತ ಆಡಳಿತ ದೇಶದಲ್ಲಿ ಕೊಟ್ಟಿದ್ದು ಮೋದಿ ಅವರು ಬಿಜೆಪಿ ಸರ್ಕಾರದ ಕಾಲದಲ್ಲಿ, ಇದನ್ನು ಒಪ್ಪಿಕೊಂಡು ಕಾಂಗ್ರೆಸ್ ಚೊಂಬು ಜಾಹೀರಾತು ನೀಡುತ್ತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಕಾರ್ಕಳ ಶಾಸಕ ವಿ. ಸುನಿಲ್ ಹೇಳಿದ್ದಾರೆ.

ಅವರು ಶನಿವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿ ಕರಿ ನೆರಳಲ್ಲಿ ಕೇಸರಿ ಶಾಲು ಜಾಹೀರಾತನ್ನೂ ಕಾಂಗ್ರೆಸ್ ಪ್ರಕಟಿಸಿದೆ. ಕೇಸರಿ ಶಾಲು ಹಾಕಲು ನಮಗೆ ಸಂಕೋಚ ಇಲ್ಲ, ನಾವು ದೇಶದಲ್ಲಿ ಕೇಸರಿ ಆಡಳಿತ ನಿರ್ಮಾಣ ಮಾಡಲು ಹೊರಟಿದ್ದೇವೆ, ಕೇಸರಿ ಭಾರತೀಯ ಸಂಸ್ಕೃತಿಯ ಪ್ರತೀಕ. ಕೇಸರಿ ರಾಷ್ಟ್ರೀಯತೆಯ ಪ್ರತೀಕವೇ ಹೊರತು, ನಾವು ಯಾವುದೇ ದ್ವೇಷ ಮಾಡಲು ಹೊರಟಿಲ್ಲ ಎಂದರು.ಕಾಂಗ್ರೆಸ್ ಒಂದು ಕೋಮಿನ ಜನಕ್ಕೆ ಬೆಂಬಲ ಕೊಡುತ್ತದೆ. ಹಿಂದುಗಳನ್ನು ವಿರೋಧಿಸುವುದೇ ಕಾಂಗ್ರೆಸ್‌ನ ನಿಲುವು, ಅದಕ್ಕಾಗಿಯೇ ಕೇಸರಿ ಶಾಲಿನ ಜಾಹೀರಾತು ನೀಡಿದೆ ಎಂದು ಆರೋಪಿಸಿದರು.