ಸಾರಾಂಶ
ಕನ್ನಡಪ್ರಭ ವಾರ್ತೆ ಯಳಂದೂರು
ಭಾರತೀಯ ವಕೀಲ ಪರಿಷತ್ತಿನ ಸಹ ಅಧ್ಯಕ್ಷ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹಿರಿಯ ವಕೀಲ ಸದಾಶಿವರೆಡ್ಡಿ ಮೇಲೆ ಕೆಲವು ಅಪರಿಚಿತರು ಹಲ್ಲೆ ನಡೆಸಿರುವ ಪ್ರಕರಣವನ್ನು ಖಂಡಿಸಿ ತಾಲೂಕು ವಕೀಲರ ಸಂಘದ ಸದಸ್ಯರು ಸೋಮವಾರ ತೋಳಿಗೆ ಕೆಂಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ರಾಜಣ್ಣ ಮಾತನಾಡಿ, ಏ.೧೬ ರಂದು ಸದಾಶಿವರೆಡ್ಡಿ ಮೇಲೆ ಕೆಲವು ಅಪರಿಚಿತರು ಹಲ್ಲೆ ನಡೆಸಿದ್ದಾರೆ. ಈ ಕೃತ್ಯ ಖಂಡನೀಯವಾಗಿದೆ. ಇಂತಹ ದುಷ್ಕೃತ್ಯ ಎಸೆಗಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಈ ಕೃತ್ಯ ಎಸೆಗಿದವರ ವಿರುದ್ಧ ಕಾನೂನು ಕ್ರಮ ವಹಿಸಬೇಕು. ಕೂಡಲೇ ಅವರನ್ನು ಬಂಧಿಸಬೇಕು. ವಕೀಲರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕು. ನಾವು ಈ ಸಂಬಂಧ ನಾವು ಸರ್ವ ಸದಸ್ಯರ ಸಭೆಯನ್ನು ಕರೆದು ನಮ್ಮ ಬಲಗೈ ತೋಳಿಗೆ ಕೆಂಪುಪಟ್ಟಿಯನ್ನು ಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದು ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸುತ್ತಿದ್ದೇವೆ ಎಂದರು. ಮನವಿ ಪತ್ರವನ್ನು ಗ್ರೇಡ್ ೨ ತಹಸೀಲ್ದಾರ್ ಶಿವರಾಜುಗೆ ನೀಡಲಾಯಿತು. ವಕೀಲರ ಸಂಘದ ಕಾರ್ಯದರ್ಶಿ ಕುಮಾರಸ್ವಾಮಿ, ಖಜಾಂಚಿ ಶ್ರೀನಿವಾಸಮೂರ್ತಿ, ಸದಸ್ಯರಾದ ಸಿ.ಆರ್.ನಾಗರಾಜು, ಸಿ. ಸಿದ್ದರಾಜು, ಕೆ.ಬಿ. ಶಶಿಧರ್, ಎನ್. ಜಯಶಂಕರ್, ಕೃಷ್ಣ, ಸಂಪತ್ತು, ಸಿ.ಎಂ. ಮಹದೇವಸ್ವಾಮಿ, ಕುಮಾರಸ್ವಾಮಿ, ಸಂಪತ್ತು, ಚಂದನ, ಎಂ. ನಾಗರಾಜು, ಎನ್.ಮಾದೇಶ್ ಸೇರಿದಂತೆ ಅನೇಕರು ಇದ್ದರು.