Attack with lethal weapons: Youth dies

ಕನ್ನಡಪ್ರಭ ವಾರ್ತೆ ಹೊನ್ನಾಳಿ

ದುರ್ಗುಗುಡಿ ಉತ್ತರ ಭಾಗದ ಬನ್ನಿಮಹಾಂಕಾಳಿ ದೇವಸ್ಥಾನದಲ್ಲಿ ಅ.13ರ ರಾತ್ರಿ ದಸರಾ ಪೂಜಾ ಕಾರ್ಯಕ್ರಮ ಬಳಿಕ ಎಂ.ಕೆ. ಅಮಿತ್(30) ತನ್ನ ತಾಯಿ ನಾಗರತ್ನಮ್ಮ ಅವರೊಂದಿಗೆ ಮನೆಗೆ ತೆರಳುತ್ತಿದ್ದ ವೇಳೆ ಸ್ಕೂಟಿ ಮತ್ತು ಕಾರಿನಲ್ಲಿ ಆಗಮಿಸಿದ ದುಷ್ಕರ್ಮಿಗಳ ಗುಂಪು ಅಮಿತ್ ನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಹಲ್ಲೆಯಿಂದ ನೆಲಕ್ಕೆ ಕುಸಿದು ಬಿದ್ದ ಮಗನ ರಕ್ಷಣೆಗೆ ತಾಯಿ ದೇವಸ್ಥಾನ ಬಳಿ ಇದ್ದ ಜನರು ತಕ್ಷಣ ಹೊನ್ನಾಳಿ ಅಸ್ಪತ್ರೆಗ ಅಮಿತ್‌ ನನ್ನು ಸಾಗಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಅ. 14ರ ಬೆಳಗಿನ ಜಾವ ಚಿಕಿತ್ಸೆ ಫಲಕಾರಿಯಾಗದೇ ಅಮಿತ್ (30) ಅಸುನೀಗಿದ್ದಾನೆ.

ಹಳೆ ದ್ವೇಷದ ಹಿನ್ನೆಲೆ ಈ ಘಟನೆ ನಡೆದಿದೆ ಎನ್ನಲಾಗಿದೆ. ದುಷ್ಕರ್ಮಿಗಳು ಹಲ್ಲೆಗೆ ಮಚ್ಚು, ಚಾಕು, ಖಾರ ಪುಡಿ ಬಳಿಸಿದ್ದು, ಖಾರಪುಡಿಯನ್ನು ಅಮಿತ್ ಮುಖಕ್ಕೆ ಎರಚಿ ಹಲ್ಲೆ ಮಾಡಿದ್ದಾರೆಂದು ಕೂಲೆಯಾದ ಅಮಿತ್‌ ನ ತಾಯಿ ನಾಗರತ್ನಮ್ಮ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳು, 1.ಗಣೇಶ, 2.ಚಂದ್ರು, 3.ಸಚಿನ್, 4.ಅಕಾಶ್, ಸಂದೀಪ, ಸುಹಾಸ್ ಎಂದು ತಿಳಿದು ಬಂದಿದ್ದು ಪೊಲೀಸ್ ಇನ್ಸಪೆಕ್ಟರ್ ಸುನಿಲ್ ಕುಮಾರ್ ಅವರು ಪಿರ್ಯಾದಿ ನಾಗರತ್ನಮ್ಮ ಅವರಿಂದ ದೂರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹಾಗೂ ಡಿವೈಎಸ್ಪಿ ರುದ್ರಪ್ಪ ಉಜ್ಜನೀಕೂಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದರು. ಡಿವೈಎಸ್ಪಿ ರುದ್ರಪ್ಪ ಉಜ್ಜನೀಕೊಪ್ಪ, ಪೊಲೀಸ್ ಇನ್ಸಪೆಕ್ಟರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದು, ಕೊಲೆ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶೇಖರ್ ತಿಳಿಸಿದ್ದಾರೆ.

----

ಫೋಟೊ

14ಎಚ್.ಎಲ್.ಐ2. ಕೊಲೆಯಾಗಿರುವ ಅಮಿತ್ (30).

14ಎಚ್.ಎಲ್.ಐ2ಎ. ಕೊಲೆನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್, ಡಿವೈಎಸ್ಪಿ ರುದ್ರಪ್ಪ ಉಜ್ಜನೀಕೊಪ್ಪ, ಪೂಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.