ಶ್ರದ್ಧಾಸಕ್ತಿ ಅಭ್ಯಾಸವಿದ್ದರೆ ಸಾಧನೆ ಕಷ್ಟವಲ್ಲ

| Published : Jun 08 2024, 12:31 AM IST / Updated: Jun 08 2024, 12:32 AM IST

ಶ್ರದ್ಧಾಸಕ್ತಿ ಅಭ್ಯಾಸವಿದ್ದರೆ ಸಾಧನೆ ಕಷ್ಟವಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ನೆಲಮಂಗಲ: ಹೊಯ್ಸಳ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ಕಾಲೇಜು ಮತ್ತು ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ ಎಂದು ಪ್ರಾಶುಪಾಲ ಪ್ರೊ.ಕೆ.ಎ.ಗೌರಿಶಂಕರ್ ಹರ್ಷ ವ್ಯಕ್ತಪಡಿಸಿದರು.

ನೆಲಮಂಗಲ: ಹೊಯ್ಸಳ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ಕಾಲೇಜು ಮತ್ತು ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ ಎಂದು ಪ್ರಾಶುಪಾಲ ಪ್ರೊ.ಕೆ.ಎ.ಗೌರಿಶಂಕರ್ ಹರ್ಷ ವ್ಯಕ್ತಪಡಿಸಿದರು.

ಪಟ್ಟಣದ ಹೊಯ್ಸಳ ಕಾಲೇಜು ಆವರಣದಲ್ಲಿ ನೀಟ್ ಪರೀಕ್ಷೆಯ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ, ಕಾಲೇಜಿನ 30 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 720 ಅಂಕಗಳಿಗೆ ನಡೆದ ನೀಟ್ ಪರೀಕ್ಷೆಯಲ್ಲಿ ಮಿಥಿಲ್ 632 ಅಂಕ, ಅಮಿತ್ 630, ಲಾವಣ್ಯ.ಸಿ, 608, ಶಿಲಶ್ರೀ.ವಿ.,592, ಜೀವಿತ ವೈ, 580, ಅಂಕಿತ ಕೃಷ್ಣಮೂರ್ತಿ 506 ಅಂಕ ಗಳಿಸಿದ್ದಾರೆ.

ಶ್ರೀ ಶಿರಡಿಸಾಯಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಡಾ.ಟಿ.ರಾಮಕೃಷ್ಣಪ್ಪ ಮಾತನಾಡಿ, ವಿಜ್ಞಾನ ವಿಭಾಗಕ್ಕೆ ಗ್ರಾಮೀಣ ಪ್ರದೇಶಗಳಿಂದ ಸೇರ್ಪಡೆಗೊಂಡಿರುವ ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ ಮತ್ತಿತರ ವಿಷಯಗಳು ಕಬ್ಬಿಣದ ಕಡಲೆಯಂತೆ ಭಾಸವಾಗುವುದು ಸಹಜ, ಆದರೆ, ಶ್ರದ್ಧೆ ಮತ್ತು ಆಸಕ್ತಿಯಿಂದ ಅಭ್ಯಾಸ ಮಾಡಿದಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಕಬ್ಬಿಣದ ಕಡಲೆಯನ್ನು ಅರಗಿಸಿಕೊಳ್ಳುವರು ಎಂಬುದಕ್ಕೆ ನಮ್ಮ ವಿದ್ಯಾರ್ಥಿಗಳ ಸಾಧನೆಯೇ ಪ್ರತ್ಯಕ್ಷ ಉದಾಹರಣೆ ಎಂದರು.

ಪ್ರಾಂಶುಪಾಲ ಪ್ರೊ.ಎಚ್.ಆರ್.ಗೋಪಾಲ್, ಉಪಪ್ರಾಂಶುಪಾಲ ಚಿದಾನಂದಗೌಡ, ದಾಬಸ್ ಪೇಟೆ ಕಾಲೇಜಿನ ಪ್ರಾಂಶುಪಾಲ ಜಾಲಪ್ಪ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ವಿಕಾಸ್, ಹರೀಶ್.ಎಚ್, ಮಹ ದೇವಸ್ಥೆಗೌಡ, ಶ್ರೀಧರ್, ಪೂರ್ಣಿಮಾ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ಪೋಟೋ 1 : ನೆಲಮಂಗಲದ ಹೊಯ್ಸಳ ಪದವಿ ಪೂರ್ವ ಕಾಲೇಜಿನಲ್ಲಿ ನೀಟ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿತು.