ಸಾರಾಂಶ
ಬಾಗಲಕೋಟೆ : ಸಿ.ಟಿ ರವಿ ಕೇವಲ ಅವಹೇಳನಕಾರಿ ಶಬ್ಧ ಬಳಸಿದ ಮಾತ್ರಕ್ಕೆ ಎನ್ಕೌಂಟರ್ ಮಾಡ್ತಾರೆ ಎಂದರೆ ಹೇಗೆ ಎಂದು ಪ್ರಶ್ನೆ ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು, ಅದು ಒಂದೇ ಕಾರಣ ಅಂತ ನಾನು ಹೇಳುವುದಿಲ್ಲ. ಈ ರೀತಿ ಒಬ್ಬರನ್ನು ಎನ್ಕೌಂಟರ್ ಮಾಡಿ ಬಿಟ್ಟರೆ ಬಿಜೆಪಿ ಯಾವುದೇ ಆಕ್ಟಿವಿಟಿ ಮಾಡಲ್ಲ. ಹೆದರಿಕೊಂಡು ಬಿಡುತ್ತಾರೆ ಅಂತ ಭಯ ಸೃಷ್ಟಿ ಮಾಡುವ ಪ್ರಯತ್ನ ಇದು ಎಂದು ಬಾಗಲಕೋಟೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆದರಿಕೆ ಹಾಕುವ ತಂತ್ರ ಇದಾಗಿದೆ. ನಾನು ವಿಶೇಷವಾಗಿ ಪೊಲೀಸರಿಗೆ ಹೇಳೋದು ಏನೆಂದರೆ, ನೀವು ಈ ರೀತಿ ರಾಜಕೀಯ ಕೈ ಗೊಂಬೆಗಳಾಗಿ ವರ್ತಿಸಿದರೆ, ನಾಳೆ ಸರ್ಕಾರಗಳು ಬದಲಾಗುತ್ತವೆ. ಸರ್ಕಾರದಲ್ಲಿ ಅಧಿಕಾರಕ್ಕೆ ಬರುವವರು ಚೇಂಜ್ ಆಗ್ತಾ ಇರ್ತಾರೆ. ಇದನ್ನು ನೆನಪಿಟ್ಟುಕೊಳ್ಳಬೇಕು ಎಂದು ತಿಳಿಸಿದರು.ಇದು ಸಂಪೂರ್ಣವಾಗಿ ಗೃಹ ಇಲಾಖೆಯ ವೈಫಲ್ಯ, ರಾಜಕಾರಣಿಗಳ ಕುತಂತ್ರ ಪೊಲೀಸರ ದುಷ್ಕೃತ್ಯವಾಗಿದೆ. ಈ ಬಗ್ಗೆ ಸಂಪೂರ್ಣವಾಗಿ ಇದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ಮಾಡಲು ನಾವು ಕೋರ್ಟ್‌ಗೆ ಹೋಗುತ್ತೇವೆ. ಯಾಕೆಂದರೆ ಇವರು ಏನು ತನಿಖೆ ಮಾಡೋದಿಲ್ಲ ಅಷ್ಟು ನಿರ್ಲಜ್ಜರಿದ್ದಾರೆ. ವಿಧಾನಸೌಧಕ್ಕೆ ಹೇಗೆ ಪೊಲೀಸರಿಗೆ ಬರೋಕೆ ಅನುಮತಿ ಮಾಡಿದರು. ಕಂಪ್ಲೇಂಟಿಗೆ ಸಹಿ ಇಲ್ಲ. ವಿಧಾನ ಪರಿಷತ್‌ನ ಸಭಾಪತಿಗಳು ಪರ್ಮಿಷನ್ ಕೊಟ್ಟಿಲ್ಲ. ಯಾರು ಅನಧಿಕೃತವಾಗಿ ಪ್ರವೇಶ ಮಾಡಿದರು, ಅಲ್ಲಿನ ಗೇಟ್ ಒದ್ದರೂ ಸಿಟಿ ರವಿ ಮೇಲೆ ಹಲ್ಲೆ ಮಾಡಿದರು ಅಕಸ್ಮಾತ್ ಮಾರ್ಷಲ್‌ಗಳು ಇರದೇ ಹೋಗಿದ್ರೆ ಎಂದು ಆತಂಕ ವ್ಯಕ್ತಪಡಿಸಿದರು.
ಸಿಟಿ ರವಿಗೆ ಅವರೇನು ಹೆದರಿಕೆ ಹಾಕಿದ್ರು ದಮಕಿ ಹಾಕಿದ್ರು. ನಿಮ್ಮ ಹೆಣ ಹೋಗುತ್ತದೆ ಅಂತ ಹೇಳಿ ಅದನ್ನು ಮಾಡಿ ಕಳಿಸ್ತಿದ್ರು. ಆ ರೀತಿಯಲ್ಲಿ ಮಾಡಿದವರನ್ನು ಗೇಟ್ ಮುರಿದವರನ್ನು ಒಬ್ಬರನ್ನು ಅರೆಸ್ಟ್ ಮಾಡಿಲ್ಲ. ಈ ಕಮಿಷನರ್‌ನ ಕಾಂಗ್ರೆಸ್ ನಿಷ್ಠೆ ಎಷ್ಟಿದೆ ನೋಡಿ ಎಂದರು.
ಎಲ್ಲವನ್ನು ಪೊಲೀಸ್ರು ಕೆಲವೊಂದು ಸಾರಿ ನಮಗೆ ಹೇಳೋದಿಲ್ಲ. ಗೃಹಮಂತ್ರಿಗಳಿಗೆ ಈ ವಿಚಾರ ಗೊತ್ತಿಲ್ಲ ಅಂತ ಅನ್ನೋದಾದರೆ ಅವರು ಆ ಜಾಗದಲ್ಲಿ ಇರಲಿಕೆ ಅರ್ಹರಲ್ಲ. ನಾನು ಹತ್ತಿರದಿಂದ ರಾಜಕಾರಣ ನೋಡಿದ್ದೇನೆ. ಅನೇಕ ರಾಜ್ಯಗಳಲ್ಲಿ ನಾನು ಉಸ್ತುವಾರಿಯಾಗಿದ್ದೇನೆ. ಕೇಂದ್ರ ಗೃಹ ಮಂತ್ರಿಗಳು ಅಮಿತ್ ಶಾ ಜೊತೆ ನಾವು ಅತ್ಯಂತ ಹತ್ತಿರದಲ್ಲಿ ಕೆಲಸ ಮಾಡುತ್ತೇವೆ.
ಮೇಜರ್ ಘಟನೆಗಳು, ಪೊಲಿಟಿಕಲ್ ಘಟನೆಗಳು ಆದಾಗ ರಾತ್ರಿಯೇ ಸಚಿವರನ್ನು ಎಬ್ಬಿಸಿ ಪೊಲೀಸರು ಮಾಹಿತಿ ಕೊಡುತ್ತಾರೆ. ಮಲಗಿದ ಗೃಹ ಮಂತ್ರಿ ಅವರನ್ನು ಎಬ್ಬಿಸಿ ಮಾಹಿತಿ ಕೊಡುತ್ತಾರೆ. ಅದು ಪ್ರಾಕ್ಟೀಸ್, ನನಗೆ ಗೊತ್ತಿಲ್ಲ ಅನ್ನೋದಾದರೆ ಇವರು ಆರಾಮವಾಗಿ ಮಲಗಿಕೊಂಡು ಅಧಿಕಾರ ಎಂಜಾಯ್ ಮಾಡ್ತಾ ಇದ್ದಾರೆ.
ಇಲ್ಲವಾದರೆ ಸುಳ್ಳು ಹೇಳುತ್ತಿದ್ದಾರೆ ಎಂದ ಅವರು, ಜಿ ಪರಮೇಶ್ವರ ಅವರನ್ನು ಬೇರೆಯವರು ಒವರ್ ಟೇಕ್ ಮಾಡಿ ಪೊಲೀಸರಿಗೆ ಆದೇಶ ನೀಡಿರಬಹುದಾ ಎಂಬ ಪ್ರಶ್ನೆ ಕಾಡುತ್ತಿದೆ ಎಂದರಲ್ಲದೇ ಬೇರೆಯವರು ಒವರ್ ಟೇಕ್ ಮಾಡಿದರೆ ನೀವೇಕೆ ಇರಬೇಕು. ಅಲ್ಟಿಮೇಟ್ಲಿ ಬರೋದು ನಿಮಗೆ ಯು ಆರ್ ರೆಸ್ಪಾನ್ಸಿಬಲ್ ಮಿಸ್ಟರ್ ಪರಮೇಶ್ವರ್, ಇಂತಹ ಮೇಜರ್ ಘಟನೆಗಳನ್ನು ನಿಮಗೆ ಹೇಳಿದ್ದೇನೆ ಮಾಡಿದರೆ, ನಿಮಗೆ ಆ ಸ್ಥಾನದಲ್ಲಿ ಇರುವ ಅರ್ಹತೆ ಇದೆಯಾ ಅಂತ ಪ್ರಶ್ನೆ ಮಾಡಬೇಕಾಗುತ್ತದೆ ಎಂದರು.ಕೆಲವು ಬೆಳಗಾವಿ ಮಾಧ್ಯಮದವ್ರಿಂದಲೇ ನಮಗೆ ಲೈವ್ ಲೊಕೇಶನ್ ಸಿಗ್ತಾಯಿತ್ತು. ನಾವು ನಿಜವಾಗ್ಲೂ ಮಾಧ್ಯಮದವ್ರಿಗೆ ಧನ್ಯವಾದ ಹೇಳಬೇಕು. ಅಂತಹ ರಾತ್ರಿಯಲ್ಲಿ (ಪೊಲೀಸ್ ವಾಹನ) ಮಾಧ್ಯಮದವ್ರು ಬೆನ್ನು ಹತ್ತಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿ, ಕಂಪ್ಲೀಟ್ ಲೈವ್ ಲೊಕೇಶನ್ ಹಾಕ್ತಾಯಿದ್ರು. ಮಾಧ್ಯಮದವ್ರು ಇಲ್ಲದಿದ್ರೆ ಬಹುಷಃ ಸಿಟಿ ರವಿ ಅವ್ರನ್ನ ಫೇಕ್ ಎನ್ಕೌಂಟರ್ ಮಾಡಬೇಕೆನ್ನುವ ವಿಚಾರ ಅಲ್ಲಿನ ಪೊಲೀಸ್ ತಂಡಕ್ಕೆ ಇತ್ತು ಅನಿಸುತ್ತೆ.
ಪ್ರಹ್ಲಾದ್ ಜೋಷಿ ಕೇಂದ್ರ ಸಚಿವ