ರಾಜ್ಯವನ್ನು ಉಡ್ತಾ ಕರ್ನಾಟಕ ಮಾಡಲು ಯತ್ನ: ಕೆ.ಎಂ.ಅಶೋಕ್ ಆರೋಪ

| Published : Jul 20 2025, 01:15 AM IST

ರಾಜ್ಯವನ್ನು ಉಡ್ತಾ ಕರ್ನಾಟಕ ಮಾಡಲು ಯತ್ನ: ಕೆ.ಎಂ.ಅಶೋಕ್ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಭಾಗದಲ್ಲಿ ಸೂಪರ್ ಸಿಎಂರಂತೆ ಪ್ರತ್ಯೇಕ ಸರ್ಕಾರ ನಡೆಸುವ ರೀತಿಯಲ್ಲಿ ವರ್ತಿಸುತ್ತಿರುವ ಪ್ರಿಯಾಂಕ ಖರ್ಗೆ ಎರಡೂವರೆ ತಿಂಗಳ ಹಿಂದೆ ಮಾದವ ವಸ್ತುಗಳ ತಡೆ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿಕೆ ನೀಡಿದ್ದು, ಕೊಡೈನ್ ಮಾದಕ ವಸ್ತುವಿನ ಬಗ್ಗೆಯೂ ಮಾತನಾಡಿದ್ದರು. ಈಗ ಲಿಂಗರಾಜ್ ಖನ್ನಿ ರಾಯಭಾರಿಯಂತೆ ವರ್ತಿಸಿ ರಿಪಬ್ಲಿಕ್ ಕರ್ನಾಟಕ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಚಿವ ಪ್ರಿಯಾಂಕ ಖರ್ಗೆ ಅವರ ಆಪ್ತ ಲಿಂಗರಾಜ್ ಕಣ್ಣಿ ಕಲ್ಯಾಣ ಮುಂಬೈನಲ್ಲಿ ನಿಷೇಧಿತ ಕೊಡೈನ್ ಮಾದಕ ವಸ್ತುವಿನ ೧೮೦ ಬಾಟಲ್‌ಗಳ ಜೊತೆ ಬಂಧಿತರಾಗಿದ್ದು, ರಾಜ್ಯವನ್ನು ಉಡ್ತಾ ಪಂಜಾಬ್ ಮಾದರಿ ಉಡ್ತಾ ಕರ್ನಾಟಕ ಮಾಡಲು ಮುಂದಾಗಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಕೆ.ಎಂ.ಅಶೋಕ್ ಆರೋಪಿಸಿದರು.ಲಿಂಗರಾಜ್ ಕಣ್ಣಿ ಕಾಂಗ್ರೆಸ್ ಗುಲ್ಬರ್ಗ ದಕ್ಷಿಣ ಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದು, ರಾಜ್ಯದ ಜಿಲ್ಲಾ ಕೇಂದ್ರಗಳ ಶಾಲೆಗಳಲ್ಲಿ ಎಲೆಕ್ಟ್ರಿಕ್ ಸಿಗರೆಟನ್ನು ಒದಗಿಸುವ ಮೂಲಕ ಉಡ್ತಾ ಕರ್ನಾಟಕ ಮಾಡಲು ಅಡಿಪಾಯ ಹಾಕುತ್ತಿದ್ದಾರೆ ಎಂದರು.

ಉತ್ತರ ಭಾಗದಲ್ಲಿ ಸೂಪರ್ ಸಿಎಂರಂತೆ ಪ್ರತ್ಯೇಕ ಸರ್ಕಾರ ನಡೆಸುವ ರೀತಿಯಲ್ಲಿ ವರ್ತಿಸುತ್ತಿರುವ ಪ್ರಿಯಾಂಕ ಖರ್ಗೆ ಎರಡೂವರೆ ತಿಂಗಳ ಹಿಂದೆ ಮಾದವ ವಸ್ತುಗಳ ತಡೆ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿಕೆ ನೀಡಿದ್ದು, ಕೊಡೈನ್ ಮಾದಕ ವಸ್ತುವಿನ ಬಗ್ಗೆಯೂ ಮಾತನಾಡಿದ್ದರು. ಈಗ ಲಿಂಗರಾಜ್ ಖನ್ನಿ ರಾಯಭಾರಿಯಂತೆ ವರ್ತಿಸಿ ರಿಪಬ್ಲಿಕ್ ಕರ್ನಾಟಕ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಬೀದರನಲ್ಲಿನ ಸಿದ್ಧಾರ್ಥ ವಿಹಾರ ಟ್ರಸ್ಟ್‌ನ ಪಿಯು ಕಾಲೇಜಿನ ಕಾಂಪೌಂಡ್ ನಿರ್ಮಾಣಕ್ಕೆ ೧೫ ಲಕ್ಷ ರು.ಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನೀಡಿದ್ದು, ಇಲಾಖೆಯ ಸಿಬ್ಬಂದಿಗೆ ವೇತನ ನೀಡದೇ ಉಳಿಸಿಕೊಳ್ಳಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನಡೆದ ಹಗರಣಗಳ ಕುರಿತು ರಾಜೀವ್ ಕುರ್ಚಿ ಅವರು ಬಹಿರಂಗ ಪಡಿಸಿದ್ದು, ಒಂದೇ ಗ್ರಾಪಂಚಾಯ್ತಿಯಲ್ಲಿ ೧೭ ಕೋಟಿ ರು.ಹಗರಣ ನಡೆದಿರುವ ಬಗ್ಗೆ ತಿಳಿಸಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಗರಣಗಳಿಗೆ ಸಾಕ್ಷಿಯಾಗಿದೆ ಎಂದರು.

ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಪ್ರಿಯಾಂಕ ಖರ್ಗೆ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಿಗರು ಪಾಲ್ಗೊಳ್ಳುತ್ತಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡದೇ ಇದ್ದು, ಯಾವ ಬದ್ಧತೆಯಿಂದ ಪ್ರಿಯಾಂಕ ಖರ್ಗೆ ಅವರನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದ ಅವರು, ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ ಎಂದ ಮಾತ್ರಕ್ಕೆ ಪ್ರಿಯಾಂಕ ಖರ್ಗೆ ಪರವಾಗಿ ನಿಲ್ಲುವುದು ಬಿಟ್ಟು, ಅವರನ್ನು ಶನಿವಾರದೊಳಗೆ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ್, ಜಿಲ್ಲಾವಕ್ತಾರ ಸಿ.ಟಿ.ಮಂಜುನಾಥ್, ಶಂಕರ್ ಇದ್ದರು.