ಕಳೆದ ೧೨ ವರ್ಷ ನರೇಂದ್ರ ಮೋದಿಯ ಆಡಳಿತದಲ್ಲಿ ಯಾವುದೇ ಹಗರಣಗಳಿಲ್ಲದೆ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೋಯುತ್ತಿರುವುದು ಕಂಡು ಭೀತಿಯುಂಟಾಗಿದೆ.
ಇಂಡಿಯಾ ಒಕ್ಕೂಟ, ಜಿರಳೆ ಪಕ್ಷದ ವಿರುದ್ಧದ ಪ್ರತಿಭಟನೆಯಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ
ಕನ್ನಡಪ್ರಭ ವಾರ್ತೆ ಕೋಲಾರಭಾರತವು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮುಕ್ತ ದೇಶವಾಗಿ ಪರಿವರ್ತನೆಯಾಗುವ ಕಾಲ ದೂರವಿಲ್ಲ. ಕಾಂಗ್ರೆಸ್ ಇದನ್ನು ಅರಿತು ದೇಶದಲ್ಲಿ ಆರಾಜಕತೆ ಸೃಷ್ಠಿ ಮಾಡಲು ಭಾರತದ ವಿರೋಧಿ ದೇಶಗಳೊಂದಿಗೆ ಹಾಗೂ ಉಗ್ರಗಾಮಿಗಳೊಂದಿಗೆ ಕೈಜೋಡಿಸಿ ನೀಟ್ ವಿಷಯ ಮುಂದು ಮಾಡಿಕೊಂಡು ವಿದ್ಯಾರ್ಥಿಗಳ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಇಂಡಿಯಾ ಒಕ್ಕೂಟ ಹಾಗೂ ಭಾರತೀಯ ಜಿರಳೆ ಪಕ್ಷದ ವಿರುದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.ಕಳೆದ ೧೨ ವರ್ಷ ನರೇಂದ್ರ ಮೋದಿಯ ಆಡಳಿತದಲ್ಲಿ ಯಾವುದೇ ಹಗರಣಗಳಿಲ್ಲದೆ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೋಯುತ್ತಿರುವುದು ಕಂಡು ಭೀತಿಯುಂಟಾಗಿದೆ. ದೇಶ ವಿರೋಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಖಂಡನೀಯ ಎಂದರು.
ನೀಟ್ ಪರೀಕ್ಷೆಯಲ್ಲಿ ಸೋರಿಕೆಯುಂಟಾಗಿದ್ದು, ವಿದ್ಯಾರ್ಥಿಗಳು ಮರುಪರೀಕ್ಷೆ ಬರೆದು ನೆಮ್ಮದಿಯಿಂದ ಉನ್ನತ ಶಿಕ್ಷಣ ದತ್ತು ಮುಖ ಮಾಡಿದ್ದಾರೆ. ಹಗರಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ್ದರೂ ಸಹ ಖಾಸಗಿ ಕಾಲೇಜು ಆಡಳಿತ ಮಂಡಳಿಗಳನ್ನು ಕೈಗೊಂಬೆ ಮಾಡಿಕೊಂಡು ವಿದ್ಯಾರ್ಥಿಗಳನ್ನು ದುರ್ಬಳಿಸಿಕೊಳ್ಳಲಾಗಿದೆ, ದೇಶ ವಿರೋಧಿ ಸಂಘಟನೆಗಳ ಖಾತೆಗೆ ಹಣ ತುಂಬಿ ಅವರೊಂದಿಗೆ ದೇಶದಲ್ಲಿ ಶಾಂತಿಗೆ ಭಂಗ ಉಂಟಾಗುವ ಚಟುವಟಿಕೆಗಳಲ್ಲಿ ಕೈಜೋಡಿಸಿ ಸಂವಿಧಾನದ ನೀತಿ ನಿಯಮ ಉಲ್ಲಂಘಿಸಲಾಗುತ್ತಿದೆ ಎಂದು ದೂರಿದರು.ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶದ ಮಾದರಿಯಲ್ಲಿ ಭಾರತದಲ್ಲಿ ಆರಾಜಕತೆ ಸೃಷ್ಠಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷವು ಪಾಕಿಸ್ತಾನ ಏಜೆಂಟ್‌ರಂತೆ ವರ್ತಿಸಲಾಗುತ್ತಿದೆ. ಇದೇ ರೀತಿ ಮುಂದುವರೆದರೆ ಬಿಜೆಪಿಯಿಂದ ತುಕಡಿ ಪಕ್ಷಗಳಿಗೆ, ಗಂಜಿ ಗಿರಾಕಿಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ, ಆರ್‌ಎಸ್‌ಎಸ್ ಬಿಜೆಪಿ ಹಾಗೂ ಭಾರತದ ಬಗ್ಗೆ ಮಾತನಾಡುವಂತ ನೈತಿಕತೆ ಕಾಂಗ್ರೆಸ್ ಪಕ್ಷವು ಕಳೆದುಕೊಂಡಿದೆ ಎಂದು ಪ್ರತಿಪಾದಿಸಿದರು.
ಮಾಜಿ ಶಾಸಕ ವೈ. ಸಂಪಂಗಿ ಮಾತನಾಡಿ, ಬಿಜೆಪಿ ವಿರುದ್ದ ಕಾಂಗ್ರೆಸ್ ಪಕ್ಷವು ವಿಪಕ್ಷಗಳೊಂದಿಗೆ ಷಡ್ಯಂತರ ನಡೆಸುತ್ತಿದೆ. ವಿದ್ಯಾಥಿಗಳಿಗೆ ಸಂಬಂಧಿಸಿದ ನೀಟ್ ಪರೀಕ್ಷೆ ಮುಂದು ಮಾಡಿಕೊಂಡು ಅವರೊಂದಿಗೆ ಕೈಜೋಡಿಸಿ ನೀಟ್ ವಿಷಯ ಕೈಬಿಟ್ಟು ಬಿಜೆಪಿ, ಆರ್‌ಎಸ್ಎಸ್ ವಿರುದ್ಧ ಹೋರಾಟಕ್ಕೆ ದುರ್ಬಳಿಸಿಕೊಳ್ಳುತ್ತಿದ್ದಾರೆ. ನೀಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ನ್ಯಾಯ ಕೊಡಿಸಲು ಬಿಜೆಪಿ ಪಕ್ಷವು ಬದ್ದವಾಗಿದ್ದು ಮರುಪರೀಕ್ಷೆ ನಡೆಸಿ ತಪ್ಪಿತಸ್ಥರ ವಿರುದ್ದ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದ್ದರೂ ಸಹ ಕಾಂಗ್ರೆಸ್ ಪಕ್ಷವು ಜನತೆಗೆ ತಪ್ಪು ಸಂದೇಶ ರವಾನಿಸಿ ದಿಕ್ಕು ತಪ್ಪಿಸುವ ಹುನ್ನಾರ ನಡೆಸುತ್ತಿದೆ ಎಂದು ದೂರಿದರು.ಪ್ರಚಾರದ ತೆವಲಿಗೆ ಮೋದಿ ಮನೆ ಮುಂದೆ ಪ್ರತಿಭಟಿಸುತ್ತಿರುವ ಕಾಂಗ್ರೆಸ್ ಪಕ್ಷವು ಪಾರ್ಲಿಮೆಂಟ್ ಅಧಿವೇಶದಲ್ಲಿ ಪ್ರಸ್ತಾಪಿಸಬಹುದಾದ ಅವಕಾಶ ಇದ್ದರೂ ಬಳಸಿಕೊಳ್ಳುತ್ತಿದ್ದ ವಿದ್ಯಾರ್ಥಿಗಳನ್ನು ಮುಂದಿಟ್ಟುಕೊಂಡು ನೀಟ್ ಪರೀಕ್ಷೆ ಬಗ್ಗೆ ಮಾತನಾಡದೆ ಶ್ರೀರಾಮ, ಆಯೋಧ್ಯೆ, ಹಿಂದೂತ್ವ, ಆರ್.ಎಸ್.ಎಸ್. ಬಿಜೆಪಿ. ಹಾಗೂ ನರೇಂದ್ರ ಮೋದಿ ವೈಯುಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಟೀಕಿಸುತ್ತಿರುವುದನ್ನು ಖಂಡಿಸಿದರು.
ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ೬೫ ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ೩೬೫ ಇದ್ದ ಮೆಡಿಕಲ್ ಕಾಲೇಜ್‌ಗಳಿತ್ತು, ಮೋದಿ ೧೨ ವರ್ಷದ ಆಡಳಿತದಲ್ಲಿ ೭೯೦ಕ್ಕೆ ಏರಿಕೆ ಮಾಡಿದೆ ಕಾಂಗ್ರೆಸ್ ಪಕ್ಷದ ಆಡಳಿತದಲ್ಲೂ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿತ್ತು ಆಗ ಯಾರೂ ರಾಜೀನಾಮೆ ಕೊಡಲಿಲ್ಲ ಎಂದರು.ಪ್ರತಿಭಟನೆಯಲ್ಲಿ ಮಾವು ಮಂಡಳಿ ಮಾಜಿ ಅಧ್ಯಕ್ಷ ವಾಸುದೇವ್, ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್, ವಿದ್ಯಾರ್ಥಿ ಮುಖಂಡ ಹರೀಶ್, ಜಿ.ಪಂ ಮಾಜಿ ಸದಸ್ಯ ಎಸ್.ಬಿ.ಮುನಿವೆಂಕಟಪ್ಪ, ಮುಖಂಡರಾದ ವಿಜಯಕುಮಾರ್, ಮಾಗೇರಿ ನಾರಾಯಣಸ್ವಾಮಿ, ರಾಜು, ಕಪಾಲಿ ಶಂಕರ್, ಕೆಂಬೋಡಿ ನಾರಾಯಣಸ್ವಾಮಿ, ತಿಮ್ಮರಾಯಪ್ಪ, ಬೆಗ್ಲಿ ಸೂರ್ಯಪ್ರಕಾಶ್, ಬಜರಂಗದಳ ಬಾಬು, ಬಾಲಾಜಿ, ಯುವ ಮೋರ್ಚಾ ಬಾಲಾಜಿ, ಸುಗಟೂರು ಚಂದ್ರಶೇಖರ್, ಮಂಜುನಾಥ್, ಸಾ.ಮಾ.ಅನಿಲ್ ಬಾಬು, ಓಹಿಳೇಶ್, ಅರುಣಮ್ಮ, ಮಮತಮ್ಮ, ಸುಮ, ರಾಜಲಲಕ್ಷ್ಮಮ್ಮ, ಗೋವಿಂದರಾಜು, ರಾಜೇಶ್ ಸಿಂಗ್, ಮಹೇಶ್ ಇದ್ದರು.