ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಜಾಗತೀಕರಣದ ಇಂದಿನ ವಾತಾವರಣದಲ್ಲಿ ಗ್ಯಾರೇಜ್ ಮಾಲಕರು ಮತ್ತು ಕಾರ್ಮಿಕರು ಸವಾಲಿನ ಪರಿಸ್ಥಿತಿಯಲ್ಲಿ ವೃತ್ತಿಯನ್ನು ನಡೆಸುತ್ತಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ದೊರಕುವ ಸರ್ಕಾರಿ ಸೌವಲತ್ತುಗಳಿಂದ ಮಾಹಿತಿಯ ಕೊರತೆಯಿಂದ ವಂಚಿತರಾಗಿದ್ದಾರೆ. ಆದ್ದರಿಂದ ಈ ಸೌಲಭ್ಯತೆಗಳನ್ನು ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಉಡುಪಿಯ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.ಅವರು ಭಾನುವಾರ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ವಾರ್ಷಿಕ ಮಹಾಸಭೆ ಮತ್ತು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್. ಅವರು ಕಾರ್ಮಿಕ ಇಲಾಖೆಯ ನಿಯಮ ನಿಬಂಧನೆಗಳ ಬಗ್ಗೆ ಮಾಹಿತಿ ನೀಡಿದರು. ಈ ಸಮಾವೇಶದಲ್ಲಿ ಸಂಜೀವ ದೇವಾಡಿಗ ಬೈಂದೂರು, ಆನಂದ್ ಸೇರಿಗಾರ್ ದೊಡ್ಡಣ್ಣಗುಡ್ಡೆ ಮತ್ತು ರಾಘವೇಂದ್ರ ಆಚಾರ್ಯ ಆದಿಉಡುಪಿ ಇವರನ್ನು ಸನ್ಮಾನಿಸಲಾಯಿತು.ಸಂಘದ ಸದಸ್ಯರಿಗೆ ನೂತನವಾಗಿ ನವೀಕರಿಸಿದ ಗುರುತು ಚೀಟಿ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಆಶಾ ನಿಲಯದ ವಿಕಲಚೇತನ ಮಕ್ಕಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು.ಸಂಘದ ಅಧ್ಯಕ್ಷ ರೋಷನ್ ಕರ್ಕಡ ಕಾಪು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕೃಷ್ಣ ಮಠದ ವಕ್ತಾರ ಉಲ್ಲಾಸ್ ಕುಲಕರ್ಣಿ, ಉದ್ಯಮಿ ಸಂತೋಷ್ ಕುಮಾರ್, ವಿಮಾ ಪ್ರತಿನಿಧಿ ರವೀಂದ್ರ ಶೆಟ್ಟಿ, ದ.ಕ. ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಕುಮಾರ್, ತಾಲೂಕು ಅಧ್ಯಕ್ಷರಾದ ನಾರಾಯಣ ಆಚಾರ್ ಕುಂದಾಪುರ, ಕೃಷ್ಣಯ್ಯ ಮದ್ದೋಡಿ ಬೈಂದೂರು, ನಾರಾಯಣ ಪೂಜಾರಿ ಬ್ರಹ್ಮಾವರ, ಅಬ್ದುಲ್ ಹಮೀದ್ ಕಾರ್ಕಳ ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಣಿಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತೋಷ್ ಕುಮಾರ್ ಸ್ವಾಗತಿಸಿ ವಿನಯ್ ಕುಮಾರ್ ವಂದಿಸಿದರು.