ಸಾರಾಂಶ
ಕನ್ನಡಪ್ರಭ ವಾರ್ತೆ ಸೂಲಿಬೆಲೆ
ತಾಲೂಕಿನ ಸರ್ಕಾರಿ ಗೋಮಾಳ ವೀಕ್ಷಣೆಗೆ ತೆರಳಿದ್ದ ಹೊಸಕೋಟೆ ತಹಸೀಲ್ದಾರ್ ಸೋಮಶೇಖರ್ ಅವರ ಸರ್ಕಾರಿ ವಾಹನ ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿ ಕೊಲೆ ಬೆದರಕೆ ಹಾಕಿದ ಆರೋಪದಡಿ ಸೂಲಿಬೆಲೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ತೆನೆಯೂರು ಗ್ರಾಮದ ಶಶಿಕಿರಣ್, ಮುನಿರಾಜು, ಮಂಜುನಾಥ್ ಬಂಧಿತರು.ಬಗುರ್ ಹುಕುಂ ಕಮಿಟಿಯಲ್ಲಿ ನಮೂನೆ ೫೩ ಅರ್ಜಿಗಳನ್ನು ಸಲ್ಲಿಸಿ ಸರ್ಕಾರಿ ಭೂಮಿಯಲ್ಲಿ ಸ್ವಾಧಿನದಲ್ಲಿರುವ ರೈತರ ಜಮೀನುಗಳನ್ನು ಪರಿಶೀಲಿಸಲು ಏ.೧೭ರಂದು ಸಂಜೆ ತೆನೆಯೂರು ಗ್ರಾಮದ ಸರ್ವೆ ನಂ.೨೦ರಲ್ಲಿರುವ ಟಿ.ಎಂ.ಮುನಿರಾಜು ಅವರ ಜಮೀನು ಸ್ಥಳ ಪರಿಶೀಲನೆಗೆ ತಹಸೀಲ್ದಾರ್ ಹಾಗೂ ಸೂಲಿಬೆಲೆ ಹಾಗೂ ಬೆಂಡಿಗಾನಹಳ್ಳಿ ನಾಡಕಚೇರಿ ಅಧಿಕಾರಿಗಳೊಂದಿಗೆ ಹೋಗಿದ್ದ ಸಮಯದಲ್ಲಿ ಅದೇ ಸರ್ವೆ ನಂಬರ್‌ನಲ್ಲಿ ಮಣ್ಣು ತೆಗೆದು ಕಾಂಪೌಂಡ್ ನಿರ್ಮಿಸಿಕೊಂಡಿರುವ ಶಶಿಕಿರಣ್ ಹಾಗೂ ಇಬ್ಬರು ಹುಡುಗರು, ತಹಸೀಲ್ದಾರ್ ಅವರ ವಾಹನಕ್ಕೆ ಕಾರು ಅಡ್ಡಗಟ್ಟಿ ಕೊಲೆಗೆ ಯತ್ನಿಸಿದ್ದಾರೆ.ಈ ಜಮೀನಿನಲ್ಲಿ ಮಣ್ಣು ತೆಗೆದು ಕಾಂಪೌಂಡ್ ನಿರ್ಮಿಸುತ್ತಿರುವುದು ನಾವೇ ಗಣಿಗಾರಿಕೆ ಮಾಡಿ ಸರ್ಕಾರಿ ಜಮೀನಿಗೆ ಕಾಂಪೌಂಡ ನಿರ್ಮಿಸಿಕೊಳ್ಳುತ್ತಿರುವುದು ನಾವೇ ಎಂದು ದರ್ಪದಿಂದ ತಹಸೀಲ್ದಾರ್ ಮೇಲೆ ದೌರ್ಜನ್ಯ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಏಕವಚನದಲ್ಲಿ ಮಾತನಾಡಿ, ಸರ್ಕಾರಿ ವಾಹನದ ಬ್ಯಾನೆಟ್‌ಗೆ ಹೊಡೆದು ಹಲ್ಲೆ ಮಾಡಲು ಮುಂದಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಸೂಲಿಬೆಲೆ ಪೋಲಿಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಟ್ರ್ಯಾಕ್ಟರ್‌ನಿಂದ ಗುದ್ದಿ ಕೊಲೆಗೆ ಯತ್ನಿಸಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಸರ್ಕಾರಿ ಜಮೀನಿನಲ್ಲಿ ಗಣಿಗಾರಿಕೆ ಮಾಡುತ್ತಿರುವ ಶಶಿಕಿರಣ್ ಹಾಗೂ ಇತರೆ ಇಬ್ಬರ ವಿರುದ್ಧ ಕ್ರಮ ಜರುಗಿಸುವಂತೆ ಸೂಲಿಬೆಲೆ ನಾಡಕಚೇರಿ ರೆವಿನ್ಯೂ ಇನ್ಸ್‌ಪೆಕ್ಟರ್ ನ್ಯಾನಮೂರ್ತಿ ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರಿಂದ ಪೊಲೀಸರು ಮೂವರನ್ನು ಬಂಧಿಸಿ ಟ್ರ್ಯಾಕ್ಟರ್ ವಶಪಡಿಸಿಕೊಡಿದ್ದಾರೆ.