ಬಾಡಿಗೆಗಿದ್ದ ರವಿಕುಮಾರ್ ಎರಡು ದಿನ ಹೊರಗಡೆತೆರಳಿದ್ದರು 3ಮಂದಿ ಕಳ್ಳರು ಮನೆ ಬಾಗಿಲನ್ನು ಹಾರೆ ಹಾಕಿ ಮೀಟಿದ್ದಾರೆ.

ಕೊಳ್ಳೇಗಾಲ: ಪಟ್ಟಣದ ರಾಜೀವ್ ನಗರದ ಬ್ರಹ್ಮ ಕುಮಾರಿ ರಸ್ತೆ ಮಸೀದಿ ಸಮೀಪದಲ್ಲಿರುವ ಮನೆಯೊಂದರಲ್ಲಿ ಮನೆ ಮಾಲೀಕರು ಹೊರಗೆ ಹೋಗಿರುವುದನ್ನ ಖಚಿತಪಡಿಸಿಕೊಂಡ ಕಳ್ಳರ ಗುಂಪೊಂದು ಮನೆ ಬಾಗಿಲು ಮೀಟಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ. ಬಾಡಿಗೆಗಿದ್ದ ರವಿಕುಮಾರ್ ಎರಡು ದಿನ ಹೊರಗಡೆತೆರಳಿದ್ದರು 3ಮಂದಿ ಕಳ್ಳರು ಮನೆ ಬಾಗಿಲನ್ನು ಹಾರೆ ಹಾಕಿ ಮೀಟಿದ್ದಾರೆ. ಈ ವೇಳೆ ಪಕ್ಕದ ಮನೆಯರು ಹೊರಗಡೆ ಬಿಟ್ಟುಬಂದಿದ್ದ ಬೈಕ್ ಕೀ ತೆಗೆದುಕೊಳ್ಳಲು ಲೈಟ್ ಹಾಕುತ್ತಿದ್ದಂತೆ ಕಳ್ಳರು ಪರಾರಿಯಾಗಿದ್ದಾರೆ.ಗಸ್ತಿನಲ್ಲಿದ್ದ ಪೊಲೀಸರು ಹುಡುಕಲೆತ್ನಿಸಿದರೂ ಕಳ್ಳರು ಅಷ್ಚರಲ್ಲಾಗಲೆ ಪರಾರಿಯಾಗಿದ್ದರು ಎನ್ನಲಾಗಿದೆ. ರವಿಕುಮಾರ್ ಅವರು ಪ್ರಕರಣವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.