ಚಳಿಗಾಲದ ಅಧಿವೇಶನದಲ್ಲಿ ಗಮನ ಸೆಳೆಯುವೆ

| Published : Nov 22 2024, 01:18 AM IST

ಸಾರಾಂಶ

ತುಮಕೂರುಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ನಿಯೋಗದಿಂದ ರಾಜ್ಯಾದ್ಯಂತ ಖಾಸಗಿ ಕೊಳಚೆ ಪ್ರದೇಶಗಳ ಘೋಷಣೆಗೆ ತೊಡಕಾಗಿರುವ ವಸತಿ ಇಲಾಖೆ ಸುತ್ತೋಲೆಯನ್ನು ಹಿಂಪಡೆಯಲು ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನಿಸಲು ತುಮಕೂರು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್‌ರವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ, ತುಮಕೂರುಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ನಿಯೋಗದಿಂದ ರಾಜ್ಯಾದ್ಯಂತ ಖಾಸಗಿ ಕೊಳಚೆ ಪ್ರದೇಶಗಳ ಘೋಷಣೆಗೆ ತೊಡಕಾಗಿರುವ ವಸತಿ ಇಲಾಖೆ ಸುತ್ತೋಲೆಯನ್ನು ಹಿಂಪಡೆಯಲು ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನಿಸಲು ತುಮಕೂರು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್‌ರವರಿಗೆ ಮನವಿ ಸಲ್ಲಿಸಲಾಯಿತು.ನಿಯೋಗದ ಉಪಸ್ಥಿತಿ ವಹಿಸಿದ್ದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯಸಂಚಾಲಕ ಎ.ನರಸಿಂಹಮೂರ್ತಿ ಶಾಸಕರ ಗಮನ ಸೆಳೆದು ರಾಜ್ಯಾದ್ಯಾಂತ ಬಿಬಿಎಂಪಿ ಸೇರಿದಂತೆ, ಮಹಾನಗರ ಪಾಲಿಕೆ, ನಗರ ಸಭೆ ಮತ್ತು ಪಟ್ಟಣ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 709ಕ್ಕೂ ಹೆಚ್ಚು ಸ್ಲಂಗಳು ಖಾಸಗಿ ಒಡೆತನದಲ್ಲಿದ್ದು ಅಂದಾಜು 1.5ಲಕ್ಷ ಸ್ಲಂ ನಿವಾಸಿಗಳ ಕುಟುಂಬಗಳು ಕಳೆದ 50 ವರ್ಷಗಳಿಂದ ತಮ್ಮ ಸುಸ್ಥಿರವಾದ ಜೀವನವನ್ನು ನಗರಗಳಲ್ಲಿ ಕಟ್ಟಿಕೊಳ್ಳುತ್ತಿದ್ದಾರೆ.ಆದರೆ ಕಳೆದ 2023 ಸೆಪ್ಟಂಬರ್ ಮಾಹೆಯಲ್ಲಿ ವಸತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಕರ್ನಾಟಕ ರಾಜ್ಯಾದ್ಯಾಂತ, ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯಿದೆ 1973ರ ಸೆಕ್ಷನ್-3ರಡಿ ಮತ್ತು 11ರಡಿಯಲ್ಲಿ ಖಾಸಗಿ ಭೂ ಮಾಲೀಕತ್ವದ ಸ್ಲಂಗಳನ್ನು ಕೊಳಚೆ ಪ್ರದೇಶವೆಂದು ಘೋಷಣೆ ಮಾಡುವಾಗ ಸರ್ಕಾರದ ಅನುಮೋದನೆ ಪಡೆದು ತದನಂತರ ಘೋಷಣೆಗೆ ಮುಂದಿನ ಕ್ರಮ ಕೈಗೊಳ್ಳುವಂತೆ ಉಲ್ಲೇಖ 1ರ ಅನ್ವಯದಂತೆ ಸುತ್ತೋಲೆ ಹೊರಡಿಸಿದ್ದಾರೆ.ಈ ಸುತ್ತೋಲೆ ಹೊರಡಿಸಿದ 2 ವರ್ಷಗಳಿಂದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳನ್ನು ಘೋಷಣೆ ಮಾಡುವುದನ್ನೇ ನಿಲ್ಲಿಸಿದೆ. ಇದರಿಂದ ಸಂವಿಧಾನದ ಹಕ್ಕು ಕಸಿಯುವ ಕೆಲಸವಾಗುತ್ತಿದೆ ಮತ್ತು ಜನವಿರೋಧಿ ಸುತ್ತೋಲೆಗಳನ್ನು ತೆಗೆದುಹಾಕುವಂತೆ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೆ ಮಾಡಿ ಸ್ಲಂ ನಿವಾಸಿಗಳಿಗೆ ನೈತಿಕ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಮನವಿ ಸ್ವೀಕರಿಸಿ ಪ್ರತಿಕ್ರಿಯಿಸಿದ ತುಮಕೂರು ನಗರ ಶಾಸಕ ಜಿ.ಬಿ ಜ್ಯೋತಿಗಣೇಶ್ ಚುಕ್ಕೆ ಗುರುತು ಪ್ರಶ್ನೆ ಮತ್ತು ಸದನದಲ್ಲಿ ಗಮನ ಸೆಳೆಯುವ ಸೂಚಕದಲ್ಲಿ ಚರ್ಚೆ ಮಾಡುತ್ತೇನೆ ಎಂದರು.ಈ ಸಂದರ್ಭದಲ್ಲಿ ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ. ತಿರುಮಲಯ್ಯ, ಕೃಷ್ಣಮೂರ್ತಿ, ಮೋಹನ್ ಟಿ.ಆರ್. ಜಯಂತ್‌ಕುಮಾರ್, ಮುಂತಾದವರು ಪಾಲ್ಗೊಂಡಿದ್ದರು.