ಸಾರಾಂಶ
ಬೆಂಗಳೂರಿನಲ್ಲಿ ಕಳೆದ ವರ್ಷ ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಕಿಯ ನಾಲ್ಕು ವರ್ಷದ ಮಗು, ನಿಕಿತಾ ಸಿಂಘಾನಿಯಾ ಬಳಿಯೇ ಇರಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನವದೆಹಲಿ: ಬೆಂಗಳೂರಿನಲ್ಲಿ ಕಳೆದ ವರ್ಷ ಟೆಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಕಿಯ ನಾಲ್ಕು ವರ್ಷದ ಮಗು, ನಿಕಿತಾ ಸಿಂಘಾನಿಯಾ ಬಳಿಯೇ ಇರಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮೊಮ್ಮಗುವನ್ನು ತಮ್ಮ ಸುಪರ್ದಿಗೆ ವಹಿಸಬೇಕು ಎಂದು ಅತುಲ್ ಪೋಷಕರು ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಮಗುವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಸೂಚಿಸಿತ್ತು. ಕೋರ್ಟ್ ನಿರ್ದೇಶನದಂತೆ ಸಿಂಘಾನಿಯಾ ಮಗುವನ್ನು ಹಾಜರು ಪಡಿಸಿದ್ದರು.
ಬಳಿಕ ವಿಚಾರಣೆ ನಡೆಸಿದ ನ್ಯಾಯಾಲಯ ಅತುಲ್ ಪತ್ನಿಯ ಬಳಿಯೇ ಮಗು ಇರಲಿದೆ. ಏಕೆಂದರೆ ಬಾಲಕ ತನ್ನ ಅಜ್ಜ- ಅಜ್ಜಿಯೊಂದಿಗೆ ಕಡಿಮೆ ಸಮಯವನ್ನು ಕಳೆದಿದ್ದಾನೆ. ಮಗುವಿಗೆ ಅರ್ಜಿದಾರ ಅಜ್ಜಿಯೇ ಅಪರಿಚಿತರಂತಿದ್ದಾರೆ. ಹಾಗಾಗಿ ಮಗು ನಿಖಿತಾ ಸುಪರ್ದಿಯಲ್ಲಿ ಇರಲಿ’ ಎಂದಿದೆ. ಅಲ್ಲದೇ ಮುಂದಿನ ವಿಚಾರಣೆ ಸಂದರ್ಭದಲ್ಲಿ ಮಗುವನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದಿದೆ.