ಸಾರಾಂಶ
ನಾಪೋಕ್ಲು ಗ್ರಾಮ ಪಂಚಾಯಿತಿ 2024- 25ರ ಸಾಲಿನ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಪೋಕ್ಲು ಗ್ರಾಮ ಪಂಚಾಯಿತಿಯ 2024- 25ರ ಸಾಲಿನ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಹೇಳಿದರು.ಹಿಂದೆ ನಿಗದಿಪಡಿಸಿದಂತೆ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬಹಿರಂಗ ಹರಾಜು ಪಕ್ರಿಯೆ ಕುರಿತು ಮಾಹಿತಿ ನೀಡಿದ ಅವರು, ಮಾರುಕಟ್ಟೆ 19, 07, 470 ರು. ಗಳಿಗೆ ಹರಾಜಾಗಿದೆ. ವಾಹನ ಶುಲ್ಕ 3, 12, 700 ರು. ಗಳಿಗೆ, ಹಸಿ ಮೀನು ಒಂದನೇ ಮಳಿಗೆ 3,56,006 ರು. ಗಳಿಗೆ ಹಾಗೂ ಎರಡನೇ ಮಳಿಗೆ 3,26,978 ರು. ಗಳಿಗೆ ಹರಾಜಾಗಿದೆ. ಕುರಿಮಾಂಸ ಮಳಿಗೆ ಒಂದನ್ನು 1,72,280 ಗಳಿಗೆ ಎರಡನ್ನು 1,72,162 ರು. ಗಳಿಗೆ ಹರಾಜಾಗಿದೆ. ಕೋಳಿ ಮಾಂಸ ಆರು ಮಳಿಗೆಗಳಿಗೆ ಅವಕಾಶಗಳಿದ್ದು ಇದರಲ್ಲಿ ನಾಲ್ಕು ಮಳಿಗೆಗಳನ್ನು ತಲಾ 78,116 ರು. ಗಳಿಗೆ ಹರಾಜಾಗಿದೆ. ಉಳಿದ ಹರಾಜನ್ನು ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಹರಾಜು ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕಂಗಂಡ ಶಶಿ ಮಂದಣ್ಣ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೊಂದಕ್ಕಿ, ಸಿಬ್ಬಂದಿ ಪಾಲ್ಗೊಂಡಿದ್ದರು.