ಸಾರಾಂಶ
ನವಲಿ ಹೋಬಳಿಯ ಪ್ರತಿಯೊಂದು ರಸ್ತೆಯಲ್ಲಿ ಮರಳು ಆಕ್ರಮ ಸಾಗಾಟ ರಾಜಾರೋಷವಾಗಿ ನಡೆಯುತ್ತಿದೆ. ಹಗಲು-ರಾತ್ರಿಯನ್ನದೆ ನೂರಾರು ಲಾರಿ ಮರಳು ತುಂಬಿಕೊಂಡು ಹೋಗುತ್ತಿದ್ದರೂ ಆರ್‌ಟಿಒ ಅಥವಾ ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಅಕ್ರಮಕ್ಕೆ ಕಡಿವಾಣ ಹಾಕುತ್ತಿಲ್ಲ. ಹೀಗಾಗಿ ಮರಳು ದಂಧೆಕೋರರಿಗೆ ಭಯವಿಲ್ಲದಂತೆ ಆಗಿದೆ.
ನವಲಿ:
ನವಲಿ ಹೋಬಳಿಯಾದ್ಯಂತ ಮರಳು ಅಕ್ರಮ ಸಾಗಾಟ ಎಗ್ಗಿಲ್ಲದೆ ಸಾಗಿದ್ದರೂ ಕಡಿವಾಣ ಹಾಕಬೇಕಿದ್ದ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ.ನವಲಿ ಹೋಬಳಿಯ ಪ್ರತಿಯೊಂದು ರಸ್ತೆಯಲ್ಲಿ ಮರಳು ಆಕ್ರಮ ಸಾಗಾಟ ರಾಜಾರೋಷವಾಗಿ ನಡೆಯುತ್ತಿದೆ. ಹಗಲು-ರಾತ್ರಿಯನ್ನದೆ ನೂರಾರು ಲಾರಿ ಮರಳು ತುಂಬಿಕೊಂಡು ಹೋಗುತ್ತಿದ್ದರೂ ಆರ್‌ಟಿಒ ಅಥವಾ ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಅಕ್ರಮಕ್ಕೆ ಕಡಿವಾಣ ಹಾಕುತ್ತಿಲ್ಲ. ಹೀಗಾಗಿ ಮರಳು ದಂಧೆಕೋರರಿಗೆ ಭಯವಿಲ್ಲದಂತೆ ಆಗಿದೆ. ಎಲ್ಲಿಗೆ ಸಾಗಾಟ:
ನವಲಿಯಿಂದ ಮರಳು ತುಂಬಿಕೊಂಡು ಹೋಗುವ ದಂಧೆಕೋರರು ಆ ಮರಳನ್ನು ಹುಬ್ಬಳ್ಳಿ, ಬೆಂಗಳೂರು, ಬಳ್ಳಾರಿ, ಹೊಸಪೇಟೆ ಸೇರಿದಂತೆ ವಿವಿಧ ನಗರಗಳಿಗೆ ಟಿಪ್ಪರ್, ಲಾರಿ, ಟ್ರಕ್ ಗಳ ಮೂಲಕ ಸಾಗಿಸುತ್ತಾರೆ.ಅಧಿಕಾರಿಗಳದ್ದೇ ಕುಮ್ಮಕ್ಕು?:
ಕಾನೂನು ಬಾಹಿರವಾಗಿ ಮರಳು ಸಾಗಾಟ ನಿರಾಂತಕವಾಗಿ ನಡೆಯುತ್ತಿದ್ದರೂ, ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ, ನವಲಿ ಹೋಬಳಿಯಾದ್ಯಂತಹ ಪ್ರತಿ ದಿನ ಹಗಲು -ರಾತ್ರಿ ಎನ್ನದೇ 150ಕ್ಕೂ ಹೆಚ್ಚು ಲಾರಿಗಳು ಮರಳು ಸಾಗಾಟ ನಡೆಸುತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನಕ್ಕೆ ಜಾರಿದ್ದಾರೆ. ರಾಜಕೀಯ ಹಾಗೂ ಅಧಿಕಾರಿ ವರ್ಗದ ಪ್ರಭಾವವು ಅಕ್ರಮ ದಂಧೆಯ ಬೆನ್ನೆಲುಬಾಗಿ ನಿಂತಿವೆಯೇ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಮನೆ ಮಾಡಿದೆ.