ಸಾರಾಂಶ
ಮಾಲೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಶಾಸಕ ಕೆ.ವೈ.ನಂಜೇಗೌಡರು ಸುಮಾರು ೧೦೦ ಎಕರೆಗೂ ಹೆಚ್ಚು ಬಫರ್ ಜೋನ್‌ನಲ್ಲಿ ಅಕ್ರಮವಾಗಿ ಗಣಿಗಾರಿಕೆಯ ಸಾಮ್ರಾಜ್ಯ ನಿರ್ಮಿಸಿಕೊಂಡು ಸುಮಾರು ೩ ಸಾವಿರ ಕೋಟಿ ರು.ಗಳ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅಧಿಕಾರಿಗಳು ಉಪ ಲೋಕಾಯುಕ್ತರ ಆದೇಶವನ್ನು ಪಾಲನೆ ಮಾಡುತ್ತಿಲ್ಲ
ಕನ್ನಡಪ್ರಭ ವಾರ್ತೆ ಕೋಲಾರಮಾಲೂರು ತಾಲೂಕಿನ ಟೇಕಲ್ ಹೋಬಳಿಯ ತಿಮ್ಮಾನಾಯಕನಹಳ್ಳಿಯ ಆಗ್ರಹಾರ ಸರ್ವೇ ಸಂಖ್ಯೆ ೩೫ರಲ್ಲಿ ಬಂಡೆ ಇರುವ ಜಾಗದಲ್ಲಿ ಯಶ್ವರ್ಯ ಕ್ರಷರ್ ಘಟಕ ೪ ಎಕರೆ ಪ್ರದೇಶದಲ್ಲಿ ೨೦ ಅಡಿ ಎತ್ತರದ ೧೫ ಲಕ್ಷ ಟನ್‌ಗೂ ಹೆಚ್ಚು ಪ್ರಮಾಣದ ಬಂಡೆ ಕಬಳಿಸಿ ೨೩ ಸಾವಿರ ಟನ್ ರಾಯಲ್ಟಿ ಮಾತ್ರ ಸರ್ಕಾರಕ್ಕೆ ಪಾವತಿಸಿ ಸುಮಾರು ೫೦ ಕೋಟಿ ರು.ಗಳ ಹಗರಣ ನಡೆಸಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ನವೀನ್ ಕುಮಾರ್ ಆರೋಪಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಲೂರು ತಾಲ್ಲೂಕಿನ ವ್ಯಾಪ್ತಿಯಲ್ಲಿ ಶಾಸಕ ಕೆ.ವೈ.ನಂಜೇಗೌಡರು ಸುಮಾರು ೧೦೦ ಎಕರೆಗೂ ಹೆಚ್ಚು ಬಫರ್ ಜೋನ್‌ನಲ್ಲಿ ಅಕ್ರಮವಾಗಿ ಗಣಿಗಾರಿಕೆಯ ಸಾಮ್ರಾಜ್ಯ ನಿರ್ಮಿಸಿಕೊಂಡು ಸುಮಾರು ೩ ಸಾವಿರ ಕೋಟಿ ರು.ಗಳ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.ವಿದ್ಯುತ್ ಕಡಿತ ಮಾಡಿಲ್ಲ
ಈ ಸಂಬಂಧವಾಗಿ ಗಣಿ-ಭೂ ವಿಜ್ಞಾನ ಇಲಾಖೆ, ಪರಿಸರ ಇಲಾಖೆ ಹಾಗೂ ಡಿಸಿಗೆ ದೂರು ನೀಡಿದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಲೋಕಾಯುಕ್ತ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಉಪಲೋಕಾಯುಕ್ತ ನಿವೃತ್ತ ನ್ಯಾಯಾಮೂರ್ತಿ ವೀರಪ್ಪ ಸ್ಥಳ ಪರಿಶೀಲನೆ ನಡೆಸಿ ೨೭ ಅಕ್ರಮ ಕ್ರಷರ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ವಿದ್ಯುತ್ ಸಂರ್ಪಕ ಅಕ್ರಮ ಕ್ರಷರ್‌ಗಳಿಗೆ ಕಡಿತಗೊಳಿಸಲು ಸೂಚನೆ ನೀಡಿದ್ದರೂ ಸಹ ಯಾವೂದೇ ಕ್ರಮಕೈಗೊಳ್ಳದೆ ಇರುವುದು ಕಂಡರೆ ಕಾನೂನಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ವಿಷಾದಿಸಿದರು. ಸಾಮಾಜಿಕ ಹೋರಾಟಗಾರ ಡಿ.ಮುನೇಶ್ ಮಾತನಾಡಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮಾನವ ಹಕ್ಕುಗಳಿಗೂ ದೂರು ನೀಡಲಾಗುವುದು. ಅಕ್ರಮ ಗಣಿಗಾರಿಕೆಗೆ ಮಾಲೂರಿನ ಶಾಸಕ ನಂಜೇಗೌಡ ಬಿಗ್‌ಬಾಸ್ ಆಗಿದ್ದಾರೆ ಎಂದು ಆರೋಪಿಸಿದರು.