ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು ಮಲೆ ಮಾದೇಶ್ವರ ಬೆಟ್ಟದಲ್ಲಿ 2024ರ ವಾರ್ಷಿಕ ವಿಶೇಷ ಹಬ್ಬ ಹಾಗೂ ಜಾತ್ರಾ ದಿನಗಳಲ್ಲಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕೊಠಡಿಗಳು ಲಭ್ಯ ಇಲ್ಲದಿರುವ ಬಗ್ಗೆ ಕಾರ್ಯದರ್ಶಿ ಎಇ ರಘು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ 2024ರ ಇಸವಿಯಲ್ಲಿ ನಡೆಯಲಿರುವ ಜಾತ್ರಾ ವಿಶೇಷ ದಿನಗಳಾದ ಮಹಾಲಯ ಅಮಾವಾಸ್ಯೆ ದಸರಾ ಹಬ್ಬದ ವಿಶೇಷ ದಿನ ಹಾಗೂ ದೀಪಾವಳಿ ಹಬ್ಬದ ಜಾತ್ರಾ ಮಹೋತ್ಸವ ಮತ್ತು ಕಾರ್ತಿಕ ಸೋಮವಾರ ನಡೆಯಲಿರುವ ವಿಶೇಷ ಪೂಜೆ ಕಾರ್ಯಕ್ರಮಗಳ ದಿನಗಳಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ತಮಿಳುನಾಡಿನಿಂದಲೂ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.ಬರುವ ಭಕ್ತರು, ದಾನಿಗಳು ಸಹ ಸ್ವಂತ ಕುಟೀರ ಯೋಜನೆ ರೀತಿ ಭಕ್ತಾದಿಗಳೇ ಕೊಠಡಿ ಕಾಯ್ದಿರಿಸುವ ಮೂಲಕ ಜೊತೆಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕೊಠಡಿಗಳನ್ನು ವಿಶೇಷ ದಿನಗಳ ಭದ್ರತೆಗೆ ರಾಜ್ಯದ ವಿವಿಧಡೆ ಹಾಗೂ ವಿವಿಧ ಜಿಲ್ಲೆಗಳಿಂದ ಬರುವ ಅಧಿಕಾರಿ ಸಿಬ್ಬಂದಿಗೆ ಮತ್ತು ಪೊಲೀಸ್ ಇಲಾಖೆಗೆ, ಆರೋಗ್ಯ ಇಲಾಖೆಗೆ, ವಿದ್ಯುತ್ ಇಲಾಖೆ, ಸಾರಿಗೆ ಇಲಾಖೆ ಸೇರಿದಂತೆ ಸ್ವಚ್ಛತೆಗೆ ಆಗಮಿಸುವ ಸಿಬ್ಬಂದಿಗೆ ಮತ್ತು ವಿವಿಧ ಗಣ್ಯರಿಗೆ ಶಿಫಾರಸ್ಸು ಆದ್ಯತೆ ಲಭ್ಯತೆ ಬಗ್ಗೆ ಕೊಠಡಿಗಳನ್ನು ವಿತರಿಸಬೇಕಾಗಿರುತ್ತದೆ. ಭಕ್ತಾದಿಗಳಿಗೆ ಬಾಡಿಗೆ ಮೇರೆಗೆ ವಿತರಿಸಲು ಕೊಠಡಿಗಳು ಖಾಲಿ ಇಲ್ಲದೆ ಇರುವುದರಿಂದ ಕೆಳಕಂಡ ದಿನಾಂಕಗಳಂದು ಶ್ರೀ ಕ್ಷೇತ್ರದಲ್ಲಿ ಕೊಟ್ಟಡಿ ಲಭ್ಯವಿಲ್ಲದಿರುವ ಬಗ್ಗೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು ತಿಳಿಸಿದ್ದಾರೆ .
ಕೊಠಡಿಗಳು ಲಭ್ಯವಿಲ್ಲದಿರುವ ಬಗ್ಗೆ ದೃಡೀಕರಿಸಿರುವ ದಿನಾಂಕಗಳು:ಮಹಾಲಯ ಅಮಾವಾಸ್ಯೆ ಸೆ.30, ಅ.3, ದಸರಾ ವಿಶೇಷ ದಿನಗಳಾದ 10,13 ದೀಪಾವಳಿ ಜಾತ್ರೆ ಅ.29 ರಿಂದ ನ.2ಕಾರ್ತಿಕ ಸೋಮವಾರಗಳು ಸೇರಿದಂತೆ ಎಣ್ಣೆ ಮಜ್ಜನ ಸೇವೆಗಳು ಸೇರಿದಂತೆ ಅಮಾವಾಸ್ಯೆ ದಿನಗಳಲ್ಲಿ 1ನೇ ಕಾರ್ತಿಕ ಸೋಮವಾರ ನ.3 ರಿಂದ 4ವರೆಗೆ, 2ನೇ ಕಾರ್ತಿಕ ಸೋಮವಾರ ನ.10 ರಿಂದ 11 ವರೆಗೆ, 3ನೇ ಕಾರ್ತಿಕ ಸೋಮವಾರ ನ.17 ರಿಂದ 18 ವರಗೆ, 4ನೇ ಕಾರ್ತಿಕ ಸೋಮವಾರ ನ.24 ರಿಂದ 25 ವರೆಗೆ ಎಣ್ಣೆ ಮಜ್ಜನ ಸೇವೆ ಹಾಗೂ ಅಮಾವಾಸ್ಯೆ ನ.29 ರಿಂದ ಡಿ.2 ವರೆಗೆ ನಡೆಯಲಿರುವ ವಿಶೇಷ ಜಾತ್ರಾ ಹಬ್ಬ ಅಮಾವಾಸ್ಯೆ ವಿಶೇಷ ದಿನಗಳಲ್ಲಿ ಶ್ರೀ ಕ್ಷೇತ್ರದಲ್ಲಿ ಕೊಠಡಿಗಳು ಲಭ್ಯವಿಲ್ಲದಿರುವ ಬಗ್ಗೆ ತಿಳಿಸಿದ್ದಾರೆ.