ಭಾರತದಲ್ಲಿ 20 ಲಕ್ಷ ವ್ಯಕ್ತಿಗಳಲ್ಲಿ ಆಟಿಸಂ: ಡಾ.ಹೇಮಾವತಿ

| Published : Apr 23 2025, 12:32 AM IST

ಸಾರಾಂಶ

ನರರೋಗದ ಬೆಳವಣಿಗೆಯಲ್ಲಿನ ನ್ಯೂನತೆ, ಸಾಮಾಜಿಕ ನಡವಳಿಕೆ ಮತ್ತು ಸಂವಹನ ಕೊರತೆಯನ್ನು ಆಟಿಸಂ ಎಂದು ಗುರುಸಿಸಲಾಗುತ್ತದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಮನೋವೈದ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಎಚ್.ಹೇಮಾವತಿ ಹೇಳಿದ್ದಾರೆ.

- "ಆಟಿಸಂ ಮಕ್ಕಳನ್ನು ಬಲಶಾಲಿ ಮಾಡೋಣ " ವಿಷಯ ಕುರಿತು ಮಾಹಿತಿ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ನರರೋಗದ ಬೆಳವಣಿಗೆಯಲ್ಲಿನ ನ್ಯೂನತೆ, ಸಾಮಾಜಿಕ ನಡವಳಿಕೆ ಮತ್ತು ಸಂವಹನ ಕೊರತೆಯನ್ನು ಆಟಿಸಂ ಎಂದು ಗುರುಸಿಸಲಾಗುತ್ತದೆ ಎಂದು ಜೆಜೆಎಂ ವೈದ್ಯಕೀಯ ಕಾಲೇಜಿನ ಮನೋವೈದ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಎಚ್.ಹೇಮಾವತಿ ಹೇಳಿದರು.

ನಗರದ ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಇತ್ತೀಚೆಗೆ ವಿವೇಕ್ ಪೋಷಕರ ಆರೋಗ್ಯ ಕಾರ್ಯಾಗಾರದಡಿ ಆಯೋಜಿಸಿದ "ಆಟಿಸಂ ಮಕ್ಕಳನ್ನು ಬಲಶಾಲಿ ಮಾಡೋಣ " ವಿಷಯ ಕುರಿತು ಅವರು ಮಾಹಿತಿ ನೀಡಿದರು.

ಆಟಿಸಂ ಸ್ಟಕ್ಟçಮ್ ಡಿಸಾರ್ಡರ್, ನರ ಬೆಳವಣಿಗೆಯ ಸ್ಥಿತಿಗಳ ಗುಂಪನ್ನು ವಿವರಿಸುವ ವೈದ್ಯಕೀಯ ಪದವಾಗಿದೆ. ಆಟಿಸಂ ಅಸ್ವಸ್ಥತೆ ಪತ್ತೆ ಹಚ್ಚುವಲ್ಲಿ, ಆರೋಗ್ಯ ವೃತ್ತಿಪರರು ವ್ಯಾಪಕವಾಗಿ ಗುರುತಿಸಲ್ಪಟ್ಟ ಕೈಪಿಡಿಗಳಲ್ಲಿ ವಿವರಿಸಿರುವ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸುತ್ತಾರೆ. ಡಯಾಗ್ನಸ್ಟಿಕ್ ಮತ್ತು ಸ್ಟ್ಯಾಟಿಸ್ಟಿಕಲ್ ಮ್ಯಾನುಯಲ್ ಆಫ್ ಮೆಂಟಲ್ ಡಿಸಾರ್ಡರ್ಸ್ ಒಂದು ಪ್ರಮುಖ ಉಲ್ಲೇಖವಾಗಿದೆ. ಗಮನಿಸಿದ ನಡವಳಿಕೆಗಳು ಮತ್ತು ಬೆಳವಣಿಗೆಯ ಮಾದರಿಗಳನ್ನು ನಿಕಟಪೂರ್ವವಾಗಿ ನಿರ್ಣಯಿಸುವ ಮೂಲಕ ಆಟಿಸಮ್ ಗುರುತಿಸುವಲ್ಲಿ ವೃತ್ತಿಪರರಿಗೆ ಸಹಾಯ ಮಾಡುವ ಸಮಗ್ರ ಮಾರ್ಗಸೂಚಿಗಳನ್ನು ಕೈಪಿಡಿ ಒದಗಿಸುತ್ತದೆ ಎಂದರು.

2025ರಲ್ಲಿ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ಪ್ರಕಾರ 68 ಮಕ್ಕಳಲ್ಲಿ ಒಬ್ಬರಿಗೆ ಆಟಿಸಂ ಇರುವುದು ಪತ್ತೆಯಾಗಿದೆ. ಭಾರತದಲ್ಲಿ ಸುಮಾರು 20 ಲಕ್ಷ ವ್ಯಕ್ತಿಗಳಿಗೆ ಆಟಿಸಂ ಇರುವುದು ಪತ್ತೆಯಾಗಿದೆ. ಹೆಣ್ಣುಮಕ್ಕಳಿಗಿಂತ ಗಂಡುಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಮಕ್ಕಳು ಒಂದು ವಯಸ್ಸು ತುಂಬಿದರೂ ಅವರ ಹೆಸರು ಕರೆದಾಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. 14 ತಿಂಗಳು ಇರುವಾಗ ಯಾವುದೇ ವಸ್ತುಗಳನ್ನು ನೋಡಿದರೂ ಕುತೂಹಲ ತೋರುವುದಿಲ್ಲ. 18 ತಿಂಗಳು ಆದರೂ ಆಟವಾಡಲು ಯಾವುದೇ ಆಸಕ್ತಿ ತೋರುವುದಿಲ್ಲ. ಮಗುವಿಗೆ ಕಣ್ಣಿಗೆ ಕಣ್ಣಿಟ್ಟು ನೋಡಿದಾಗ ಅದು ನಿಮ್ಮನ್ನು ನೋಡುವುದಿಲ್ಲ. ತಾಯಿಗೆ ಸ್ವಲ್ಪ ಅನುಮಾನ ಬರಬಹುದು. ಇವು ಆಟಿಸಂಗೆ ಕಾರಣವಾಗಬಹುದು. ಅಂತಹ ಸಂದರ್ಭ ವೈದ್ಯರ ಸಲಹೆ ಅತ್ಯಗತ್ಯ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಮಕ್ಕಳ ಆಸ್ಪತ್ರೆ ನಿರ್ದೇಶಕ ಡಾ. ಗುರುಪ್ರಸಾದ್, ಮಕ್ಕಳ ತಜ್ಞ ಡಾ.ಸುರೇಶ ಬಾಬು, ವ್ಯವಸ್ಥಾಪಕ ಸಿದ್ದೇಶ್ವರ ಗುಬ್ಬಿ, ಡಾ.ರಮೇಶ, ಡಾ.ಮೃತ್ಯುಂಜಯ, ಡಾ.ಮಧು ಎಸ್.ಪೂಜಾರ್, ಡಾ.ರೇವಪ್ಪ, ಮಕ್ಕಳ ಪೋಷಕರು, ನರ್ಸಿಂಗ್ ವಿದ್ಯಾರ್ಥಿಗಳು, ಆಸ್ಪತ್ರೆ ಸಿಬ್ಬಂದಿ ಇತರರು ಇದ್ದರು.

- - -

-21ಕೆಡಿವಿಜಿ45, 46:

ದಾವಣಗೆರೆಯಲ್ಲಿ ನಡೆದ ಆರೋಗ್ಯ ಕಾರ್ಯಾಗಾರದಲ್ಲಿ ಡಾ. ಎಚ್.ಹೇಮಾವತಿ ಆಟಿಸಂ ಮಕ್ಕಳನ್ನು ಬಲಶಾಲಿ ಮಾಡೋಣ ಕುರಿತು ಉಪನ್ಯಾಸ ನೀಡಿದರು.