ಆಟೋ ಚಾಲಕರ ಕನ್ನಡಾಭಿಮಾನ ಅನನ್ಯವಾದುದು: ಪಿಎಸ್ಐ ಭರತ್ ರೆಡ್ಡಿ ಅಭಿಪ್ರಾಯAuto drivers'' love for Kannada is unique: PSI Bharat Reddy

| Published : Nov 07 2025, 01:45 AM IST

ಆಟೋ ಚಾಲಕರ ಕನ್ನಡಾಭಿಮಾನ ಅನನ್ಯವಾದುದು: ಪಿಎಸ್ಐ ಭರತ್ ರೆಡ್ಡಿ ಅಭಿಪ್ರಾಯAuto drivers'' love for Kannada is unique: PSI Bharat Reddy
Share this Article
  • FB
  • TW
  • Linkdin
  • Email

ಸಾರಾಂಶ

ನಾಲ್ಕನೇ ವರ್ಷದ ಕನ್ನಡ ರಾಜ್ಯೋತ್ಸವ ಅಂಗವಾಗಿ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಕನ್ನಡ ಬಾವುಟದೊಂದಿಗೆ ಸಿಂಗಾರಗೊಂಡಿದ್ದ ಆಟೋ ಮೆರವಣಿಗೆ ಚಾಲಕರಿಂದ ನಡೆಯಿತು. ಜೊತೆಗೆ ಸಂಘದ ವತಿಯಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಯಿತು.

ಕನ್ನಡಪ್ರಭವಾರ್ತೆ ನುಗ್ಗೇಹಳ್ಳಿ

ಕರ್ನಾಟಕದಲ್ಲಿ ಕನ್ನಡ ನಾಡು, ನುಡಿ ಉಳಿಯಲು ಆಟೋ ಚಾಲಕರು ತೋರಿಸುತ್ತಿರುವ ಕನ್ನಡ ಅಭಿಮಾನವೇ ಕಾರಣವೆಂದು ನುಗ್ಗೇಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಭರತ್ ರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಹೋಬಳಿ ಕೇಂದ್ರದ ಶ್ರೀ ನುಗ್ಗೇಳ್ಳಮ್ಮ ಗ್ರಾಮ ದೇವತೆ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ 4ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಇತ್ತೀಚಿನ ವರ್ಷಗಳಲ್ಲಿ ಬೇರೆ ರಾಜ್ಯಗಳ ಅನ್ಯಭಾಷೆಕಾರರ ವಲಸೆಯಿಂದ ಕನ್ನಡ ಭಾಷೆಗೆ ತೊಡಕಾಗುತ್ತಿದ್ದು, ಆದರೆ ಆಟೋ ಚಾಲಕರ ಭಾಷಾಭಿಮಾನದಿಂದ ಕರ್ನಾಟಕದಲ್ಲಿ ಕನ್ನಡ ಭಾಷೆ ಗಟ್ಟಿಯಾಗಿ ಉಳಿಯಲು ಸಾಧ್ಯವಾಗಿದೆ ಎಂದರು.

ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರವೀಣ್ ಮಾತನಾಡಿ, ಕನ್ನಡ ನಾಡು, ನುಡಿ ಮೇಲಿರುವ ಆಟೋ ಚಾಲಕರ ಭಾಷಾಭಿಮಾನವನ್ನು ನಾವೆಲ್ಲರೂ ಗೌರವಿಸಬೇಕಾಗಿದೆ ಎಂದರು.

ನಾಲ್ಕನೇ ವರ್ಷದ ಕನ್ನಡ ರಾಜ್ಯೋತ್ಸವ ಅಂಗವಾಗಿ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಕನ್ನಡ ಬಾವುಟದೊಂದಿಗೆ ಸಿಂಗಾರಗೊಂಡಿದ್ದ ಆಟೋ ಮೆರವಣಿಗೆ ಚಾಲಕರಿಂದ ನಡೆಯಿತು. ಜೊತೆಗೆ ಸಂಘದ ವತಿಯಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಲೋಕೇಶ್, ಆದಿಲ್ ಪಾಶ , ಕೆಂಪರಾಜ್ , ರಘುನಾಥ್, ಜಬಿ , ಶಿವಕುಮಾರ್, ಸ್ವಾಮಿ , ರಫೀಕ್, ಶಬರಿ,ಸತೀಶ್ ಗೌಡ, ಮನೋಜ್, ಶ್ರೀನಿವಾಸ್, ತೇಜಸ್, ರಫೀಕ್ ಇಸ್ಮೈಲ್, ಶೋಯಬ್ ಪಾಷಾ, ಆನಂದ, ಕೃಷ್ಣಮೂರ್ತಿ, ಪುನೀತ್, ಧರಣೀಶ , ಅಭಿಲಾಶ್ ಮಹೇಶ್, ಜಾವೇದ್ ಪಾಷ, ಜಯರಾಮ, ನಾಗೇಶ್, ಬಸವರಾಜ್, ಇಂಚರ, ಸೃಜನ್, ರೋಹಿತ್, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.