ಸಾರಾಂಶ
ನರಸಿಂಹರಾಜಪುರ, ಆಟೋ ಚಾಲಕರು ಡ್ರೈವಿಂಗ್ ಲೈಸನ್ಸ್ ಹಾಗೂ ಇತರ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಗುರುದತ್ ಕಾಮತ್ ತಿಳಿಸಿದರು.
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಆಟೋ ಚಾಲಕರು ಡ್ರೈವಿಂಗ್ ಲೈಸನ್ಸ್ ಹಾಗೂ ಇತರ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು ಎಂದು ಸರ್ಕಲ್ ಇನ್ಸ್ ಪೆಕ್ಟರ್ ಗುರುದತ್ ಕಾಮತ್ ತಿಳಿಸಿದರು.ಶನಿವಾರ ಬಸ್ ನಿಲ್ದಾಣದಲ್ಲಿ ಆಟೋ ಚಾಲಕರಿಗೆ ಸಂಚಾರಿ ನಿಯಮದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಟೋದಲ್ಲಿ ಹೆಚ್ಚು ಜನರನ್ನು ತುಂಬಿಕೊಂಡು ಹೋಗಬಾರದು. ವೇಗದಿಂದ ಆಟೋ ಚಲಾಯಿಸ ಬಾರದು. ಅಪಘಾತವಾದರೆ ನಿಮ್ಮ ಕುಟುಂಬಗಳಿಗೆ ತೊಂದರೆಯಾಗುತ್ತದೆ. ಮುಖ್ಯವಾಗಿ ವಾಹನದ ಇನ್ಸೂರೆನ್ಸ್ ವಾಯಿದೆ ಮುಗಿದಿದೆಯೇ ಎಂಬುದನ್ನು ಗಮನಿಸಿಬೇಕು. ಕಾಲಕ್ಕೆ ಸರಿಯಾಗಿ ಎಫ್.ಸಿ ಮಾಡಿಸಬೇಕು ಎಂದರು.
ಎಎಸ್‌ಐ ಜಜ್ಯೋತಿ ಮಾತನಾಡಿ, ಆಟೋ ಚಾಲಕರು ರಾತ್ರಿ ವೇಳೆ ಹಾಗೂ ಮುಂಜಾನೆ ಬರುವ ಪ್ರಯಾಣಿಕರನ್ನು ಗಮನಿಸಿ ಎಲ್ಲಿಂದ ಬಂದಿರುವುದು ಹಾಗೂ ಎಲ್ಲಿಗೆ ಹೋಗುವುದನ್ನು ವಿಚಾರಿಸಬೇಕು. ಇತ್ತೀಚೆಗೆ ನಡೆಯುವ ಕಳ್ಳತನ, ದರೋಡೆ ಹಾಗೂ ಇತರ ಕ್ರೈಮ್ ಗಳನ್ನು ತಡೆಯಲು ಸಹಾಯವಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಆಟೋ ಸಂಘದ ಪದಾಧಿಕಾರಿಗಳು ಹಾಗೂ ಆಟೋ ಚಾಲಕರು ಇದ್ದರು.