ಸಾರಾಂಶ
ವೃತ್ತಿಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗಿದ್ದು ,ಛಾಯಾಗ್ರಾಹಕರು ತಮ್ಮ ಕೌಶಲ್ಯ ಅಭಿವೃದ್ಧಿಯಿಂದ ಗ್ರಾಹಕರನ್ನು ಸೆಳೆಯಬೇಕು, ವಿನಾಕಾರಣ ಪೈಪೋಟಿಗೆ ಮುಗಿಬಿದ್ದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲಾಗದು, ಕೌಶಲ್ಯತೆಯಲ್ಲಿ ಪೈಪೋಟಿ ಮಾಡುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ತಿಳಿಸಿದರು.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಛಾಯಾಗ್ರಾಹಕರು ತಮ್ಮ ವೃತ್ತಿಯ ಜೊತೆಗೆ ಸಂಘಟಿತರಾಗಬೇಕು, ಆಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಆವುಲನ್ನ ಹೇಳಿದರು.ನಗರದ ನದಿ ದಡದ ಶ್ರೀ ಪ್ರಸನ್ನಾಂಜನೇಯ ಕಲ್ಯಾಣ ಮಂಟಪದಲ್ಲಿ ಛಾಯಾಗ್ರಾಹಕರು ಚಿಕ್ಕಬಳ್ಳಾಪುರ ಜಿಲ್ಲಾ ಸಂಘದಿಂದ ನಡೆಯಲಿರುವ ವಿಶ್ವ ಛಾಯಾ ಚಿತ್ರಗ್ರಾಹಕರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ಛಾಯಾಗ್ರಾಹಕರ ಹಬ್ಬ ಕಾರ್ಯಕ್ರಮಕ್ಕೆ ತೆರಳಲು ವಿಶೇಷ ಸಭೆ ನಡೆಸಿ, ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿ ಮಾತನಾಡಿರು.
ಛಾಯಾಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಸಾಮೂಹಿಕವಾಗಿ ತೆರಳಲು ಸಹಕರಿಸುವಂತೆ ಕೋರಿದರು.ಕೌಶಲ್ಯ ಅಭಿವೃದ್ಧಿ:
ವೃತ್ತಿಯಲ್ಲಿ ಸ್ಪರ್ಧಾತ್ಮಕತೆ ಹೆಚ್ಚಾಗಿದ್ದು ,ಛಾಯಾಗ್ರಾಹಕರು ತಮ್ಮ ಕೌಶಲ್ಯ ಅಭಿವೃದ್ಧಿಯಿಂದ ಗ್ರಾಹಕರನ್ನು ಸೆಳೆಯಬೇಕು, ವಿನಾಕಾರಣ ಪೈಪೋಟಿಗೆ ಮುಗಿಬಿದ್ದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಲಾಗದು, ಕೌಶಲ್ಯತೆಯಲ್ಲಿ ಪೈಪೋಟಿ ಮಾಡುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದುವಂತೆ ತಿಳಿಸಿದರು.ಛಾಯಾಗ್ರಹಕರು ಸಂಘದ ಸಭೆಗಳಲ್ಲಿ ಭಾಗವಹಿಸುವ ಮೂಲಕ ವೃತ್ತಿ ಪರ ಸಮಸ್ಯೆಗಳನ್ನು ವಿನಿಮಯ ಮಾಡಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗುವುದರ ಜೊತೆಗೆ ಪರಸ್ಪರ ಸೌಹಾರ್ದತೆ ವೃದ್ಧಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಸಂಘದ ಉಪಾಧ್ಯಕ್ಷ ನಂಜುಂಡಬಾಬು, ಸಂಘ ಕಾರ್ಯದರ್ಶಿ ಉಮಾಶಂಕರ್, ಖಜಾಂಚಿ ರವಿಚಂದ್ರ, ಗೌರವಾಧ್ಯಕ್ಷ ಪಣಿಲ್ ಕುಮಾರ್, ಹಿರಿಯ ಛಾಯಾಗ್ರಾಹಕರಾದ ಅಂಜಿನಪ್ಪ, ಸುರೇಶ್, ಹರೀಶ್, ದೇವಿಮಂಜುನಾಥ್, ಜಯರಾಮೇಗೌಡ, ಶ್ರೀಕಂಠ, ನಾಗರಾಜ್ ಶೆಟ್ಟಿ ಸೇರಿ ಛಾಯಾಗ್ರಹಕರು ಭಾಗವಹಿಸಿದ್ದರು.